ತಿಂಗಳ ಬೆಳಕು

Author : ಶಾಂತಾರಾಮ ಸೋಮಯಾಜಿ

Pages 158

₹ 40.00
Year of Publication: 2003
Published by: ಪುಸ್ತಕ ನಿಧಿ
Address: ಲಕ್ಷ್ಮೀ ಸದನ, ಗಾವಳಿ, ಹಳ್ಳಾಡಿ-ಹರ್ಕಾಡಿ ಅಂಚೆ, ಕುಂದಾಪುರ

Synopsys

‘ತಿಂಗಳ ಬೆಳಕು’ ಶಾಂತಾರಾಮ ಸೋಮಯಾಜಿ ಅವರ ಕಥಾಸಂಕಲನವಾಗಿದೆ. ಕ್ರೌರ್ಯದ ಸುತ್ತ ಹೆಣೆದ ಇಲ್ಲಿನ ಒಂದು ಕಥೆ ''ಎಂದೂ ಬೆಳೆಯದ ಹುಡುಗ' ಮನ ಕಲಕುವಂತಿದ್ದು ಎಂದೂ ತೊಲಗದ ಮೌಡ್ಯಕ್ಕೆ ದನಿಯಾಗಿ ಎಂದೆಂದಿಗೂ ಮರೆಯಲಾಗದ ಕಥೆಯಾಗಿ ನಮ್ಮೊಂದಿಗಿರುತ್ತದೆ.

About the Author

ಶಾಂತಾರಾಮ ಸೋಮಯಾಜಿ

ಶಾಂತಾರಾಮ ಸೋಮಯಾಜಿ ಅವರು ಲೇಖಕರು. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್.  ...

READ MORE

Reviews

ಹೊಸತು-2004- ಮೇ

ಮೋಹಕ ಭಾಷೆ - ಮಂಗಳೂರು ಕನ್ನಡದಲ್ಲಿ ಇಲ್ಲಿನ ಕಥೆಗಳನ್ನೋದುವುದೇ ಒಂದು ಸೊಗಸು. ಪ್ರಖರ ಸೂರ್ಯನ ಬೆಳಕನ್ನು ಚಂದ್ರ ತಣಿಸಿಕೊಟ್ಟಂತೆ ಸೋಮಯಾಜಿ ತನ್ನ ಕಥೆಗಳಲ್ಲಿನ ತೀಕ್ಷ್ಯ ಸಾಮಾಜಿಕ ತುಮುಲಗಳನ್ನು ತಿಂಗಳ ಬೆಳಕಿನಂತೆ ಆವೇಶವಿಲ್ಲದೆ ಪರಿಚಯಿಸಬಲ್ಲರು. ಕ್ರೌರ್ಯದ ಸುತ್ತ ಹೆಣೆದ ಇಲ್ಲಿನ ಒಂದು ಕಥೆ ''ಎಂದೂ ಬೆಳೆಯದ ಹುಡುಗ' ಮನ ಕಲಕುವಂತಿದ್ದು ಎಂದೂ ತೊಲಗದ ಮೌಡ್ಯಕ್ಕೆ ದನಿಯಾಗಿ ಎಂದೆಂದಿಗೂ ಮರೆಯಲಾಗದ ಕಥೆಯಾಗಿ ನಮ್ಮೊಂದಿಗಿರುತ್ತದೆ. ವೈವಿಧ್ಯಮಯ ಬದುಕಿನ ನೈಜ ಅನಾವರಣ.

Related Books