ಕುಮಟೆಗೆ ಬಂದಾ ಕಿಂದರಿಜೋಗಿ

Author : ಯಶವಂತ ಚಿತ್ತಾಲ

Pages 172

₹ 145.00
Year of Publication: 2012
Published by: ಪ್ರಿಸಂ ಬುಕ್ಸ್

Synopsys

ಚಿತ್ತಾಲರ ಕತೆಗಳ ಏಳನೆಯ ಸಂಕಲನ ’ಕುಮಟೆಗೆ ಬಂದಾ ಕಿಂದರಿಜೋಗಿ’ (1997). ಚಿತ್ತಾಲರ ಕತೆಗಳ ಪ್ರಮುಖ ಗುಣವಾದ ಸತ್ಯದ ಅನ್ವೇಷಣೆಯು ಈ ಸಂಕಲನದಲ್ಲಿಯೂ ಮುಂದುವರೆದಿದೆ.

ಈ ಸಂಕಲನದ ಬಗ್ಗೆ ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಅವರು ಹೀಗೆ ಬರೆದಿದ್ದಾರೆ-

ಕತೆ ಕಾದಂಬರಿಗಳನ್ನೇ ಅವರು ತಮ್ಮ ಅನ್ವೇಷಣೆಯ ಮಾಧ್ಯಮವನ್ನಾಗಿ ಆಯ್ದುಕೊಂಡುದಕ್ಕೆ ಕಾರಣ ಅವರೇ ಸೂಚಿಸುವಂತೆ ಸತ್ಯದ ರಹಸ್ಯಮಯತೆ ಹಾಗೂ ಸಾಪೇಕ್ಷತೆ. ಈ ಸಂಗ್ರಹದ 'ಮೊನ್ನ ಶಿನ್ನಾ' ಕತೆಯ ನಿವೇದಕ ಹೇಳುವಂತೆ ವಾಸ್ತವ ಸತ್ಯ ಎನ್ನುವುದು ಅಷ್ಟೇ ನಮಗೂ ಸೇರಿದ್ದು. ನಾವು ಎಲ್ಲರಿಗೂ ಒಂದೇ ಅಲ್ಲ. ಅದು ವಾಸ್ತವಕ್ಕೆಷ್ಟೋ ತಿಳಿದುಕೊಂಡ ಹಾಗೇ ಅದು ಇರುತ್ತದೆ. ಹೀಗಾಗಿ ಚಿತ್ತಾಲರು ಈಗೀಗ ಒಂದೇ ಕತೆ ಹೇಳಲು ಇಷ್ಟಪಡುವುದಿಲ್ಲ. ಒಂದು ಕತೆ ಹೇಳಲು ಹೊರಟು ಹಲವಾರು ಕತೆಗಳನ್ನು ಹೇಳುತ್ತಾರೆ.

ಈ ಸಂಗ್ರಹದ ಮುಖ್ಯ ಕತೆಗಳಾದ `ವಿಸರ್ಜನೆ', 'ಮೂರನೆಯವನು' ಹಾಗೂ 'ಕುಮಟೆಗೆ ಬಂದಾ ಕಿಂದರಿಜೋಗಿಗಳನ್ನು ಓದುವಾಗ ಆಳವಾದ ಕತ್ತಲು ಬಾವಿಯೊಂದರ ಒಳಗೆ ಇಳಿಯುತ್ತಿರುವ ಅನುಭವವಾಗುತ್ತದೆ. ಕತೆಯ ಕೇಂದ್ರ ರಹಸ್ಯಕ್ಕೆ ಹಲವಾರು ರಹಸ್ಯಗಳು ಸೇರಿಕೊಳ್ಳುತ್ತ ನಮ್ಮ ಕುತೂಹಲವನ್ನು ಕೆರಳಿಸುತ್ತ ಹೋಗುತ್ತವೆ. ಇದು ಪತ್ತೇದಾರಿ ತಂತ್ರವಾಗಿರದೆ ಬದುಕಿನ ಅಗತ್ಯತೆಯನ್ನು ಮತ್ತೆ ಮತ್ತೆ ಅನುಭವಕ್ಕೆ ತರುವ ವಿಧಾನವಾಗಿದೆ.

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Related Books