ತಥಾಸ್ತು

Author : ಬಿ. ರಮೇಶ್

Pages 128

₹ 60.00
Year of Publication: 2002
Published by: ಬಿ.ಆರ್‌.ನಾಗಲತ
Address: ನಂ. 43, 'ಸ್ಕಂದ', 10ನೇ ಮುಖ್ಯ ರಸ್ತೆ, ಬನಶಂಕರಿ 3ನೇ ಹಂತ, ಬೆಂಗಳೂರು - 58

Synopsys

‘ತಥಾಸ್ತು’ ಬಿ. ರಮೇಶ್‌ ಅವರ ಕಥಾಸಂಕಲನವಾಗಿದೆ. ಸುಂದರ ಸನಿವೇಶಗಳನು ಹೃದ್ಯವಾಗಿಯೂ, ಕೆಲವು ದಾರುಣ ಪ್ರಸಂಗಗಳನ್ನು ಮನ ಕರಗುವಂತೆಯೂ ಹೇಳುತಾ ಓದುಗರನ್ನು ಬಹುಜಾಣೆಯಿಂದ ಓದಿನತ್ತ ಸೆಳೆಯುವ ಕೃತಿಯಾಗಿದೆ.

About the Author

ಬಿ. ರಮೇಶ್
(15 March 1956)

ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಬಿ. ರಮೇಶ್ ಅವರು ಮೂಲತಃ ಬೆಂಗಳೂರಿನವರು. 1956ರ ಮಾರ್ಚ್ 15ರಂದು ಜನನ. ಸೊಬಗು-ಕವನ ಸಂಕಲನ, ಬಣ್ಣದ ಗಿಣಿ ಹಾಗೂ ಪ್ರಹಾರ-ಗೊರೂರು ಸಾಹಿತ್ಯ ಪ್ರಶಸ್ತಿ ಪಡೆದ ಎರಡು ಪ್ರತ್ಯೇಕ ಕಥಾ ಸಂಕಲನಗಳು. ರನ್ನ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿ ತಥಾಸ್ತು, ಅಮೃತಧಾರಾ, ಅಮೃತ ಸಿಂಚನ ಹಾಗೂ ಕುಸುಮಾ-ಈ ಮೂರು ಪ್ರತ್ಯೇಕ ಸಂಪಾದಿತ ಕೃತಿಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.. ...

READ MORE

Reviews

ಹೊಸ ಪುಸ್ತಕ- 2003- ಫೆಬ್ರವರಿ

ಲೇಖಕರು ತಮ್ಮ ಏಳನೆಯ ಈ ಕೃತಿಗಾಗಿ ಏಳು ಕಥೆಗಳನ್ನು ನವಿರಾಗಿ ಹೆಣೆದಿದ್ದಾರೆ. ಇಲ್ಲಿನ ಪಾತ್ರ ಸೃಷ್ಟಿಯಲ್ಲಿ ಅತ್ಯಾಧುನಿಕ ಜೀವನಶೈಲಿಯಲ್ಲಿ ಬದುಕುವ ಮನಸ್ಸುಗಳ ಪ್ರತಿಬಿಂಬವೇ ಇಣುಕಿದಂತೆ ಭಾಸವಾ ಗುತ್ತದೆ. ಅಲ್ಲಲ್ಲಿ ನಡೆದ-ನೋಡಿದ ಘಟನೆಗಳನ್ನು ಹೇಳುತ್ತಿರುವರೇನೋ ಎನ್ನುವಂತೆ ಮುಗ್ಧತೆ- ನೈಜತೆ- ಪ್ರಾಮಾಣಿಕತೆ ಬೆರೆತುಹೋಗಿದೆ. ಸುಂದರ ಸನ್ನಿವೇಶಗಳನ್ನು ಹೃದ್ಯವಾಗಿಯೂ, ಕೆಲವು ದಾರುಣ ಪ್ರಸಂಗಗಳನ್ನು ಮನ ಕರಗುವಂತೆಯೂ ಹೇಳುತ್ತ ಓದುಗರನ್ನು ಬಹುಜಾಣೆಯಿಂದ ಓದಿನತ್ತ ಸೆಳೆಯಲಾಗಿದೆ.

Related Books