ಕನ್ನಡ ಪಂಚತಂತ್ರ

Author : ಡಿ.ಕೆ. ಭೀಮಸೇನರಾವ್

Pages 161

₹ 1.00




Year of Publication: 1950
Published by: ಸತ್ಯಾಶ್ರಯ ಪ್ರಕಾಶನ ಸಮಿತಿ
Address: #668, ಯೂನಿವರ್ಸಿಟಿ ರಸ್ತೆ, ಬಾಗ್ ಲಿಂಗಂಪಲ್ಲಿ, ಹೈದರಾಬಾದ್

Synopsys

ಲೇಖಕ ಡಿ.ಕೆ.ಭೀಮಸೇನ್ ರಾವ್ ಅವರು ಹೇಳಿರುವಂತೆ ಕನ್ನಡದ ಹಸ್ದತಪ್ರತಿಯನ್ನು ಆಧರಿಸಿ ಬರೆದ ಕೃತಿ-ಕನ್ನಡ ಪಂಚತಂತ್ರ. ಸಂಸ್ಕೃತದ ಮೂಲ ಗ್ರಂಥಕ್ಕೂ ಇದಕ್ಕೂ ವ್ಯತ್ಯಾಸವಿದೆ. ಕಥೆಗಳ ಒಟ್ಟು ಸಂವಿಧಾನದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಕೆಲವು ಹೆಸರುಗಳು ವ್ಯತ್ಯಾಸವಾಗಿವೆ. ಆದರೆ, ಹಸ್ತಪ್ರತಿಗಳಲ್ಲಿರುವ ಹೆಸರನ್ನೇ ಉಳಿಸಿಕೊಳ್ಳಲಾಗಿದೆ. ಕೃತಿಯಲ್ಲಿ ಮಿತ್ರಭೇದ, ಸುಹೃಲ್ಲಾಭ, ಸಂಧಿವಿಗ್ರಹ, ಲಬ್ಧ ನಾಶ, ಅಸಂಪ್ರೇಕ್ಷಕಾರಿತ್ವ, ಕಥೋಪಸಂಹಾರ ಹೀಗೆ ಪಂಚತಂತ್ರಗಳನ್ನು ಆಧರಿಸಿ ಬರೆದಿದೆ ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ.

About the Author

ಡಿ.ಕೆ. ಭೀಮಸೇನರಾವ್
(08 April 1904 - 29 November 1969)

ಡಿ.ಕೆ.ಭೀಮಸೇನರಾವ್ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ 1904 ಏಪ್ರಿಲ್ 08ರಂದು ಜನಿಸಿದರು. ತಂದೆ ಕೇಶವರಾವ್, ತಾಯಿ ಲಕ್ಷ್ಮೀಬಾಯಿ. 1922ರಲ್ಲಿ ಉರ್ದು ಮಾಧ್ಯಮದಲ್ಲಿ ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು. ಹೈದ್ರಾಬಾದ್‌ನ  ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಇವರು ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದರು. 1929ರಲ್ಲಿ ಮೈಸೂರು ವಿ.ವಿ.ದಲ್ಲಿ ಕನ್ನಡ ಎಂ.ಎ. ಪೂರ್ಣಗೊಳಿಸಿದರು. ಉಸ್ಮಾನಿಯ ವಿ.ವಿ.ದ ಕನ್ನಡ ವಿಭಾಗದಲ್ಲಿ ಬೋಧಕರಾಗಿ, ಸಂಶೋಧಕರಾಗಿ ವೃತ್ತಿ ಆರಂಭಿಸಿದರು.  ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಅವರ ಹಸ್ತಪ್ರತಿ ಸಂಗ್ರಹಣೆ ಮತ್ತು ಶಾಸನ ಸಂಗ್ರಹಣೆಗಾಗಿ ಮೈಸೂರು ಸರ್ಕಾರದಿಂದ ರಾಜ್ಯಪ್ರಶಸ್ತಿ ...

READ MORE

Related Books