ಗಾಂಧಿ ಮಂದಿರ

Author : ಶಂಕರ ಪಾಗೋಜಿ

Pages 140

₹ 150.00
Year of Publication: 2021
Published by: ಸ್ವರ ಪ್ರಿಂಟ್ & ಪಬ್ಲಿಕೇಷನ್ಸ್
Address: #1, 3ನೇ ಕ್ರಾಸ್, ಶಂಕರಪ್ಪ ಗಾರ್ಡನ್, ಮಾಗಡಿ ರಸ್ತೆ, ಬೆಂಗಳೂರು- 560023.

Synopsys

‘ಗಾಂಧಿ ಮಂದಿರ’ ಪತ್ರಕರ್ತ, ಲೇಖಕ ಶಂಕರ್ ಪಾಗೋಜಿ ಅವರ ಕಥಾ ಸಂಕಲನ. ಈ ಕೃತಿಗೆ ಮನು ಬಳಿಗಾರ ಅವರ ಬೆನ್ನುಡಿ ಬರಹವಿದೆ. ಗಾಂಧಿ ತಾತನ ಗಾಡಿ ಕಥೆಗಳ ಮೂಲಕ ಅದೇ ಗ್ರಾಮೀಣ ಭಾಗದ ಸಾಮಾಜಿಕ ಮತ್ತು ಸಾಮರಸ್ಯದ ಜೀವನದದ ಚಿತ್ರಣ, ಹಾಗೂ ಹಳ್ಳಿಗಳ ಮೇಲೆ ಹೊರ ಜಗತ್ತಿನ ಪರಿಣಾಮದಿಂದ ಗ್ರಾಮಗಳು ಹೇಗೆ ಸಾಮರಸ್ಯ ಕಳೆದುಕೊಂಡು ಕೋಮು ಭಾವನೆ ಮತ್ತು ರಾಜಕೀಯ ಕೇಂದ್ರಗಳಾಗಿ ಬದಲಾಗುತ್ತಿವೆ ಎಂಬುದರ ಚಿತ್ರಣವನ್ನು ಸರಳ ಭಾಷೆಯಲ್ಲಿ ಚಿತ್ರಿಕರಿಸಿರುವುದು ಲೇಖಕರು ಗ್ರಾಮೀಣ ಭಾರತದ ಪರಿವರ್ತನೆಗೆ ಗಾಂಧಿ ಕಂಡ ಕನಸನ್ನು ಸಾಕಾರಗೊಳಿಸುವ ಯತ್ನ ನಡೆಸಿದ್ದಾರೆ ಎಂಬುದು ವೇದ್ಯವಾಗುತ್ತದೆ ಎನ್ನುತ್ತಾರೆ ಮನು ಬಳಿಗಾರ. ಜೊತೆಗೆ ಗ್ರಾಮಗಳು ಸ್ವರಾಜ್ಯ ಕಾಣಬೇಕೆಂದರೆ, ಹೊರಗಿನವರ ಹಿತೋಪದೇಶ ಹಾಗೂ ಸರ್ಕಾರದ ಯೋಜನೆಗಳಿಂದ ಸಾಧ್ಯವಿಲ್ಲ.

ಗ್ರಾಮೀಣರು ತಮ್ಮ ಬದುಕನ್ನು ತಾವೇ ಹಸನು ಮಾಡಿಕೊಳ್ಳಲು ತಮ್ಮೊಳಗೆ ಸಾಮರಸ್ಯ ಮತ್ತು ಹೊಂದಾಣಿಕೆ ಜೀವನ ನಡೆಸಬೇಕೆನ್ನುವ ಸಂದೇಶವನ್ನು ತಮ್ಮ ಕಥೆಗಳ ಮೂಲಕ ನೀಡುವ ಪ್ರಯತ್ನ ಶಂಕರ ಅವರದು. ದ್ವೇಷ ಭಾವನೆ ತುಂಬಿ ತುಳುಕುತ್ತಿರುವ ಇಂದಿನ ಸಮಾಜದಲ್ಲಿ ಗಾಂಧಿ ತತ್ವದ ಮೂಲಕ ನಮ್ಮ ಹಳ್ಳಿಗಳನ್ನು ಸ್ವಾರಾಜ್ಯ ಮಾಡುವ ಆತ್ಮೀಯ ಶಂಕರ ಅವರ ಕನಸು ಯುವ ಪೀಳಿಗೆಗೆ ಸ್ಪೂರ್ತಿದಾಯಕ ಮತ್ತು ಮೆಚ್ಚುವಂತಾದ್ದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಶಂಕರ ಪಾಗೋಜಿ
(20 June 1980)

ಪತ್ರಕರ್ತ, ಲೇಖಕ ಶಂಕರ ಪಾಗೋಜಿ ಮೂಲತಃ ಧಾರವಾಡ ಜಿಲ್ಲೆ, ಧಾರವಾಡ ತಾಲೂಕಿನ ದೇವಗಿರಿಯವರು. ಮಲೆನಾಡಿನ ಕೊನೆಯ ಸೆರಗು ಸುಮಾರು 500 ಜನಸಂಖ್ಯೆ ಇರುವ ಸಣ್ಣ ಗ್ರಾಮದಲ್ಲಿ ನಾಲ್ಕನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಮಲೆನಾಡು ಶಿಕ್ಷಣ ಸಮಿತಿ ನಿಗದಿಯಲ್ಲಿ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿದರು. ಪಿಯುಸಿಯನ್ನು ಧಾರವಾಡದ ಆಲೂರು ವೆಂಕಟರಾವ್ ಜೂನಿಯರ್ ಕಾಲೇಜಿನಲ್ಲಿ ಓದಿದ ಅವರು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಬಿ.ಎ. ಪದವಿಯನ್ನು ಧಾರವಾಡದ ಕಿಟಲ್ ಕಾಲೇಜಿನಲ್ಲಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಆನಂತರದಲ್ಲಿ ಕರ್ನಾಟಕದ ಪ್ರಮುಖ ದಿನ ಪತ್ರಿಕೆಗಳಾದ ವಿಜಯ ಕರ್ನಾಟಕ, ಸೂರ್ಯೋದಯ, ...

READ MORE

Related Books