ಉಳಿದ ವಿವರಗಳು ಲಭ್ಯವಿಲ್ಲ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 144

₹ 120.00
Year of Publication: 2017
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಪತ್ರಕರ್ತ, ಲೇಖಕ ಜೋಗಿಯವರ ’ಉಳಿದ ವಿವರಗಳು ಲಭ್ಯವಿಲ್ಲ’ ಕಥಾ ಸಂಕಲನವಾಗಿದೆ.

ಭಾರತೀಯ ನೋಟದ ಕಥನ ಶೈಲಿಯಂತಿರುವ ಈ ಕಥಾ ಸಂಕಲನದೊಳಗೆ ನಗರ ಕಥನಗಳು ಸೇರಿವೆ. ಜೋಗಿ ಅವರ ಬೆಂಗಳೂರು ಸರಣಿಯ ಮುಂದುವರಿಕೆಯಾದ ಕೃತಿ ’ಉಳಿದ ವಿವರಗಳು ಲಭ್ಯವಿಲ್ಲ’.  ಈ ಕೃತಿಯು ಬದಲಾಗುತ್ತಿರುವ ಜಗತ್ತಿನೊಂದಿಗೆ ಬಾಳನ್ನು ಹಂಚಿಕೊಂಡು ಅದಕ್ಕೆ ಸಾಕ್ಷಿಯಾಗುವ ಪುಸ್ತಕವಿದು. ಇಲ್ಲಿನ ಮನುಷ್ಯರ ಜೊತೆಗಿನ ಮಾತುಕತೆ ಒಂದು ರೀತಿಯಲ್ಲಿ ನಗರ ಜೀವನದ ಜೊತೆಗಿನ ವ್ಯವಹಾರದ ಹಾಗೆ ಸಾಗುವಂತದ್ದು. ವ್ಯವಸ್ಥೆಯೇ ಮನುಷ್ಯನ ಮನಸ್ಸಿನ ತರಹ ಕೆಲಸ ಮಾಡುವ ಅಥವಾ ಮನುಷ್ಯನೇ ವ್ಯವಸ್ಥೆಗೆ ಹೊಂದಿಕೊಂಡು ಅದಕ್ಕೂ ತನಗೂ ವ್ಯತ್ಯಾಸವಿಲ್ಲದ ಹಾಗೆ ಬದುಕುವ ಅನೇಕ ಪಾತ್ರಗಳನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ.

 

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರು ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದಾರೆ. ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. 18 ...

READ MORE

Related Books