ಪಲಾಯನ ಮತ್ತು ಇತರ ಕಥೆಗಳು

Author : ಶಾರದಾ ಮೂರ್ತಿ

Pages 102

₹ 125.00




Year of Publication: 2022
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: #725, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು- 560 010
Phone: 9945939436

Synopsys

ಲೇಖಕಿ ಶಾರದಾ ಮೂರ್ತಿ ಅವರ ಕೃತಿ ʻಪಲಾಯನ ಮತ್ತು ಇತರ ಕಥೆಗಳುʼ. ಪುಸ್ತಕದ ಮುನ್ನುಡಿಯಲ್ಲಿ ಲೇಖಕಿ ಸುಧಾ ಶರ್ಮ, ಚವತ್ತಿ ಅವರು, “ಇಲ್ಲಿನ ಎಲ್ಲ ಕಥೆಗಳನ್ನೂ ಓದಿ ಮುಗಿಸಿದ ಮೇಲೆ ಮೊದಲ ಗ್ರಹಿಕೆಗೆ ತೋಚಿದ್ದು, ನಾವು ಇಲ್ಲಿ ಸುಮಾರು 30-40 ವರ್ಷದ ಹಿಂದಿನ, ಒಂದು ಅಪ್ಯಾಯಮಾನ ಬದುಕನ್ನು ಮೆಲುಕು ಹಾಕುತ್ತೇವೆ. ಒಟ್ಟು ಕುಟುಂಬ, ಹಳ್ಳಿಯ ಸಹಜತೆ, ಸಂಬಂಧಗಳಲ್ಲಿನ ಒಲುಮೆ, ಮಾನವೀಯತೆಯ ನೆಲೆಯಿಂದ ಯೋಚಿಸುವುದು, ಹಬ್ಬ ಹರಿದಿನಗಳು, ಉತ್ಸವಗಳು, ಒಟ್ಟಿಗೆ ಕುಳಿತು ಎಲ್ಲ ತೀರ್ಮಾನಿಸುವುದು ಹೀಗೆ. ಇಲ್ಲಿ ಬಹುಮುಖ್ಯವಾದದ್ದು ಇವರು ಕಥೆ ಹೆಣೆಯಬೇಕೆಂದು ಹೆಣೆದದ್ದಲ್ಲ, ತನ್ನಿಂದ ತಾನೇ ಕಥೆ ಘಟಿಸುತ್ತದೆ. ನಮ್ಮೆದುರು ನಡೆಯುತ್ತಿದೆಯೇನೋ ಎನ್ನುವಷ್ಟು ನಮ್ಮನ್ನು ಅದರೊಳಗೆ ಸೆಳೆಯುತ್ತದೆ. ಪ್ರತಿ ಕಥೆಯ ಆರಂಭದಲ್ಲೂ ಒಂದು ವಿವರಣೆ ಇರುತ್ತದೆ. ಆ ವಿವರಣೆ ಕುಟುಂಬದ್ದು ಇರಬಹುದು, ಹಳ್ಳಿಯದಿರಬಹುದು, ಒಂದು ಮನೆಯದೂ ಇರಬಹುದು. ಆರಂಭದಿಂದ ಕೊನೆಯ ವರೆಗೂ ಆ ವಿವರಣೆಯ ಬಿಗು ಹಾಗೇ ಇರುತ್ತದೆ. ಸಹಜ ನಿರೂಪಣೆ ಇಲ್ಲಿನ ಕಥೆಗಳ ಶಕ್ತಿ. ಇಲ್ಲಿನ ಕಥೆಗಳಲ್ಲಿ ಮಹಿಳಾ ಪಾತ್ರಗಳು ಬಹಳ ಸಶಕ್ತವಾಗಿವೆ. ಜೊತೆಗೆ ಏನೋ ಸಹಿಸಿಕೊಂಡು ಸಾಗಬೇಕು ಎನ್ನುವಷ್ಟು ಹೇಡಿಯಾಗಿಯೂ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ "ಕುಸಿತ" ಕಥೆಯ ಲೀಲಾ, "ಭರವಸೆ" ಕಥೆಯ ಕವಿತಾ. "ಪಲಾಯನ" ಕಥೆಯ ಉಮಾ. "ಕುಸಿತ" ಕಥೆಯ ಲೀಲಾ ತನ್ನ ದೊಡ್ಡಪ್ಪನ ಮಕ್ಕಳು ತನ್ನ ತಂದೆಯ ಅಂತ್ಯ ಸಂಸ್ಕಾರ ಮಾಡಲಿಎನ್ನುವುದನ್ನು ಕಾಯದೇ, ಅವರೆದುರು ಗೋಗರೆಯದೇ ತಾನೇ ಸ್ವತಃ ಮುಂದೆ ನಿಂತು ಅಂತ್ಯಸಂಸ್ಕಾರಕ್ಕೆ ಹೊರಡುವುದು. ಇಲ್ಲಿ ಈ ಪಾತ್ರಗಳು ಯಾವುದೇ ದೊಡ್ಡ ದೊಡ್ಡ ಮಾತುಗಳ ಮೂಲಕ ತಮ್ಮ ಹೆಚ್ಚುಗಾರಿಕೆ ಹೇಳಿಕೊಳ್ಳುವುದೇ ಇಲ್ಲ. ಎಲ್ಲವನ್ನೂ ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಇವರದ್ದು. ಹಾಗೆಯೇ "ಭರವಸೆ" ಕಥೆಯ ಎಲ್ಲ ಸ್ತ್ರೀ ಪಾತ್ರಗಳು ಬಹಳ ಹೆಮ್ಮೆ ಅನ್ನಿಸುತ್ತದೆ. ಕವಿತಾ, ಪಾರ್ವತಿ, ಕವಿತಾಳ ಅತ್ತೆ ಇವರೆಲ್ಲರೂ ಯೋಚಿಸುವ ರೀತಿ, ಕೊನೆಗೆ ಕವಿತಾ ತೆಗೆದುಕೊಂಡ ನಿರ್ಧಾರ. ಆಸ್ತಿಯನ್ನು ಗಂಡನ ಹೆಸರಿಗೆ ಬರೆದುಕೊಡಲಾರೆ ಎನ್ನುವ ಕವಿತಾಳ ದೃಢ ನಿರ್ಧಾರ ವ್ಯಕ್ತ ಆಗಿದ್ದು, ಅವಳು ಇವರೆಲ್ಲರ ಅಗತ್ಯ ಮೀರಿ ಬದುಕಬಹುದು ಎನ್ನುವುದನ್ನು ತೋರಿಸಿದಾಗ, ಕವಿತಾ ಇಲ್ಲದೇ ಉಳಿದವರಿಗೆ ಬದುಕುವುದು ಕಷ್ಟವಾಗತೊಡಗಿತು. ಆಗಲೇ ಅವರೆಲ್ಲರಿಗೂ ಕವಿತಾಳ ಮಹತ್ವ, ಅವಳ ಖಚಿತತೆ ಅರ್ಥವಾಯಿತು. ಇಲ್ಲೆಲ್ಲ ಯಾವುದೇ ಪ್ರತಿಭಟನೆಯನ್ನು ಮಾತಿನಲ್ಲೋ, ಹೇಳಿಕೆಯಲ್ಲೋ ನೀಡುವುದಿಲ್ಲ” ಎಂದು ಹೇಳಿದ್ದಾರೆ.

About the Author

ಶಾರದಾ ಮೂರ್ತಿ
(28 May 1958)

ಶಾರದಾ ಮೂರ್ತಿ ಅವರು ಹವ್ಯಾಸಿ ಲೇಖಕಿ. ರಾಜ್ಯ ಮಟ್ಟದ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. ಅಮೆರಿಕಾದ ಶಿಕಾಗೋ ನಗರದ ವಿದ್ಯಾರಣ್ಯ ಕನ್ನಡ ಸಂಘದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಹಾಸ್ಯಲೇಖನ, ಕವನ ವಾಚನ ಮಾಡಿದ್ದಾರೆ. ಅಲ್ಲಿಯ 'ಸಂಗಮ' ಎನ್ನುವ ವಿಶೇಷಾಂಕದಲ್ಲಿ ಹಲವಾರು ವರ್ಷಗಳಿಂದ ಲೇಖನಗಳು ಪ್ರಕಟವಾಗುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿದ ಇವರಿಗೆ ಮೊದಲಿನಿಂದಲೂ ಕನ್ನಡ ಭಾಷೆಯ ಮೇಲೆ ಅದಮ್ಯ ಪ್ರೀತಿ. ಹಾಗಾಗಿ ತಮ್ಮ 50ನೇ ವಯಸ್ಸಿನಲ್ಲಿ ಕನ್ನಡದಲ್ಲಿ ಎಂ. ಎ. ಪದವಿಯನ್ನು ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿ ಆಗಿದ್ದ ಪತಿಯ ಜೊತೆ ದೇಶಾದ್ಯಂತ ತಿರುಗಾಟ. ಬೇರೆಬೇರೆ ತರಹದ ...

READ MORE

Related Books