ಬಯಕೆಗಳು ಬೇರೂರಿದಾಗ

Author : ಆಕರ್ಷ ಆದಿತ್ಯ

Pages 72

₹ 100.00




Year of Publication: 2021
Published by: ಕಾಯಕ ಪ್ರಕಾಶನ
Address: #91, ಮೊದಲನೇ ರಸ್ತೆ, ದತ್ತಾತ್ರೇಯ ನಗರ, ನರಗುಂದ ಪಾರ್ಮಸ್ಸಿ ಕಾಲೇಜು, ಹೊಸಕೆರೆಹಳ್ಳಿ, ಬನಶಂಕರಿ 3 ನೇ ಮಹಡಿ, ಬೆಂಗಳೂರು-85
Phone: 9980003506

Synopsys

ಲೇಖಕ ಆಕರ್ಷ ಆದಿತ್ಯ ಅವರ ’ ಬಯಕೆಗಳು ಬೇರೂರಿದಾಗ’ ಕೃತಿ ಕತಾ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಶಿಲ್ಪಾ ಎಸ್. ಜೋಯಿಸ್ ಅವರು, ‘ಲೇಖಕ ಕಂಡುಂಡ ಅನುಭವಗಳನ್ನು ಕತಾಕೊಂಡಿಗೆ ಸಿಕ್ಕಿಸಿ, ಅವುಗಳಿಗೆ ಭಾವುಕತೆಯ ಲೇಪನ ಅಂಟಿಸಿ, ಪ್ರೀತಿಯೋ, ಪ್ರೇಮವೋ, ವಿರಹವೋ, ಸಾವೋ ಅನ್ನುವ ವಸ್ತುಗಳನ್ನು ಕಟ್ಟಿಕೊಂಡು ಓದುಗನಲ್ಲೇ ಕತೆಯೊಂದು ಹುಟ್ಟುವಂತೆ ಮಾಡುವ ಕೃತಿ ಇದು. ಸಿನಿಮಾ, ಸೀರಿಯಲ್ ಚಿತ್ರಕತೆಯಂತೆಯೇ ರೋಚಕತೆ ಹುಟ್ಟಿಸುತ್ತಾ ಸಾಗುವ ಬರಹಗಳು , ಬದುಕಿನ ಬವಣೆಯನ್ನು ತೆರೆದಿಡುವಂತಿವೆ.  ಉತ್ತಮ ಸಂದೇಶಗಳ ಜೊತೆಗೆ ಅಗತ್ಯವಾದ ಅಂಶಗಳನ್ನು ಒಳಗೊಂಡಿದೆ. ಮಹಿಳಾ ಪಾತ್ರಗಳ ಒಳನುಸುಳಿ ಆಕೆಯ ಅಂತರಂಗದ ಭಾವನೆಗಳನ್ನು ಪ್ರಸ್ತುತ ಪಡಿಸುವ ರೀತಿ ಚೆನ್ನಾಗಿದೆ. ಕತಾ ಹಂದರವು ಓದಗನನ್ನು ಸೆಳೆಯುವ ಜೊತೆಗೆ ಪ್ರಭಾವ ಬೀರುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಆಕರ್ಷ ಆದಿತ್ಯ

ಲೇಖಕ ಆಕರ್ಷ ಆದಿತ್ಯ ಅವರು ಮೂಲತಃ ಬೆಂಗಳೂರಿನವರು. ಬಿಕಾಂ ಹಾಗೂ ಎಂ.ಬಿ.ಎ ಪದವೀಧರರು. 6 ವರ್ಷ ಕಾಲ ಎ.ಎನ್ ಝೆಡ್ ಬ್ಯಾಂಕ್ ನಲ್ಲಿ ಸೀನಿಯರ್ ಎಚ್. ಆರ್ ಆಗಿ ಸೇವೆ ಸಲ್ಲಿಸಿದರು. 2013 ರಲ್ಲಿ ಚಿತ್ರಲೋಕದ ಕಡೆಗೆ ಮುಖಮಾಡಿ, 2014 ರಲ್ಲಿ ಪ್ಯಾಂಟಲೂನ್ಸ್ ಅರ್ಪಿಸಿದ ‘ಫೇಸ್ ಆಫ್ ಬೆಂಗಳೂರ್ ಟೈಟಲ್’ ತಮ್ಮದಾಗಿಸಿಕೊಂಡರು. ಕನ್ನಡ, ತೆಲುಗು ತಮಿಳು, ಧಾರಾವಾಹಿಗಳಲ್ಲಿ ನಟಿಸಿ ಬಹುಭಾಷಾ ನಟನೆಂದು ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಬೆಳ್ಳಿ ಕಾಲುಂಗುರ, ಗೊಂಬೆಯಾಟವಯ್ಯ, ದುರ್ಗಾ, ಅಮ್ಮ, ಸಪ್ತ ಮಾತೃಕ ಧಾರಾವಾಹಿಗಳಲ್ಲಿ ಹಾಗೂ  ಸ್ಟಾರ್ ಸುವರ್ಣದ "ಸಿಂಧೂರ", ಕಸ್ತೂರಿ ವಾಹಿನಿಯ "ಮಮತೆಯ ಕರೆಯೋಲೆ" ಧಾರಾವಾಹಿಯಲ್ಲಿ ನಾಯಕನಟನಾಗಿ ನಟಿಸಿದ್ದಾರೆ. "ಸ್ಟೆಪ್ ...

READ MORE

Related Books