ಕಾಣದ ಕಡಲಿಗೆ

Author : ಎನ್.ವಾಯ್. ಈಳಗೇರ(ಎಸ್. ನಾಗಕಲಾಲ)

Pages 130

₹ 130.00
Year of Publication: 2021
Published by: ಸೋನಾಲ್ ಪಬ್ಲಿಕೇಷನ್ಸ್
Address: ಬೆಂಗಳೂರು
Phone: 9986709675

Synopsys

‘ಕಾಣದ ಕಡಲಿಗೆ’ ಕೃತಿಯು ಎಸ್. ನಾಗಕಲಾಲ್ (ಎನ್.ವಾಯ್. ಈಳಗೇರ) ಅವರ ಹಂಬಲಿಸುವವರ ಕತಾ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಗಣೇಶ್ ಕಾಸರಗೋಡ ಅವರು, 25-30 ವರ್ಷಗಳ ನಂತರವೂ ಅದೇ ಅಚ್ಚರಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ನಾಗಕಲಾಲ್. ಮೊದಲ ಬಾರಿ ಕಡಲನ್ನು ನೋಡಿದಾಗ ಅವರ ಮುಖದಲ್ಲಿ ಕಂಡ ಅಚ್ಚರಿ ಈಗಲೂ ಉಳಿದುಕೊಂಡು ಬಿಟ್ಟಿದೆ. ನಂತರದ ದಿನಗಳಲ್ಲಿ ಸಿನಿಮಾ ಪತ್ರಕರ್ತರಾದಾಗಿನ ಅಚ್ಚರಿ, ಸಿನಿಮಾ ಕಲಾವಿದರನ್ನು, ತಂತ್ರಜ್ಞರನ್ನು ಕಂಡಾಗಿನ ಅಚ್ಚರಿ, ಭಾನಾಮತಿಯನ್ನು ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಜನತೆಗೆ ಪರಿಚಯಿಸಿದ ಅಚ್ಚರಿ, ಬಡತನದ ಬದುಕಿನ ಕಷ್ಟ ಕೋಟಲೆಗಳನ್ನು ಬೇಧಿಸುವ ಅಚ್ಚರಿ, ಅಲ್ಲೊಂದು ವಿದ್ಯಾ ಸಾಮ್ರಾಜ್ಯವನ್ನೇ ಕಟ್ಟಿದ ಸಾಹಸದ ಅಚ್ಚರಿ, ನಿಜ ಹೇಳಬೇಕೆಂದರೆ ನನ್ನಂಥಾ ಗೆಳೆಯನಿಗೆ ಇವರ ಒಟ್ಟು ಬದುಕೇ ಅಚ್ಚರಿಯ ಮೂಟೆ ಎಂದಿದ್ದಾರೆ. ಈಗಲೂ ಅದೇ ಅಚ್ಚರಿಯ ಮುಗ್ಧಭಾವದ ನಾಗಕಲಾಲ ಒಂದೇ ಭಾವವನ್ನು ಇಷ್ಟೊಂದು ವರ್ಷಗಳ ಕಾಲ ಬದಲಾಗದಂತೆ ಕಾಪಿಟ್ಟುಕೊಳ್ಳುವುದೆಂದರೆ...ಅದು ಹುಡುಗಾಟದ ವಿಷಯವಲ್ಲ. "ಕಾಣದ ಕಡಲಿಗೆ ఎంబ ಕಥಾ ಸಂಗ್ರಹವನ್ನು ಮುಂದಿಟ್ಟುಕೊಂಡು ಇಷ್ಟೆಲ್ಲಾ ಬರೆದವರು ಕಾಸರಗೋಡಿನ ಕಡಲನ್ನು ಅಚ್ಚರಿಯಿಂದ ನೋಡಿದ ಗೆಳೆಯ ನಾಗಕಲಾಲ ಎನ್ನುತ್ತಾರೆ. ಜಿ. ಎಸ್ ಶಿವರುದ್ರಪ್ಪನವರು ಬೇರೊಂದ ಆಶಯವನ್ನಿಟ್ಟುಕೊಂಡು ಈ ಭಾವಗೀತೆಯನ್ನು ಬರೆದಿರಬಹುದು, ಆದರೆ ನಾಗಕಲಾಲ ಅವರ ಕಥಾ ಸಂಗ್ರಹಕ್ಕೆ ಈ ಶೀರ್ಷಿಕೆ ಅತ್ಯಂತ ಸೂಕ್ತವಾಗಿದೆ. 'ಕಾಣದ ಕಡಲಿಗೆ ಹಂಬಲಿಸಿದ ಮನ” ಸಿ ಅಶ್ವಥ್ ಹಾಡಿರುವ ಈ ಭಾವಗೀತೆಯ ಅರ್ಥ ಮತ್ತು ಭಾವ ನಾಗಕಲಾಲ ಅವರ ಈ ಕಥಾ ಸಂಗ್ರಹಕ್ಕೆ ಅರ್ಥಪೂರ್ಣ ಹೊಂದಿಕೆಯಾಗಿದೆ, ಹೊದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

About the Author

ಎನ್.ವಾಯ್. ಈಳಗೇರ(ಎಸ್. ನಾಗಕಲಾಲ)

ಲೇಖಕ ಎನ್.ವಾಯ್. ಈಳಗೇರ ಅವರು ಮೂಲತಃ ಧಾರವಾಡದವರು. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದಾರೆ. ಎಸ್. ನಾಗಕಲಾಲ ಅವರ ಕಾವ್ಯನಾಮ. ವೃತ್ತಿಯಲ್ಲಿ ಬರಹಗಾರ ಹಾಗೂ ಪತ್ರಕರ್ತರು. ಕೃತಿಗಳು : ಪಾಪದ ಹೂವುಗಳು (ಲೇಖನಗಳು), ಪಯಣ ಮತ್ತು ಹುಡುಕಾಟ( ಕಾವ್ಯ ಸಂಕಲನ), ಕಾಣದ ಕಡಲಿಗೆ (ಕಥಾ ಸಂಕಲನ), ಯುರೊಪ್ ನಾಡಿನಲ್ಲಿ (ಪ್ರವಾಸ ಕಥಾ ಸಂಕಲನ) n-y-elagera ...

READ MORE

Related Books