ಬಿಟ್ಟು ಬಂದಳ್ಳಿಯ ಕಥೆಗಳು

Author : ಮಂಜಯ್ಯ ದೇವರಮನಿ

Pages 130

₹ 120.00




Year of Publication: 2023
Published by: ಸುದೀಕ್ಷ ಸಾಹಿತ್ಯ ಪ್ರಕಾಶನ
Address: ರಾಣೇಬೆನ್ನೂರು

Synopsys

‘ಬಿಟ್ಟು ಬಂದಳ್ಳಿಯ ಕಥೆಗಳು’ ಕೃತಿಯು ಮಂಜಯ್ಯ ದೇವರಮನಿ ಅವರ ಕಥಾಸಂಕಲನ ಗುಚ್ಛವಾಗಿದೆ. ಇಲ್ಲಿ ಹಲವಾರು ವಿಚಾರಗಳು ಕಥಾವಸ್ತುವಿನ ಮೂಲಕ ಕಟ್ಟಿಕೊಡಲಾಗಿದೆ. ಹಳ್ಳಿಗಳು ಸಾಕಷ್ಟು ಬದಲಾಗಿವೆ ಎನ್ನುವ ಕತೆಗಾರ ಅಲ್ಲಿನ ಆಧುನಿಕತೆಯ ಕುರಿತು ವಿವರಿಸಿದ್ದಾನೆ. ಹಳ್ಳಿಗರು ನಗರ ಜೀವನಶೈಲಿಗೆ ಶರಣಾಗಿದ್ದಾರೆ. ಸಹಜ ಸಾವಯವ ಕೃಷಿ ಮರೆತಿದ್ದಾರೆ. ಯಾರ ಮನೆಯಲ್ಲಿ ಒಂದು ಮುಷ್ಟಿ ಸಾಸಿವೆ, ಸಾವೆ, ನವಣೆಗಳಿಲ್ಲ ಎನ್ನುತ್ತಾನೆ. ಇಲ್ಲಿನ ಬರಹಗಳಲ್ಲಿ ಗ್ರಾಮೀಣ ಸಂವೇದನೆಗಳನ್ನು ಚಿತ್ರಿಸಲು ಪ್ರಯತ್ನಿಸಿದ್ದೇನೆ. ಇದು ನನ್ನ ಹುಟ್ಟೂರಾದ 'ಸಂಗಾಪುರದ' ಕಲ್ಪನೆಯನ್ನು ನೀಡಬಹುದಾದರೂ ಅದೇ ಆಗಿಲ್ಲ. ಇಲ್ಲಿನ ಯಾವ ಪಾತ್ರಗಳು ಜೀವಂತ ಜನರ ಪ್ರತೀಕಗಳಲ್ಲ. ಪ್ರತಿ ಗ್ರಾಮಗಳಲ್ಲಿ ಇರಬಹುದಾದ ಸಾಮಾಜಿಕ ವರ್ತನೆಗಳಾಗಿವೆ. ಗ್ರಾಮಗಳಲ್ಲಿ ನಡೆಯಬಹುದಾದ ಘಟನೆ ಮತ್ತು ಸಂಗತಿಗಳನ್ನು ಮಾದರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಜನಗಳಲ್ಲಿನ ದ್ವೇಷ, ಅಸೂಯೆ, ಬಡತನ, ಹಣದ ಸೊಕ್ಕು ಸಾಮಾಜಿಕ ಶ್ರೇಣಿಕರಣ ಮತ್ತು ಸಾಮಾಜಿಕ ಚಲನೆಯ ಪ್ರತಿರೂಪಗಳಂತೆ ಕಂಡುಬರುತ್ತವೆ. ಜಾತಿ, ಪಂಥ, ಪಂಗಡ, ಕೋಮುಗಳನ್ನು ಮೀರಿ ಬೆಳೆಯಬಹುದಾದ ಅಂಶಗಳನ್ನು ಇಲ್ಲಿನ ಬರಹಗಳು ಪ್ರತಿನಿಧಿಸುತ್ತವೆ. ಗ್ರಾಮೀಣ ಬದುಕು ಆಧುನಿಕತೆಯ ಕಡೆಗೆ ವಾಲುತ್ತಿದೆ. ಗ್ರಾಮಗಳು ಸಾಕಷ್ಟು ಬದಲಾಗಿವೆ, ಆದರೆ ಅವರಲ್ಲಿನ ಮೌಡ್ಯತೆ, ಹಿಂಸೆ, ದಬ್ಬಾಳಿಕೆ, ಕ್ರೌರ್ಯ ಇನ್ನು ಹಾಗೆ ಉಳಿದಿವೆ. ಇವುಗಳನ್ನು ಮೀರಿ ಬದುಕುವ ಮಾರ್ಗವಾಗಿ ಇಲ್ಲಿನ ಬರಹಗಳು ಕಂಡರೆ ಅದೇ ಸಾರ್ಥಕತೆ.

About the Author

ಮಂಜಯ್ಯ ದೇವರಮನಿ
(01 February 1982)

ಮಂಜಯ್ಯ ದೇವರಮನಿ ಮೂಲತಃ ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲ್ಲೂಕಿನ ಸಣ್ಣ ಸಂಗಾಪುರದವರು. ಜನನ 1ನೇ ಫೆಬ್ರವರಿ 1982. ಜಗದಯ್ಯ ದೇವರಮನಿ ಮತ್ತು ಗಿರಿಜಮ್ಮ ದಂಪತಿಗಳ ಕಿರಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಸಂಗಾಪುರದಲ್ಲಿ, ಪ್ರೌಢ ಶಿಕ್ಷಣವನ್ನು ಉಕ್ಕಡಗಾತ್ರಿಯಲ್ಲಿ ಪೂರೈಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ, ಕುವೆಂಪು ವಿಶ್ವವಿದ್ಯಾಲಯದಿಂದ ಎಂ ಎಡ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪದವಿಧರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಸೇವೆ ಸಲ್ಲಿಸಿದ ಅನುಭವ. ಸಾಮಾಜಿಕ ಭದ್ರತಾ ಯೋಜನೆಗಳ ...

READ MORE

Related Books