ರಹಸ್ಯಾಯನ

Author : ಸಿ.ಎಸ್. ನಾಗೇಶ್ ಕುಮಾರ್

Pages 150

₹ 49.00
Year of Publication: 2020
Published by: ಮೈಲ್ಯಾಂಗ್‌ ಬುಕ್ಸ್ ಡಿಜಿಟಲ್ ಪ್ರೈ.ಲಿ
Address: ವೆವರ್ಕ್, ಸಲಾರ್ಪುರಿಯಾ ಸಿಂಬಿಯಾಸಿಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು -76
Phone: 8296332054

Synopsys

ಸಿ.ಎಸ್. ನಾಗೇಶ ಕುಮಾರ ಅವರು ಬರೆದ ಕಥಾ ಸಂಕಲನ-ರಹಸ್ಯಾಯನ. ಆರು ಕತೆಗಳು ಪ್ರತಿಲಿಪಿಯಲ್ಲಿ ಪ್ರಕಟವಾಗಿದ್ದು, ಕತೆ-ನೀಳ್ಗತೆ ವಿಭಾಗದ ಸ್ಪರ್ಧೆಯಲ್ಲಿ "ಐದು ತೀರ್ಪುಗಾರರ ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕತೆಗಳಾಗಿವೆ. ‘ವಿನಾಶ ಕಾಲೇ!, ಆಕಾಶದಾಗೆ ಯಾರೋ ಮಾಯಗಾರನು, ಡಿಸ್ಟೋಪಿಯಾ- ಅನಂತಂ ಬ್ರಹ್ಮಾ, ಲೆಮೂರಿಯಾ- ನಿಧಿಯ ವಿಧಿ, ನಡುಗಡಲಿನ ಹಡಗು, ಮೈನಾಕ: ಕಲ್ಲಾದೆ ಏಕೆಂದು ಬಲ್ಲೆ!’ - ಆರು ಕತೆಗಳಿದ್ದು ಓದುಗರನ್ನು ರೋಚಕತೆಯ ಅಂಚಿಗೆ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತವೆ. ಇಲ್ಲಿ ಅನ್ಯಗ್ರಹ ಜೀವಿಗಳ ರಹಸ, ಕಾರ್ಯಾಚರಣೆ ಇದೆ, ಲೆಮೂರಿಯಾ ಎಂಬ ಮುಳುಗಿದ ಖಂಡದ ನಿಧಿಯ ರೋಚಕ ಕತೆ ಇದೆ. ರಾಮಾಯಣದ ಕಾಲದಲ್ಲಿ ಆಂಜನೇಯನಿಗೆ ಕಾಣಿಸಿ ಮಾಯವಾದ ಸುವರ್ಣ ಪರ್ವತದ ರೋಮಾಂಚನವಿದೆ, ವಿನಾಶವಾದ ಭೂಮಿಯಲ್ಲಿ ಹೋರಾಡಿದ ಯುವ ವೀರರ ಸಾಹಸಗಾಥೆಗಳು ಹಾಸುಹೊಕ್ಕಾಗಿವೆ.

About the Author

ಸಿ.ಎಸ್. ನಾಗೇಶ್ ಕುಮಾರ್

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...

READ MORE

Related Books