ಸೂರ್ಯಸ್ನಾನ

Author : ಸಿದ್ದಾರೂಢ ಕಟ್ಟಿಮನಿ

Pages 152

₹ 125.00




Year of Publication: 2017
Published by: ಎಸ್.ಎಲ್.ಎನ್. ಪಬ್ಲಿಕೇಷನ್ಸ್
Address: 9ನೇ ಅಡ್ಡರಸ್ತೆ, ಶಾಸ್ತಿನಗರ, ಬನಶಂಕರಿ, ಬೆಂಗಳೂರು
Phone: 9972129376

Synopsys

25 ಕತೆಗಳನ್ನು ಹೊಂದಿದ ’ಸೂರ್ಯಸ್ನಾನ’ ಹೊಸ ರೂಪ ಮತ್ತು ತಂತ್ರಗಾರಿಕೆಯ ಕಾರಣಕ್ಕೆ ಗಮನ ಸೆಳೆಯುತ್ತದೆ. ಪ್ರೀತಿ-ಪ್ರೇಮ, ಹಳ್ಳಿಯ ಬದುಕು, ನಗರ ಜೀವನದ ಗೊಂದಲ, ಹುಟ್ಟು-ಸಾವಿನ ಸಂಬಂಧ, ದೆವ್ವ-ದೇವರು ಕುರಿತ ಜಿಜ್ಞಾಸೆ ಈ ಕತೆಗಳ ವಸ್ತು. 

ಇವತ್ತಿನ ತಲ್ಲಣಗಳನ್ನು, ಪಲ್ಲಟಗಳನ್ನು ನಿರೂಪಿಸುವ ಮೂಲಕ ಮನುಷ್ಯ ಸಂಬಂಧದಲ್ಲಿ ಉಂಟಾಗುತ್ತಿರುವ ಸಂಘರ್ಷದ ಚಿತ್ರಣವನ್ನು ಕೃತಿ ಕಟ್ಟಿಕೊಡುತ್ತದೆ. 

About the Author

ಸಿದ್ದಾರೂಢ ಕಟ್ಟಿಮನಿ
(13 August 1984)

ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು. ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು.  ...

READ MORE

Related Books