ಬಣ್ಣದ ಜೋಳಿಗೆ

Author : ಗಾಯತ್ರಿ ರಾಜ್

Pages 120

₹ 120.00
Year of Publication: 2020
Published by: ಸ್ನೇಹ ಬುಕ್ ಹೌಸ್
Address: ನಂ. 165/ಎ, ಶ್ರೀನಗರ ಬಸ್ ನಿಲ್ದಾಣದ ಹತ್ತಿರ, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು-560050
Phone: 9845031335

Synopsys

‘ಬಣ್ಣದ ಜೋಳಿಗೆ’ ಕಥಾಸಂಕಲನವು 15 ವಿಭಿನ್ನ ಕತೆಗಳಿಂದ ಕೂಡಿದ್ದು ಪ್ರೀತಿ, ಪ್ರೇಮ, ಪ್ರಣಯ , ಸರಸ, ವಿರಸ, ದ್ವೇಷ, ಕಾತುರ, ವಿಜ್ಞಾನ, ಮನೋವಿಜ್ಞಾನ, ಕಾಮ ಎಲ್ಲವೂ ಮಿಶ್ರಣ ಇಲ್ಲಿದೆ. ನಮ್ಮ ಸುತ್ತಮುತ್ತಲಿನಲ್ಲೇ ನಡೆಯಬಹುದಾದಂತ ನಮ್ಮವೇ ಕತೆಗಳಾಗುತ್ತವೆ. ಅತ್ಯಂತ ಗಂಭೀರವಾದ, ಇಂದಿಗೂ ಮುಕ್ತವಾಗಿ ಚರ್ಚಿಸಲ್ಪಡದ ವಿಷಯಗಳನ್ನೂ ಕೂಡ ಅತ್ಯಂತ ಸಹಜ ರೀತಿಯಲ್ಲಿ ಚರ್ಚಿಸುತ್ತಾ, ಕೊನೆಯಲ್ಲಿ ಓದುಗರನ್ನು ಉತ್ತಮ ಚಿಂತನೆಗೆ ದೂಡಿ ಎದ್ದುಬಿಡುತ್ತವೆ. ಪಾತ್ರಗಳು. ಸ್ತ್ರೀ ಸಹಜವಾದ ಪ್ರೀತಿ, ಮಮತೆಗಳ ಪ್ರಾಧಾನ್ಯತೆ ಇರುವ ಕತೆಗಳಂತೂ ಹೃದಯ ತಾಕುತ್ತವೆ. ಪ್ರತಿಯೊಂದು ಕತೆಯಲ್ಲೂ ರೋಚಕತೆ, ಸಸ್ಪೆನ್ಸ್ ಇದ್ದೂ, ಕತೆಗಳು ಎಲ್ಲೂ ಮುಗ್ಗರಿಸದೆ, ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. 

About the Author

ಗಾಯತ್ರಿ ರಾಜ್

ಲೇಖಕಿ, ಕತೆಗಾರ್ತಿ ಗಾಯತ್ರಿ ರಾಜ್ ಮೂಲತಃ ದಾವಣಗೆರೆಯವರು. ವಿಜ್ಞಾನ ವಿದ್ಯಾರ್ಥಿಯಾದರು ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಕತೆಗಳು ಸುಧಾ, ತರಂಗ, ಕರ್ಮವೀರದಲ್ಲಿ ಪ್ರಕಟಗೊಂಡಿದ್ದು ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿಯಲ್ಲಿ ನಿಯಮಿತವಾಗಿ ಲೇಖನ ಪ್ರಕಟಣೆ ಕಾಣುತ್ತಿವೆ. ಸಂಪದ ಸಾಲು ಎಂಬ ಪತ್ರಿಕೆಯಲ್ಲಿ ಒಂದು ವರ್ಷದಿಂದ "ಹೆಣ್ಣೆ ಬದುಕು ಸುಂದರ ಕಣೆ" ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಅವರ ಕತಾ ಸಂಕಲನ ‘ಬಣ್ಣದ ಜೋಳಿಗೆ’ ಇತ್ತಿಚೆಗೆ ಪ್ರಕಟವಾಗಿದೆ. ...

READ MORE

Related Books