ಬುದ್ಧ-ಈ ಕೃತಿಯನ್ನು ಲೇಖಕ ಸಿ.ಎಚ್. ರಾಜಶೇಖರ ಅವರು ರಚಿಸಿದ್ದು, ಈ ಕೃತಿಯಲ್ಲಿ ಬೌದ್ಧ ಧರ್ಮದ ಶಾಖೆ ಎನ್ನಲಾದ ಝನ್-ಅದರ ಮೂಲದ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಬಹುತೇಕ ಝೆನ್ ಕಥೆಗಳು ಬೆಡಗಿನ ಕಥೆಗಳು, ಕೆಲವು ಒಗಟು ರೂಪದಲ್ಲಿ, ಮತ್ತೆ ಕೆಲವು ಸಂಕೇತಾತ್ಮಕವೂ ಆಗಿರುತ್ತವೆ. ಗಾತ್ರದಲ್ಲಿ ಚಿಕ್ಕವಾದರೂ ನಿಗೂಢ ಅರ್ಥವನ್ನು ಒಳಗೊಂಡು ಜೀವನ ಸಂದೇಶಗಳನ್ನು ನೀಡುತ್ತವೆ.