ಮಂಜು ಕವಿದ ಸಂಜೆ ಮತ್ತು ಇತರೆ ಕತೆಗಳು

Author : ಪಿ. ಲಂಕೇಶ್

Pages 86

₹ 85.00




Year of Publication: 2004
Published by: ಪತ್ರಿಕೆ ಪ್ರಕಾಶನ
Address: ನಂ. 9, ಇ.ಎ.ಟಿ ಸ್ಟ್ರೀಟ್, ಬಸವನಗುಡಿ, ಬೆಂಗಳೂರು- 560004

Synopsys

‘ ಮಂಜು ಕವಿದ ಸಂಜೆ ಮತ್ತು ಇತರೆ ಕತೆಗಳು ’ ಪತ್ರಕರ್ತ, ಲೇಖಕ ಪಿ. ಲಂಕೇಶ್ ಅವರ ಕತಾಸಂಕಲನ. ಇಲ್ಲಿ ‘ಮಂಜು ಕವಿದ ಸಂಜೆ’, ‘ಡಿಸೋಜಾನ ಹೂವಿನ ವೃತ್ತಿ’, ‘ಎ ಸ್ಯೂಸೈಡ್ ನೋಟ್’, ‘ಒಂದು ಸಂಬಂಧದ ದಾಖಲೆ’, ‘ಶಾರದೆಯ ಪುಟ್ಟ ಸಾಹಸ’, ‘ಮನುಷ್ಯ ಎಂಬ ಮಾಯಾದರ್ಪಣ’, ‘ಅಂಚಿನ ಚಿತ್ರಗಳು’, ‘ಒಬ್ಬ ದಿಟ್ಟ ಮನುಷ್ಯ’, ‘ಗಡಿ’, ‘ಕ್ವೀಜುವಿನ ಹಠ’, ‘ದಯೆ ಮತ್ತು ದಾಕ್ಷಿಣ್ಯ’, ‘ಪ್ರೇಮ ಎಂಬ ವಿಸ್ಮಯ’ ಹಾಗೂ ‘ಮೃತ’ ಸೇರಿದಂತೆ ಹನ್ನೆರೆಡು ಕತೆಗಳು ಸಂಕಲನಗೊಂಡಿವೆ.

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Reviews

ಹೊಸತು-2004- ನವೆಂಬರ್‌

ಕಥೆಗಾರ ಕಥಾ ಪಾತ್ರಗಳನ್ನು ಕೇವಲ ಮನರಂಜನೆಗಾಗಿ ಮಾತ್ರ ಸೃಷ್ಟಿಸದೆ ಕಥೆಯೊಳಗಿನ ಮನುಷ್ಯನ ಸೂಕ್ಷ್ಮ ಸಂವೇದನೆಯನ್ನು ನಿಚ್ಚಳವಾಗಿ ಬಿಂಬಿಸುತ್ತಿರಬೇಕೆಂಬುದು ಲಂಕೇಶ್ ಅನಿಸಿಕೆ. ಕಲ್ಪನಾಲೋಕದ ತಾತ್ಕಾಲಿಕ ಭ್ರಮೆಗೊಳಿಸುವ ಯಾವ ಅಂಶಗಳನ್ನೂ ತಮ್ಮ ಕಥೆಗಳಲ್ಲಿ ಬಳಸದೆ ಬದುಕಿನಲ್ಲಿ ಸಹಜವಾಗಿ ಬರಬಹುದಾದ ಎಲ್ಲವನ್ನೂ ಯಾವುದೇ ಎಗ್ಗಿಲ್ಲದೆ ತೆರೆದಿಟ್ಟು ಖಡಾಖಂಡಿತವಾದಿಯಾಗಿ ತಮ್ಮಲ್ಲೊಬ್ಬ ಕಥೆಗಾರನನ್ನು ಅವರು ಕೊನೆಯವರೆಗೂ ಉಳಿಸಿಕೊ೦ಡಿದ್ದರು. ಜಾತಿವಾದಿಗಳಿಗೆ ಭಂಡರಿಗೆ ದುಃಸ್ವಪ್ನದಂತಿದ್ದ ಪತ್ರಕರ್ತ ಲಂಕೇಶ್ ಈ ಕಥೆಗಳನ್ನು ತಮ್ಮ ಕೊನೆಯ ಎರಡು ವರ್ಷಗಳಲ್ಲಿ ಬರೆದಿದ್ದು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಸಂಕಲನದಲ್ಲಿ ಹನ್ನೆರಡು ಕಥೆಗಳಿದ್ದು ಪಾಶ್ಚಾತ್ಯ ಕಥಾಪಾತ್ರಗಳ ಪ್ರಭಾವ ಸ್ವಲ್ಪಮಟ್ಟಿಗೆ ಇಲ್ಲಿಯೂ ಹಣಕಿಹಾಕಿದ್ದು ಗೋಚರಿಸುತ್ತದೆ.

Related Books