ಆರನೆಯ ಇಂದ್ರಿಯ

Author : ವಿಶ್ವಾಸ

Pages 100

₹ 60.00
Year of Publication: 2012
Published by: ಸಾಹಿತ್ಯ ಭಂಡಾರ
Address: ಬೆಂಗಳೂರು
Phone: 9481604435

Synopsys

ಲೇಖಕ ಹೆಚ್. ಆರ್. ವಿಶ್ವಾಸ ಅವರ ಕಥಾ ಸಂಕಲನ ಆರನೆಯ ಇಂದ್ರಿಯ.ಶರ‍್ಷಿಕೆಯ ಹೆಸರಿನ ಕತೆಯನ್ನೂ ಒಳಗೊಂಡಂತೆ ಒಟ್ಟು ಒಂಭತ್ತು ಸಣ್ಣಕತೆಗಳ ಸಂಕಲನ ಇದಾಗಿದೆ. ಲೇಖಕರ ಎರಡನೆಯ ಕಥಾಸಂಕಲನ ಇದಾಗಿದ್ದು ಮೊದಲ ಸಂಕಲನ ಪ್ರಕಟವಾದ ಸುಮಾರು ಹದಿನೈದು ರ‍್ಷಗಳ ಅನಂತರ ಇದು ಪ್ರಕಟವಾಗುತ್ತಿದೆ. ಕೆಲವು ಕತೆಗಳು ಈ ಮೊದಲೇ ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಕೆಲವು ಮೊದಲಬಾರಿಗೆ ಪ್ರಕಟವಾಗುತ್ತಿವೆ. ಹಿರಿಯ ವಿಮರ್ಶಕರಾದ ಪ್ರೊ. ಮಲ್ಲೇಶ್ವರಂ ಜಿ. ವೆಂಕಟೇಶ ಅವರು ಸಂಕಲನಕ್ಕೊಂದು ವಿರ‍್ಶಾತ್ಮಕವೂ, ಒಳನೋಟಗಳಿಂದ ಕೂಡಿದ್ದೂ ಆದ ಮುನ್ನುಡಿಯನ್ನು ಬರೆಯುವ ಮೂಲಕ ಪುಸ್ತಕದ ಮಹತ್ತ್ವವನ್ನು ಗುರುತಿಸಿ ಅಭಿನಂದಿಸಿದ್ದಾರೆ.

About the Author

ವಿಶ್ವಾಸ
(01 March 1959)

ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ  ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...

READ MORE

Related Books