ಅನ್ನದ ಕಥೆಗಳು

Author : ಪೂರೀಗಾಲಿ ಮರಡೇಶ ಮೂರ್ತಿ

Pages 224

₹ 220.00
Year of Publication: 2018
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: ನಂ. 06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೆಕ್ಸ್ , ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು -570004
Phone: 9449526390

Synopsys

ಅನ್ನದ ಅಗುಳುಗಳ ನೆನೆದು........ ಜಗತ್ತು ನಿಂತಿರುವುದೇ ಸತ್ಯದ ಮೇಲೆ ಎನ್ನುತ್ತಾರೆ. ಲೇಖಕರು. ಜಗತ್ತಿನ ಇಡೀ ಜೀವಸಂಕುಲ 'ತುತ್ತು ' ಅನ್ನದ ಮೇಲೆ ನಿಂತಿದೆ ಅನ್ನ ಬ್ರಹ್ಮ ಎನ್ನುವುದು, ಅನ್ನದಾತನಿಗಿಂತ ಇನ್ನಿಲ್ಲ ಎನ್ನುವುದು, ಅನ್ನವೇ ಸರ್ವಶ್ರೇಷ್ಠ ಎನ್ನುವುದು.  ಈ ಎಲ್ಲ ಅಗಮ್ಯವಾದ ಕಾರಣದಿಂದಲೇ. ಒಟ್ಟು ಬಾಳ ಬುತ್ತಿ ಯಲ್ಲಿ ಅನ್ನದ ಅಗುಳುಗಳ ಮಹತ್ವ ನೆನೆಯುವುದೇ ದೊಡ್ಡ ಮಾತು. ಈ ಹಿನ್ನೆಲೆಯಲ್ಲಿ ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅವರ "ಅನ್ನದ ಕಥೆಗಳು "  ಕೃತಿಯ ಆಶಯವಿದೆ.

ಈ ಸಂಕಲನದಲ್ಲಿ 19 ಕಥೆಗಳಿವೆ. ಇಲ್ಲಿಯ 'ಕಾಸು', 'ಅನ್ನದ ಋಣ', 'ಋಣಭಾರ' , 'ಸಂಧ್ಯಾರಾಗ', 'ಹುಣ್ಣಿಮೆಯ ನಗು', 'ಸಾಹುಕಾರ', 'ಕುರುಡು ಕಾಂಚಾಣ' ಕಥೆಗಳು ಮಾನವೀಯ ಸಂಬಂಧಗಳನ್ನು ಥಳುಕು ಹಾಕಿಕೊಂಡೇ ಸಾಗುತ್ತವೆ. ಇಲ್ಲಿಯ ಪ್ರತಿ ಕಥೆಯೂ ಮೌನದ ಆಕ್ರಂದನಗಳು ಅನ್ನದ ಮುಂದೆ ಇನ್ನಿಲ್ಲ ಎನ್ನುವ ಸತ್ಯವನ್ನು ಪ್ರತಿಪಾದಿಸುತ್ತವೆ. 

Related Books