ಛೂಮಂತ್ರಯ್ಯನ ಕಥೆಗಳು

Author : ಕೃಷ್ಣಮೂರ್ತಿ ಬಿಳಿಗೆರೆ

Pages 116

₹ 140.00
Year of Publication: 2021
Published by: ಬಹುರೂಪಿ ಪ್ರಕಾಶನ
Address: # 11- ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ., ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 07019182729

Synopsys

ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಅವರ ಕಥೆಗಳ ಸಂಕಲನ-ಛೂಮಂತ್ರಯ್ಯನ ಕಥೆಗಳು. ಕೃಷಿಲೋಕದ ವೈಚಿತ್ಯ್ರಗಳನ್ನು, ವಿಸ್ಮಯಗಳನ್ನು, ಕುತೂಹಲಗಳನ್ನು, ವೈರುದ್ಧ್ಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಜ್ಞಾನದ ಕಣಜಗಳು ಎಂಬಂತೆ ನೀಡಿದ್ದಾರೆ. ಕೃಷಿಯಲ್ಲಿಯ ಬದುಕಿನ ಪಾಠಗಳು, ನೀತಿ-ಬೋಧೆಗಳು, ಜೀವ ಸಂಕುಲಗಳ ಬದುಕು, ಕೃಷಿ ಯೋಜನೆಗಳು ಅವುಗಳ ವೈಫಲ್ಯ, ಅದಕ್ಕಿರುವ ಕಾರಣಗಳನ್ನು, ಪರಿಣಾಮಗಳ ಮುನ್ನೋಟವನ್ನು ಕಥೆಯ ಮೂಲಕವೇ ವಿಶ್ಲೇಷಿಸಿ ಮನದಟ್ಟು ಮಾಡಿಕೊಡುವುದು ಇಲ್ಲಿಯ ಬಹುತೇಕ ಕಥೆಗಳ ವೈಶಿಷ್ಟ್ಯ.

About the Author

ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಚರಿತ್ರೆಯ ಅನುಶೋಧನೆಯಲ್ಲಿ ತೊಡಗಿದ್ದಾರೆ. ಸಹಜ ಕೃಷಿ ಮತ್ತು ಮಳೆನೀರಿನ ಚಳುವಳಿಯಲ್ಲಿ ಸಕ್ರಿಯವಾಗಿರುವ ಬಿಳಿಗೆರೆಗೆ ತತ್ವಪದ ಮತ್ತು ಕೃಷಿಗಳನ್ನು ಹಾಡುವ ರೂಢಿಯಿದೆ. ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವು ಇವರ ಕಾವ್ಯ ಕೃತಿಗಳು. ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ...

READ MORE

Related Books