ಮುಗಿಯದ ಕಥೆಗಳು

Author : ಅರವಿಂದ ಮಾಲಗತ್ತಿ

Pages 108

₹ 100.00




Year of Publication: 2000
Published by: ಅಲ್ಲಮ ಪ್ರಕಾಶನ
Address: ಕಾರಟಗಿ, ಕೊಪ್ಪಳ ಜಿಲ್ಲೆ
Phone: 7899404101

Synopsys

ಲೇಖಕ ಪ್ರೊ. ಅರವಿಂದ ಮಾಲಗತ್ತಿ ಅವರ ಸಣ್ಣ ಕಥೆಗಳ ಸಂಕಲನ-ಮುಗಿಯದ ಕಥೆಗಳು. ಇಲ್ಲಿಯ ಕಥೆಗಳ ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. ಕಥೆಗಳು ಶೋಷಣೆಗಳನ್ನು ಬಿಂಬಿಸುತ್ತವೆ. ಆದರೆ, ಮಾನವೀಯತೆಯನ್ನುಆಶಿಸುತ್ತವೆ. ಇಂತಹ ಆಶಯವು ಜೀವನ ಸಾರ್ಥಕತೆಯ ಅಂಶವೂ ಹೌದು ಎಂಬುದನ್ನು ಸಮರ್ಥಿಸಿಕೊಳ್ಳುತ್ತವೆ.

About the Author

ಅರವಿಂದ ಮಾಲಗತ್ತಿ
(01 August 1956)

ಡಾ.ಅರವಿಂದ ಮಾಲಗತ್ತಿಯವರು 01-08-1956ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ.  ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಡಾ. ಅರವಿಂದ ಮಾಲಗತ್ತಿ ಕನ್ನಡ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ...

READ MORE

Related Books