ನೈದಿಲೆಯ ಒಡಲು

Author : ನಾರಾಯಣ ಯಾಜಿ

Pages 112

₹ 100.00




Year of Publication: 2020
Published by: ಗೀತಾಂಜಲಿ ಪಬ್ಲಿಕೇಶನ್ಸ್
Address: ನಂ.60, 2ನೇ ’ಡಿ’ ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072
Phone: 9740066842

Synopsys

ನಾರಾಯಣ ಯಾಜಿ ಅವರ ಮೊದಲ ಕಥಾ ಸಂಕಲನ-ನೈದಿಲೆಯ ಒಡಲು. ಸಾಮಾಜಿಕ ಸಮಸ್ಯೆಗಳು  ಇಲ್ಲಿಯ ಕಥಾ ವಸ್ತು. ಪಾತ್ರಗಳ ಮೇಲೆ ತಮ್ಮ ನಿಲುವನ್ನು ಹೇರದೆ, ತಾತ್ವಿಕ ಆಲೋಚನೆಗೆ ಮಾತ್ರ ಆಸ್ಪದ ನೀಡುವ ಕಥೆಗಳು ಸಮಸ್ಯೆಗಳನ್ನು ಹೆಚ್ಚಾಗಿ ಪ್ರತಿಬಿಂಬಿಸುವುದು ವಿಶೇಷ. ‘ನೈದಿಲೆಯ ಒಡಲು’ ಕಥೆ ಸಾಂದರ್ಭಿಕವಾಗಿ ಅನುಮಾನ, ತುರ್ತು ನಿರ್ಧಾರಗಳಿಂದ ಆಗಬಹುದಾದ ಅನಾಹುತವನ್ನು ಚಿತ್ರಿಸುತ್ತದೆ.

 

About the Author

ನಾರಾಯಣ ಯಾಜಿ

ಕಲಾವಿದ, ಕತೆಗಾರ ನಾರಾಯಣ ಯಾಜಿ ಅವರು ಉತ್ತರ ಕನ್ನಡದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವವರು. ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕರಾಗಿದ್ದು, ‘ನೈದಿಲೆಯ ಒಡಲು’ ಅವರ ಮೊದಲ ಕಥಾ ಸಂಕಲನ. ಉತ್ಥಾನ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಅವರ ‘ವ್ಯಸ್ತ’ ಕಥೆಗೆ ಬಹುಮಾನ ಲಭಿಸಿದೆ. ...

READ MORE

Related Books