ಕನಸುಗಳ ಹೊತ್ತವರು

Author : ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್

Pages 86

₹ 50.00
Year of Publication: 2016
Published by: ವನಿತಾ ಪ್ರಕಾಶನ
Address: ವಿವೇಕಾನಂದ ನಗರ, ಹುಲಿಯೂರುದುರ್ಗ -572123
Phone: 9972571560

Synopsys

ಕನಸುಗಳ ಹೊತ್ತವರು ಕೃತಿಯಲ್ಲಿ ಒಟ್ಟು 12 ಕಥೆಗಳಿವೆ. ‘ವಿಧಿ ಬರಹ, ಪೆಟ್ಗೆ ಅಂಗ್ಡಿಲಿರೋ ಬುಕ್ಕು, ಹೆತ್ತವಳು, ಗೆದ್ದವರು, ಬದಲಾದವರು, ಇರಕ್ಕೊಂದು ಗೂಡು ಕಟ್ಕೋಬೇಕು, ಮೇಟಿ ಮುರಿದಾದ್ಮೇಲೆ, ಒಡಲೊಳಗಿನ ಗುಟ್ಟು, ಕನಸುಗಳ ಹೊತ್ತವರು, ಕರಿಯನ ನಾಯಿ, ಸಾವು -ನಾವು, ನೊಂದವರು’ ಈ ಎಲ್ಲಾ ಕಥೆಗಳು ಗ್ರಾಮೀಣ ಸೊಗಡಿನಲ್ಲಿ ಮಿಂದು ಬಂದವುಗಳಾಗಿವೆ. ಇಲ್ಲಿನ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ.

About the Author

ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್
(24 October 1976)

ಲೇಖಕ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ಅವರು ಮೂಲತಃ ತುಮಕೂರು ಜಿಲ್ಲಿಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದರ್ಗದವರು. ಹುಟ್ಟಿದ್ದು 1976 ಅಕ್ಟೋಬರ್‌ 24ರಂದು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಹೆಜ್ಜೆ ಹಾಕುತ್ತಿದ್ದು, ಗ್ರಾಮೀಣ ಬದುಕಿನ ಚಿತ್ರವನ್ನು ಹೆಕ್ಕಿ ತಮ್ಮ ಕೃತಿಗಳಲ್ಲಿ ನೈಪುಣ್ಯವಾಗಿ ಕಟ್ಟಿಕೊಡುತ್ತಾರೆ. ಅವರ ಮೊದಲ ಕವನ ಸಂಕಲನ ‘ಸಂಕೋಲೆ’ 2005ರಲ್ಲಿ ಪ್ರಕಟಣೆ ಕಂಡಿತು. ನಂತರ ‘ಕರುನಾಡಿಗೆನ್ನ ನಮನ, ನಾಡಪ್ರಭು ಕೆಂಪೇಗೌಡ ಮತ್ತು ಇತರ ನಾಟಕಗಳು, ಕನಸುಗಳು ಹೊತ್ತವರು ಹಾಗೂ ಇತರ ಕತೆಗಳು, ಹಳೇವೂರ ಮಡಿಲು, ಹುಲಿಯೂರ ಸೊಗಡು’ ಅವರ ಪ್ರಮುಖ ಕೃತಿಗಳು. ಪ್ರತಿ ತಿಂಗಳು ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ...

READ MORE

Related Books