’ವರ್ಜಿನ್ ಮೊಹಿತೊ’ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆಯವರ ಎರಡನೇ ಕತಾಸಂಕಲನ. ಈ ಕೃತಿಯಲ್ಲಿ ಒಟ್ಟು ಏಳು ಕತೆಗಳು ಸಂಕಲಗೊಂಡಿದ್ದು, ಒಂದೊಂದು ಕತೆಯೂ ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವ ರೀತಿ, ತಂತ್ರ, ಭಾಷೆ, ನೇಯ್ಗೆಗಳಲ್ಲಿಯೂ ವೈವಿಧ್ಯ ಸಾಧಿಸಲು ಸಾಧ್ಯವಾಗಿರುವುದು ವಿಶೇಷ. ಒಂದರ ಹೆಜ್ಜೆ ಜಾಡಿನಲ್ಲಿ ಮತ್ತೊಂದು ಸಾಗದೇ ಇರುವ ಹಾಗೆ ಕತೆ ಕಟ್ಟಿರುವ ರೀತಿ ಗಮನ ಸೆಳೆಯುತ್ತದೆ. ’ವರದಿ’ಯಾಗದೇ ’ಕತೆ’ಯಾಗಿಸುವ ಕಸುಬುಗಾರಿಕೆ ಇಲ್ಲಿನ ಕತೆಗಳಲ್ಲಿ ಕಾಣಸಿಗುತ್ತದೆ. ಜೊತೆಗೆ ಅತೀ ಎನ್ನಿಸದ ಭಾವನಾತ್ಮಕ ಅಂಶ ಈ ಕತೆಗಳ ಕೇಂದ್ರದಲ್ಲಿವೆ. ನವ್ಯೋತ್ತರ ಕಾಲಘಟ್ಟದ ಕನ್ನಡದ ಕತೆಗಳ ಮುಂದುವರಿಕೆಯಂತಿರುವ ಈ ಸಂಕಲನದ ಕತೆಗಳು ’ವರ್ತಮಾನ’ಕ್ಕೆ ಮಿಡಿಯುತ್ತವೆ. ಅಷ್ಟು ಮಾತ್ರವಲ್ಲದೇ, ಸಮಕಾಲೀನ ಸಂಕೀರ್ಣ ಬದುಕಿನ ಸಂಘರ್ಷವನ್ನು ತಣ್ಣನೆಯ ಧಾಟಿಯಲ್ಲಿ ಕಟ್ಟಿಕೊಡುತ್ತವೆ.
ಇಲ್ಲಿಯ ಕತೆಗಳಲ್ಲಿಯ ವ್ಯಕ್ತಿಗಳು-ವ್ಯಕ್ತಿತ್ವಗಳು ’ಮಾನವೀಯ’ ನೆಲೆಯಲ್ಲಿ ಮಿಡಿಯುವುದು ’ತಂತ್ರ’ ಅಲ್ಲ. ಬದಲಿಗೆ, ಲೇಖಕರ ಬದುಕಿನ ಬಗೆಗಿನ ’ಕಾಳಜಿ’ಯು ಪಾತ್ರಗಳ ರೂಪದಲ್ಲಿ ಕತೆಗಳಾಗಿವೆ” ಎಂದಿದ್ದಾರೆ ಲೇಖಕ ದೇವು ಪತ್ತಾರ. ಆಷಾಢದ ಆಗಸದಲ್ಲಿ ತೇಲಿ ಬರುವ ದಟ್ಟ ಮೋಡಗಳಂತೆ ಸುಯ್ಯನೆ ಬೀಸುವ ಇಲ್ಲಿಯ ಕತೆಗಳು ಓದುಗನಲ್ಲಿ ಭಾವಗಳ ಭೋರ್ಗರೆತವನ್ನು ಹೊಮ್ಮಿಸುತ್ತವೆ. ಆಧುನಿಕತೆಗೆ ಒಗ್ಗಿಕೊಂಡ ಮನ ಬಿಡುಗಡೆಗೆ ಹಂಬಲಿಸುತ್ತಾ ಕಾಲದೊಂದಿಗೆ ಚಲಿಸುವ ಪಾತ್ರಗಳು, ನೇರವಾಗಿ ಬಿತ್ತನೆಯಾಗುವ ಕತೆಗಳು ಸಲೀಸಾಗಿ ಓದಿಸಿಕೊಂಡು ಹೋಗುವ ಗುಣವನ್ನು ಈ ಸಂಕಲನ ಹೊಂದಿವೆ.
‘ವರ್ಜಿನ್ ಮೊಹಿತೊ’ ಕೃತಿ ಕುರಿತು ಸತೀಶ್ ಚಪ್ಪರಿಕೆ ಮುಖಾಮುಖಿ
ದುರ್ಬರ ಕ್ಷಣದಿಂದ ಆವಿರ್ಭವಿಸಿದ ಆರ್ದ್ರತೆಯ ಕತಾಗುಚ್ಛ ‘ವರ್ಜಿನ್ ಮೊಹಿತೊ’-ಜೋಗಿ
ಕಣ್ಮುಂದೆ ಚಲಿಸುವ ಸಿನಿಮೀಯ ಅನುಭವ `ವರ್ಜಿನ್ ಮೊಹಿತೊ'-ಗಾಯತ್ರಿ ರಾಜ್
ಹತ್ತಾರು ವರ್ಷಗಳು ಕತೆ ಬರೆಯದೇ ಇದ್ದದ್ದು ಅಕ್ಷಮ್ಯ-ಶಿವಕುಮಾರ್ ಮಾವಲಿ
ಹೈಡ್ ಪಾರ್ಕ್ ಕಥೆ: ‘ದ್ವಂದ್ವ’ ಪರಿಕಲ್ಪನೆಯ ಸುಂದರ ಅನಾವರಣ- ವೆಂಕಟೇಶ ಮಾನು
ಒಳಿತಿನ ಕಡೆಗಿನ ನಡೆ: ವರ್ಜಿನ್ ಮೊಹಿತೊ ಯಶಸ್ಸಿಗೆ ಮೂಲ ಕಾರಣ-ವಸುಧೇಂದ್ರ
ಜೀವನ ಪ್ರೀತಿಯ ‘ವರ್ಜಿನ್ ಮೊಜಿತೊ’-ಕೃಷ್ಣ ಪ್ರಕಾಶ ಉಳಿತ್ತಾಯ
ಹೃದಯದ ಸಾಂಗತ್ಯ ‘ವರ್ಜಿನ್ ಮೊಹಿತೊ’-ಸದಾನಂದ ಕೆ. ಸಿ.
ತಾಜಾತನದಿ ಚಿಮ್ಮಿದ ‘ವರ್ಜಿನ್ ಮೊಹಿತೊ’-ಮೇಘನಾ ಸುಧೀಂದ್ರ
ಅದಮ್ಯ ಪ್ರೇಮದ ನವಿರು ಬಳ್ಳಿ ‘ವರ್ಜಿನ್ ಮೊಹಿತೊ’-ರಾಹುಲ್ ಬೆಳಗಲಿ
ಎಲ್ಲ ಇಸಂಗಳನ್ನು ಮೀರಿದ ಕೇಂದ್ರ ಪ್ರಜ್ಞೆಯುಳ್ಳ ಹೊಸಹಾದಿ: ಅಮೃತಹಳ್ಳಿ ಲಕ್ಷ್ಮೀನಾರಾಯಣ
ವಸಾಹತೋತ್ತರ ಬದುಕಿನ ಬಿಕ್ಕಟ್ಟುಗಳ ಕಥನ : ರಾಜಶೇಖರ್ ಹಳೆಮನೆ
©2021 Bookbrahma.com, All Rights Reserved