ಕಪ್ಪು- ಬಿಳುಪು

Author : ವಿಶ್ವನಾಥ್ ಎನ್. ನೇರಳಕಟ್ಟೆ

Pages 48

₹ 60.00
Year of Publication: 2014
Published by: ವಿ.ಎನ್. ನೇರಳೆಕಟ್ಟೆ
Address: ಪಂತಡ್ಕ ಹೌಸ್, ಶ್ರೀ ಮಂಜುನಾಥ ನಿಲಯ, ನೇರಳಕಟ್ಟೆ, ಬಂಟ್ವಾಳ, ದಕ್ಷಿಣ ಕನ್ನಡ- 574253

Synopsys

‘ಕಪ್ಪು- ಬಿಳುಪು’ ವಿ.ಎನ್. ನೇರಳಕಟ್ಟೆ (ವಿಶ್ವನಾಥ ಎನ್. ನೇರಳಕಟ್ಟೆ) ಅವರ ಕಥಾಸಂಕಲನ. ಇತರೆ ಸಾಹಿತ್ಯ ಪ್ರಕಾರಗಳಂತೆ ಸಣ್ಣಕಥೆಯನ್ನು ಅದರ ಎಲ್ಲ ಲಕ್ಷಣಗಳು ಅಡಕವಾಗುವ ಹಾಗೆ- ನಿರೂಪಿಸುವುದು ಸಾಧ್ಯವಾಗದ ಸಂಗತಿ. ಸಾಮಾನ್ಯವಾಗಿ ಅದನ್ನು ಪರಿಮಿತ ವಿಸ್ತಾರದ ಗದ್ಯ ನಿರೂಪಣೆ ಎಂದು ಕರೆಯುತ್ತಾರೆ. ಓದಲು ಅರ್ಧ ತಾಸಿನಿಂದ ಒಂದು ಅಥವಾ ಎರಡು ತಾಸುಗಳ ಕಾಲ ತೆಗೆದುಕೊಳ್ಳುವ ಗದ್ಯ ನಿರೂಪಣೆ ಎಂದು ಆಂಗ್ಲ ಸಾಹಿತಿಯೊಬ್ಬ ಸಣ್ಣ ಕಥೆಯನ್ನು ವಿವರಿಸಿದ್ದಾನೆ. ಯಾವುದಾದರೊಂದು ಪಾತ್ರ, ಘಟನೆ ಅಥವಾ ಭಾವನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ಲೇಖಕನು ಅತ್ಯಂತ ಸಂಕ್ಷಿಪ್ತವಾಗಿ ತಾನು ಹೇಳಬೇಕಾದುದನ್ನು ಓದುಗನಿಗೆ ದಾಟಿಸುತ್ತಾನೆ. ಪ್ರತಿಯೊಂದು ಕಥೆಯಲ್ಲೂ ಅರ್ಥಪೂರ್ಣ ಆರಂಭ, ಸಹಜವಾದ ನಿರೂಪಣೆ ಮತ್ತು ಸಮಂಜಸವಾದ ಅಂತ್ಯ ಇರಬೇಕು ಎನ್ನುವುದು ವಿಮರ್ಶಕರ ಅಭಿಪ್ರಾಯ. ಕಥೆಯು ಹೊಸತಿರಲಿ, ಹಳೆಯದರಲಿ ಹೇಳುವವನ (ಬರೆಯುವವನ) ಕಲೆಗಾರಿಕೆಗೆ ಓದುಗರು ಪ್ರಾಧಾನ್ಯ ನೀಡುತ್ತಾರೆ. ಇದು ಸಹಜ. ಏಕೆಂದರೆ ಅದರಲ್ಲಿ ಅಡಕವಾಗಿರುವ ಸಂಗತಿಗಳು, ಪಾತ್ರಗಳು ಜನಸಾಮಾನ್ಯರಿಗೆ ಒಂದಲ್ಲ ಒಂದು ರೀತಿ- ಸಂದರ್ಭಗಳಲ್ಲಿ ಪರಿಚಿತವೇ ಆಗಿರುತ್ತದೆ. ಅಂಥ ಓದಿಸಿಕೊಳ್ಳುವ ಗುಣವನ್ನು ಇಲ್ಲಿನ ಕಥೆಗಳು ಹೊಂದಿವೆ. ಭಾಷೆಯು ಸರಳವಾಗಿದೆ. 

About the Author

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ. ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ...

READ MORE

Related Books