ಬಿ ಕ್ಯಾಪಿಟಲ್

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 152

₹ 130.00




Year of Publication: 2017
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಪತ್ರಕರ್ತ, ಬರಹಗಾರ ಜೋಗಿಯವರ ಕೃತಿ ’ಬಿ ಕ್ಯಾಪಿಟಲ್’ ಮಹಾನಗರದ ಕಥನಗಳನ್ನು ಈ ಕೃತಿ ಪರಿಚಯಿಸುತ್ತದೆ. ಇಪ್ಪತ್ನಾಲ್ಕು ಕಥನಗಳನ್ನು ಈ ಕೃತಿ ಒಳಗೊಂಡಿದೆ.

ಬೆಂಗಳೂರು ನಗರ ಕೆಲವಾದರೂ ಕನಸುಗಳನ್ನು ಈಡೇರಿಸುತ್ತಾ ಅಷ್ಟೇ ಹಗಲೆಲ್ಲ ದುಡಿದು ರಾತ್ರೆ ನಿದ್ದೆಗೆಂದು ದಿಂಬಿಗೆ ತಲೆಯಿಟ್ಟು ಮಲಗಿದಾಗ ಕನಸುಗಳಲ್ಲಿ ಕಾಣುವುದು ಮಾತ್ರ ನಮ್ಮ ಊರೇ ಎಂಬ ಭಾವುಕ ಲೋಕದತ್ತ ಲೇಖಕ ಜೋಗಿ  ಅನುಭವವನ್ನು ಆಫ್ರಿಕಾದಿಂದ ಇಂಗ್ಲೆಂಡಿಗೆ ವಲಸೆ ಬಂದ ಆಲ್ಬರ್ಟ್ ವಾಜ್ದಾನ ಉಲ್ಲೇಖ ಮಾಡುತ್ತ ದೃಢೀಕರಿಸುತ್ತಾರೆ. ಈ ಕಥನಗಳು ಬೆಂಗಳೂರಿನ ಹಲವು ಸೀಳು ಮುಖಗಳನ್ನು ಪರಿಚಯಿಸುತ್ತವೆ

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books