ದೇವರ ಕಾಡು

Author : ಗುರುಪಾದ ಬೇಲೂರು (ಗುರುಪಾದ ಸ್ವಾಮಿ ಬಿ.ಜಿ.)

Pages 148

₹ 90.00
Year of Publication: 2011
Published by: ಸಿವಿಜಿ ಇಂಡಿಯಾ
Address: ಕ ಸ್ತೂರ ಬಾ ಭವನ, ಗಾಂಧಿ ಭವನದ ಆವರಣ ಕುಮಾರಪಾರ್ಕ್ ಈ ಸ್ಟ್, ಬೆಂಗಳೂರು. 560001
Phone: 080-28372643

Synopsys

’ದೇವರ ಕಾಡು’ ಐದು ಕಥೆಗಳ ಸಂಕಲನ. ಇಲ್ಲಿ ದೇವರ ಕಾಡು ಮತ್ತು ಮಿಂಚಿನಬಳ್ಳಿ ಎಂಬುದು ನೀಳ್ಗತೆಗಳಾದರೆ, ಡಾಲರ್ ಸಿಕ್ಕಿದ ಕಥೆ, ಅನಂತ, ಹೊನ್ನಗಿಂಡಿ ಇವು ಸಣ್ಣ ಕಥೆಗಳು.

ಪ್ಯಾರಾಗ್ಲೈಡಿಂಗ್ ಪರಿಣಿತ ಸಿದ್ಧಾರ್ಥ, ಕೊಡಗಿನ ಉತ್ಸಾಹಿ ಯುವಕ  ಸುನೀಲನ ಒತ್ತಾಯಕ್ಕೆ ಕಟ್ಟುಬಿದ್ದು ಪಶ್ಚಿಮಘಟ್ಟಗಳಲ್ಲಿ ಗ್ಲೈಡಿಂಗ್ ನಡೆ ಸಲು ಹೋದಾಗ, ಅವನು ಎದುರಿಸುವ ವಿಚಿತ್ರ  ಸನ್ನಿವೇಶಗಳ ಚಿತ್ರಣವಿದೆ. ಅರಣ್ಯ ಪ್ರದೇಶಗಳ ಮೇಲೆ ನಡೆಯುವ ಅತಿಕ್ರಮಣ, ಅದರಿಂದ ಕಾಡನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದ ಬುಡಕಟ್ಟು ಜನರ, ಅವರ ಹಳ್ಳಿಗಳ ಅತಂತ್ರ ಸ್ಥಿತಿ, ಪರಿಸರ ರಕ್ಷಣೆಗೆ ಹೋರಾಡುವ ಯುವಕರಿಬ್ಬರ ಕಥೆ.

ಮಿಂಚಿನಬಳ್ಳಿ, ಪ್ರಕೃತಿಯ ವಿರುದ್ದವಾಗಿ ನಡೆಯುವ ಮಾನವನಿಗೆ ಆ ಪ್ರಕೃತಿಯೇ ಪಾಠ ಕಲಿಸುವ ಕಥೆಯನ್ನು ವಿಶಿಷ್ಟವಾಗಿ ಹೇಳಲಾಗಿದೆ. ಪ್ರೇಮ, ಕೊಲೆ, ಪತ್ತೇದಾರಿಕೆ, ವಿಜ್ಞಾನದ ರಹಸ್ಯಗಳನ್ನು ಒಳಗೊಂಡಂತೆ ಕುತೂಹಲ ಮೂಡಿಸುವ ಕಥೆ.

ಉಳಿದ  ಸಣ್ಣ ಕಥೆಗಳಲ್ಲಿ ಆಯಾ ಕಾಲಮಾನದಲ್ಲಿ ನಡೆದ ಆಸಕ್ತಿ ಮೂಡಿಸುವ ಘಟನೆಗಳನ್ನು ಮತ್ತೊಂದು ದೃಷ್ಠಿಕೋನದಲ್ಲಿ ನೋಡುವ ಪ್ರಯತ್ನ ಮಾಡಲಾಗಿದೆ.

About the Author

ಗುರುಪಾದ ಬೇಲೂರು (ಗುರುಪಾದ ಸ್ವಾಮಿ ಬಿ.ಜಿ.)
(13 April 1961)

’ಗುರುಪದಾ ಬೇಲೂರ’ ಶ್ರೀ ಗುರುಪದಾಸ್ವಾಮಿ ಬಿ ಜಿ ಅವರ ಕಾವ್ಯನಾಮ.  ವೃತ್ತಿಯಿಂದ ಸರ್ಕಾರಿ ಇಂಜಿನಿಯರ್‌ ಆಗಿರುವ ಗುರುಪಾದ ಸ್ವಾಮಿಯವರ ಹಲವು ಸಣ್ಣ ಕಥೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಅವರು ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಕಾರಗಳನ್ನು ವಿಕೇಂದ್ರೀಕರಣ ಮಾಡುವ ಹಿಂದಿನ ಉಪಕ್ರಮಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ಗ್ರಾಮೀಣ ಸಂಪರ್ಕ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದ್ದರು. ಅವರು ವಾಟರ್ ಸೆಕ್ಟರ್ನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇಂಟಿಗ್ರೇಟೆಡ್ ವಾಟರ್ ಸಂಪನ್ಮೂಲ ನಿರ್ವಹಣಾ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ಪಾತ್ರ ವಹಿಸಿದ್ದಾರೆ. ಗುರುಪಾದ ಸ್ವಾಮಿಯವರು ತನ್ನ ಕೆಲಸದ ಅನುಭವಗಳನ್ನು ...

READ MORE

Related Books