ಯಂಕ್ ಪೋಸ್ಟ್

Author : ಶ್ರೀದೇವಿ ಕಳಸದ

Pages 112

₹ 140.00
Year of Publication: 2022
Published by: ಮನೋಹರ ಗ್ರಂಥಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: +91 9845447002 / 0836-2441822

Synopsys

ಲೇಖಕಿ ಶ್ರೀದೇವಿ ಕಳಸದ ಅವರ ಕತೆಗಳ ಸಂಕಲನ ಯಂಕ್ ಪೋಸ್ಟ್ . ಕೃತಿಯಲ್ಲಿ ವಿವೇಕ ಶಾನಭಾಗ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಅನುಭವ ಮತ್ತು ಅದರ ಗ್ರಹಿಕೆಯ ನಡುವಿನ ಪ್ರಕ್ಷುಬ್ಧ ಅವಕಾಶದಲ್ಲಿ ಇಲ್ಲಿಯ ಕತೆಗಳು ಮೈದಳೆದಿವೆ. ಖಾಸಗಿ ಭಾವನೆ, ಸಂಬಂಧಗಳ ಸಾರ್ವಜನಿಕ ಪ್ರದರ್ಶನದ ಅಶ್ಲೀಲತೆಯು ಸಹಜವಾಗಿ ಕಾಣುತ್ತಿರುವ ಇಂದಿನ ಕಾಲದಲ್ಲಿ, ತಂತ್ರಜ್ಞಾನದ ಬೆಳವಣಿಗೆಗಳಿಂದ ಇಂದ್ರಿಯಗಮ್ಯತೆಯು ಸಂಶಯಾಸ್ಪದವಾಗಿರುವ ಸಮಯದಲ್ಲಿ, ವಿಘಟಿತ ಅನುಭವಗಳ ಅಮೂರ್ತತೆ, ಅಸಂಗತತೆಯನ್ನು ಅರಿಯುವ ಅಸಾಮಾನ್ಯ ಕೆಲಸವನ್ನು ಕೈಗೆತ್ತಿಕೊಂಡಿರುವುದು ಶ್ರೀದೇವಿಯವರ ಕಥೆಗಳ ಬಹುಮುಖ್ಯ ಸಾಧನೆಯಾಗಿದೆ. ಆಧುನಿಕ ಸ್ತ್ರೀ ಸಂವೇದನೆಯಿಂದ ರೂಪಗೊಂಡ ಅವರ ಜೀವನದೃಷ್ಟಿಯು ಎಲ್ಲ ಮಾರ್ಗ, ವಾದ, ಪಂಥಗಳ ಸರಹದ್ದುಗಳನ್ನು ಅರಗಿಸಿಕೊಂಡು ಮನುಷ್ಯನ ಪಾಡೊಂದನ್ನೇ ಹೃದಯದಲ್ಲಿರಿಸಿಕೊಂಡಿದೆ. ಸನ್ನಿವೇಶದ ವಿವರಗಳಿಗೆ ಕೊಡುವ ಗಮನ, ಪಾತ್ರಗಳ ಅಂತರಂಗವನ್ನು ಕಾಣಿಸುವಲ್ಲಿ ತೋರುವ ಶ್ರದ್ಧೆ, ವೈರುದ್ಧ್ಯಗಳನ್ನು ಕಣ್ಣಿಟ್ಟು ನೋಡುವ ಎದೆಗಾರಿಕೆ ಮತ್ತು ಅವ್ಯಕ್ತವನ್ನು ಸೂಚಿಸುವಲ್ಲಿ ತೋರುವ ಆತ್ಮವಿಶ್ವಾಸ – ಎಲ್ಲವೂ ಸಶಕ್ತ ಕಲೆಗಾರಿಕೆಯ ದ್ಯೋತಕವಾಗಿವೆ ಎಂಬುದಾಗಿ ಬರೆದಿದ್ದಾರೆ.

About the Author

ಶ್ರೀದೇವಿ ಕಳಸದ
(25 August 1981)

ಶ್ರೀದೇವಿ ಕಳಸದ ಅವರು ಲೇಖಕಿ ಹಾಗೂ ಪರ್ತಕರ್ತೆ. ತಂದೆ ಡಾ. ದೇವದಾಸ ಕಳಸದ, ತಾಯಿ-ಕೌಸಲ್ಯ ಕಳಸದ .ಜನನ 25-08-1981 ರಂದು.  ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಿಂದೂಸ್ತಾನಿ ಸಂಗೀತ ಕಲಾವಿದೆ.  ಸಂಗೀತ ಶಿಕ್ಷಕಿಯಾಗಿ ಪಾಠ ಹೇಳಿ ಕೊಡುತ್ತಾರೆ. ಭಾವಗೀತೆಗಳಿಗೆ ಸ್ವರ-ಸಂಯೋಜಿಸಿ ಹಾಡುವುದು ಹಾಗೂ ಕಾರ್ಯಕ್ರಮ ನಿರೂಪಕಿಯೂ ಹೌದು.  ಚಿತ್ರಕಲೆ ಇವರ ಹವ್ಯಾಸ. ಹಿನ್ನೆಲೆ ಧ್ವನಿ, ಸ್ಕ್ರಿಪ್ಟಿಂಗ್, ಕಾನ್ಸೆಪ್ಟ್ ಕ್ರಿಯೇಷನ್, ಇಲ್ಲಸ್ಟ್ರೇಷನ್ ವಲಯದಲ್ಲಿ ಜಾಣ್ಮೆ ಇದೆ.  ಹಾಡಾಗದ ಸಾಲುಗಳು -ಇವರ ಮೊದಲ ಕವನ ಸಂಕಲನ.  ಮೈಸೂರು ವಿವಿಯ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಯೋಜನೆಗೆ ‘ನೀರು ಹೇಳುವ ನೀರೆಯರ ಕಥೆಗಳು’ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ...

READ MORE

Related Books