ಕಾಸರಗೋಡಿನ ಸಣ್ಣ ಕತೆಗಳು

Author : ವಸಂತಕುಮಾರ ಪೆರ್ಲ

Pages 365

₹ 120.00
Year of Publication: 2004
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560 018

Synopsys

‘ಕಾಸರಗೋಡಿನ ಸಣ್ಣ ಕಥೆಗಳು’ ಕೃತಿಯನ್ನು ವಸಂತಕುಮಾರ ಪೆರ್ಲ, ನಾರಾಯಣ ಕಂಗಿಲ, ಎಸ್.ಪ್ರದೀಪ ಕುಮಾರ ಕಲ್ಕೂರ, ಡಾ.ಲಲಿತಾ ಎಸ್.ಎನ್.ಭಟ್ ಸಂಪಾದಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಕಳೆದ ಒಂದು ನೂರು ವರ್ಷಗಳಲ್ಲಿ ನೆರೆಯ ಕಾಸರಗೋಡಿನಲ್ಲಿ ಮೂಡಿ ಬಂದ ಕನ್ನಡ ಪ್ರಾತಿನಿಧಿಕ ಸಣ್ಣ ಕಥೆಗಳ ಪುಸ್ತಕವಿದು. ಕಳೆದ ಒಂದು ಶತಮಾನದಲ್ಲಿ, ಅದರಲ್ಲೂ ಗಡಿನಾಡ ಕನ್ನಡ ಸಾಹಿತ್ಯ ನಡೆದು ಬಂದ ಕತೆಯನ್ನು ಯಾರೂ ಪೂರಾಪುಟ್ಟವಾಗಿ ಹೇಳಲಿಕ್ಕೆ ಬರುವುದಿಲ್ಲ. ಆ ಕೆಲಸವನ್ನು ಈ ಪುಸ್ತಕ ಮಾಡುತ್ತದೆ. ಕೇವಲ ಸಾಹಿತ್ಯಿಕವಾಗಿಯಷ್ಟೇ ಅಲ್ಲದೆ, ಮೊದಲೇ ಹೇಳಿದಂತೆ, ಎಲ್ಲಾ ಸಕಲ ಆಯಾಮಗಳನ್ನೂ ನಮ್ಮ ಕಣ್ಣಿಗೆ ಕಟ್ಟಿಕೊಡುವ ಅಪರೂಪದ ಪುಸ್ತಿಕೆಯಿದು. ಕೇವಲ ನಗರ ಕೇಂದ್ರಿತ, ವಿಶ್ವವಿದ್ಯಾಲಯದಲ್ಲಿರುವವರ ರಚನೆಯಷ್ಟೇ ಸಾಹಿತ್ಯವಲ್ಲ. ದೂರ, ಕಾಣದ ಹಳ್ಳಿಯಲ್ಲಿ ಶ್ರದ್ಧೆಯಿಂದ ಕೂತು ಅಕ್ಷರಕ್ಕೆ ಅಕ್ಷರ ಚೊಕ್ಕಂದಗಾಣಿಸಿ ಅದನ್ನು ಕುಸುರಿಯಾಗಿಸುವ, ಕಲೆಯನ್ನಾಗಿಸುವ, ಅಜ್ಞಾತಿಯ ಸೃಜನಶೀಲತೆಯೂ ಯಾವ ಮಾನದಂಡಗಳಿಗೂ ಕಡಿಮೆಯಿಲ್ಲದ ಸಾಹಿತ್ಯವೇ ಆಗಬಲ್ಲದು. ಕಯ್ಯಾರ ಕಿಞ್ಙಣ್ಣ ರೈ ಅವರ ಅನ್ನದೇವರು, ಬೇಕಲ ರಾಮನಾಯಕನ ಸುಬ್ಬಯ್ಯ ಶಾನುಭೋಗ, ಗಣಪತಿ ಮೊಳೆಯಾರರ ಸಿಡಿಲು ಮರಿ, ಮಾ.ಭ.ಪೆರ್ಲ ಅವರ ಮೃತ್ಯುಂಜಯ, ಎಂ.ವ್ಯಾಸ ಅವರ ಚಕ್ರ, ಸೇರಿದಂತೆ 40 ಲೇಖಕರ ಬರವಣಿಗೆ ಈ ಕೃತಿಯಲ್ಲಿ ಲಭ್ಯವಿದೆ.

About the Author

ವಸಂತಕುಮಾರ ಪೆರ್ಲ
(02 July 1958)

ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಧಾರ್ಮಿಕ, ವೈದಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರುಗಳಿಸಿರುವ ಲೇಖಕ ವಸಂತಕುಮಾರ ಪೆರ್ಲ. ಅವರು ಕಾಸರಗೋಡಿನ ಪುಟ್ಟ ಊರಾದ ಪೆರ್ಲದಲ್ಲಿ 1958ರ ಜುಲೈ 2ರಂದು ಜನಿಸಿದರು. ಈ ಪೆರ್ಲ ಭರಿನ ಹೆಸರಿಗೆ ಕೀರ್ತಿ ತಂದವರಲ್ಲಿ ವಸಂತಕುಮಾರ್ ಒಬ್ಬರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಳತ್ಕ್ತಡ್ಕ ಶಾಲೆಯಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪೂರೈಸಿದರು. ಪದವಿ, ಉನ್ನತ ಪದವಿಯನ್ನು ಮತ್ತು ರಂಗಭೂಮಿ ವಿಷಯದಲ್ಲಿ ಡಾಕ್ಟರೇಟ್. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆೆ.  ಹೈಸ್ಕೂಲ್ ವಿದ್ಯಾಭ್ಯಾಸದ ಕಾಲದಲ್ಲೇ ಕಥೆಗಳನ್ನು ಬರೆಯ ತೊಡಗಿದ ಅವರು ಬೆಂಗಳೂರಿನ ಪ್ರಜಾಪ್ರಭುತ್ವ ವಾರಪತ್ರಿಕೆಯಲ್ಲಿ ಉಪಸಂಪಾದಕ-ವರದಿಗಾರರಾಗಿ ಔದ್ಯೋಗಿಕ ...

READ MORE

Related Books