ಸಂಪೂರ್ಣ ಪಾರಿಜಾತ

Author : ಅಬ್ದುಲ್ ರಶೀದ್

Pages 68

₹ 50.00
Year of Publication: 2013
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಕನ್ನಡದ ಅನನ್ಯ ಲೇಖಕರಲ್ಲಿ ಅಬ್ದುಲ್‌ ರಶೀದ್‌ ಒಬ್ಬರು. ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಾ ಸಾಹಿತ್ಯ ಜಗತ್ತಿನಲ್ಲಿ ವಿಹರಿಸಿದವರು.’ಹಾಲು ಕುಡಿದ ಹುಡುಗಾ’, ’ಪ್ರಾಣಪಕ್ಷಿ’ ’ನನ್ನ ಪಾಡಿಗೆ ನಾನು’ ಅವರ ಪ್ರಮುಖ ಕೃತಿಗಳು. ಅವರ ’ಕೆಂಡ ಸಂಪಿಗೆ’ ಜಾಲತಾಣ ಹಲವು ಬರಹಗಾರರನ್ನು ಹೊಸ ಬಗೆಯಲ್ಲಿ ಪ್ರೋತ್ಸಾಹಿಸುತ್ತಿದೆ.

’ಸಂಪೂರ್ಣ ಪಾರಿಜಾತ’ ಅವರ ಇತ್ತೀಚಿನ ಸಣ್ಣ ಕತೆಗಳ ಸಂಕಲನ. ಕೃತಿಯ ಕುರಿತು ಮಾತನಾಡಿರುವ ಹಿರಿಯ ಕತೆಗಾರ್ತಿ ಉಮಾರಾವ್ ’ರಶೀದ್ ಅವರ ಬರವಣಿಗೆಯೇ ಹಾಗೆ ಏನು ಬರೆದರೂ, ಓದುಗರನ್ನು ತನ್ನ ತಮ್ಮ ಜಗತ್ತಿನಿಂದ ಮೆಲ್ಲನೆ ಕಳಚಿ ತಮ್ಮೊಡನೆ ತೇಲಿಸಿಕೊಂಡು ಹೋಗುತ್ತವೆ. ಅಲ್ಲಿಂದ ದಟ್ಟವಾಗಿ ಮುಸುಕಿರುವ ಮಂಜು, ಧೋ ಎಂದು ಸುರಿಯುತ್ತಿರುವ ಮಳೆ, ದೊಂದಿಯ ಆಡುವ ಬೆಳಕು, ಎಲ್ಲವನ್ನು ಹಾರಿಸಿಕೊಂಡು ಹೋಗುವಂತೆ ಬೀಸುತ್ತಿರುವ ತಣ್ಣನೆ ಗಾಳಿ, ಅಮಲು ತುಂಬುವ ಬೆಳದಿಂಗಳು, ಸುಂದರಿಯರ ಆವರಿಸಿರುವ ನವಿರಾದ ಪಾರಿಜಾತದ ಘಮ ಎಲ್ಲಾ ಸುತ್ತುವರಿದು ಕೊಡಗಿನ ಕಾಡುಗಳಲ್ಲಿ, ಕಾಫಿ ತೋಟಗಳಲ್ಲಿ ನೆರಳುಗಳಂತೆ ಓಡಾಡುವ ವಿಚಿತ್ರ ಪಾತ್ರಗಳು ಎದುರಾಗುತ್ತವೆ’ ಎಂದಿದ್ದಾರೆ. 

ಮುಂದುವರಿದು ’ಅದು ಎರಡನೇ ಮಹಾಯುದ್ದದಲ್ಲಿ ಗುಂಡು ತಗುಲಿ ಈಗ ಒಂಟಿಯಾಗಿ ಕುಂಟಿ ನಡೆಯುವೆ, ತನ್ನ ಬಾಡಿಗೆ ಮನೆಯಲ್ಲಿರುವ ಸುಂದರಿ ಸುಮಿತ್ರಾ ಟೀಚರ್‌ಗೆ ಬಾಗಿಲಡಿ ಪ್ರೇಮಪತ್ರಗಳನ್ನು ತಳ್ಳುವ ಕೇಶವನ್ ನಾಯರ್ ಇರಬಹುದು ಅಥವಾ “ನೀವು ಈ ಊರಲ್ಲಿ ತಂಗುವುದಾದರೆ ನಮ್ಮಲ್ಲಿ ತಂಗಬೇಕು, ಬೇರೆಲ್ಲೂ ಬೇಡ, ಇಲ್ಲಿ ಬಹಳ ಜನ ಕೈವಿಣೆ ಹಾಕುವವರು, ಆದರೆ ಮೊದಲೇ ಕೇಳಿ, ನನ್ನ ಗಂಡನಿಗೆ ಇಬ್ಬರು ಹೆಂಡತಿಯರು, ಆಮೇಲೆ ಗೊಂದಲ ಬೇಡ' ಎಂದು ಎಚ್ಚರಿಸುವ ಊರಿನ ಸೂಲಗಿತ್ತಿ ಇರಬಹುದು. 'ಊಟ ಮಾಡುವ ಮೊದಲು ನನ್ನ ವಿಷಯ ಕೇಳಿ. ನಾನು ಎರಡು ಕೊಲೆ ಮಾಡಿದ್ದೇನೆ' ಎಂದು ತಣ್ಣನೆಯ ಧ್ವನಿಯಲ್ಲಿ ಹೇಳುದ ಆಕೆಯ ಗಂಡನಿರಬಹುದು ಅಥವಾ ತರಗತಿಯೊಳಗೆ ಸದ್ದಿಲ್ಲದೆ ಚಲಿಸುತ್ತಿರುವ ಏನೋ ಒಂದು ಪರಿಮಳದಂತೆ ಓಡಾಡುತ್ತಿರುವ ಸುಮಿತ್ರಾ ಟೀಚರಿರಬಹುದು. - ಆಕೀದರ ಅನನ್ಯ ಬರವಣಿಗೆಯ ಅಚ್ಚು ಹೊಡೆದಂತಿರುವ ಈ ಐದು ಕತೆಗಳು ಎಲ್ಲಿಯೂ ಅತಿರೇಕವಿಲ್ಲದ ಶೈಲಿ, ನವಿರು ಹಾಸ್ಯದ ಕೆಳಗೆ ಹರಿಯುವ ನೋವಿನ ಎಳೆಗಳು, ವಿಶಿಷ್ಟ ವಸ್ತು, ಜೊತೆಗೆ ಸಾಹೇಬನಾಗಿದ್ದುಕೊಂಡೂ ಇಂದಿಗೂ ಇನ್ನೊಬ್ಬರ ಹಣೆಬರಹ ಅರಿಯಲು ಶಾನಭಾಗನೆಂದು ಮಂಗಾಟವಾಡುವ ಸಾಮರ್ಥ್ಯವಿರುವ ಈ ಲೇಖಕನ ಅಪೂರ್ವ ಹುಡುಗುತನ ಎಲ್ಲಾ ಸೇರಿ ನಮ್ಮನ್ನು ಅವರು ಸೃಷ್ಟಿಸುವ ಮಾಂತ್ರಿಕ ಜಗತ್ತಿನೊಳಗೆ ಸೆಳೆದುಕೊಳ್ಳುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಅಬ್ದುಲ್ ರಶೀದ್
(28 February 1965)

'ಕೆಂಡಸಂಪಿಗೆ' ಎಂಬ ಅಂತರ್ಜಾಲ  ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ  ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...

READ MORE

Related Books