ಪೂಜಾರಿಯ ಕಾಟದಲ್ಲಿ ಬಡವಾದ ದೇವರು

Author : ಕಿರಣ್ ಸಿಡ್ಲೇಹಳ್ಳಿ

Pages 90

₹ 100.00




Year of Publication: 2021
Published by: ಕಿರಣ್ ಸಿಡ್ಲೇಹಳ್ಳಿ ಪ್ರಕಾಶನ
Address: # 11, ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ನಿಲಯ, ವಾರ್ಡ-11, ಬಿಡುಗಲು, ಸರಗೂರು ಟೌನ್, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆ- 571121
Phone: 9481530236

Synopsys

ಸಾಹಿತಿ ಕಿರಣ್ ಸಿಡ್ಲೇಹಳ್ಳಿ ಅವರ ಕಥಾ ಸಂಕಲನ-'ಪೂಜಾರಿಯ ಕಾಟದಲ್ಲಿ ಬಡವಾದ ದೇವರು’ ಆಧುನಿಕ ದಿನಮಾನದಲ್ಲಿ ಮನುಷ್ಯ ಮತ್ತು ವ್ಯವಸ್ಥೆಯ ನಡುವಿನ ಸಂಘರ್ಷಗಳನ್ನು ಚಿತ್ರಿಸುವ 8 ಕಥೆಗಳು ಒಳಗೊಂಡಿವೆ. ವಸ್ತು ವೈವಿಧ್ಯತೆ ಇದೆ. ಸಾಹಿತಿ ಆರ್.ಎ ಕುಮಾರ್ ಕೃತಿಗೆ ಬೆನ್ನುಡಿ ಬರೆದು ‘ಪ್ರತೀ ಕಥೆಯು ವ್ಯವಸ್ಥೆಯೊಡನೆ ಸಂಘರ್ಷಕ್ಕೆ ಇಳಿದರೂ ಅಂತಿಮವಾಗಿ ಎಲ್ಲದಕ್ಕೂ ಕಾರಣ ಮನುಷ್ಯನೇ ಆಗುತ್ತಾನೆ. ಆದಕಾರಣ ಅದರ ಫಲಾನುಭವಿಯೂ ಅವನೇ ಆಗುತ್ತಾನೆ. ಆಧುನಿಕ ವ್ಯವಸ್ಥೆಯ ಲೋಪದೋಷಗಳನ್ನು ಲೇಖಕರು ಚಿತ್ರಿಸುವಲ್ಲಿ ಹಾಗೂ ಅದರ ಕಾರಣಗಳನ್ನೂ ಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಕಿರಣ್ ಸಿಡ್ಲೇಹಳ್ಳಿ
(08 October 1982)

ಕವಿ ಕಿರಣ್ ಸಿಡ್ಲೇಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಿಡ್ಲೇಹಳ್ಳಿಯವರು. ರತ್ನಕಂದ -ಇವರ ಕಾವ್ಯನಾಮ. ತಂದೆ ಸಿದ್ಧಲಿಂಗಯ್ಯ ತಾಯಿ  ರತ್ನಮ್ಮ. ಕಿರಣ್ ಅವರು ಎಂ.ಎ,ಬಿ.ಇಡಿ, ಪದವೀಧರರು. ಕಳೆದ 4 ವರ್ಷಗಳಿಂದ ಕ್ಲಸ್ಟರ್ ಸಂಪನ್ಮೂಲ ಸಂಯೋಜಕರಾಗಿದ್ದಾರೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ವಿವಿಧೆಡೆ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಶ್ರಿ ಮುತ್ತುಸ್ವಾಮಿ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಮುಕ್ತಕಗಳ ರಚನೆ ಮಾಡಿದ್ದಾರೆ.  ಪ್ರಸ್ತುತ ರಾಜ್ಯ ಮುಕ್ತಕ ಕವಿ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಮುಕ್ತಕಗಳನ್ನು ವಿವಿಧ ಛಂದೋನಿಯಮದಲ್ಲಿ ರಚಿಸಿದ್ದಾರೆ. ಕೃತಿಗಳು: .ಮುಕ್ತಕ ಸುಧೆ (ಮುಕ್ತಕಗಳ ಸಂಕಲನ) ,ಭಾವಕಿರಣ,ನಂಬುಗೆಯ ಕೊಡ  ಪ್ರಶಸ್ತಿ-ಗೌರವಗಳು: ಭಾರತ್ ಸ್ಕೌಟ್ ನಿಂದ ...

READ MORE

Related Books