ಲೇಖಕ ತಿರುಪತಿ ಭಂಗಿಯವರ ’ ಜಾತಿ ಕುಲುಮ್ಯಾಗ ಅರಳಿದ ಪ್ರೀತಿ ’ ಕಥಾ ಸಂಕಲನವು
ಲೇಖಕರ ಗ್ರಾಮೀಣ ಅನುಭವಗಳನ್ನೇ ಹೆಚ್ಚು ಒಳಗೊಂಡಿದೆ. ತಳ ಸಮುದಾಯದ ಜನರು ರಾಜಕರಣಿಗಳ ಕೆಟ್ಟ ರಾಜಕಾರಣಕ್ಕೆ ಹೇಗೆ ಬಲಿಯಾಗುತ್ತಾರೆ, ತಳಸಮುದಾಯವನ್ನು ಹೇಗೆ ರಾಜಕೀಯ ಬಲಿಪಶು ಮಾಡಲಾಗುತ್ತದೆ, ಕೆಳ ಜಾತಿಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಮಡಿವಂತ ಮಾಸ್ತರ, ಅಂತರ್ಜಾತಿ ಪ್ರೇಮಿಗಳು ಪಟ್ಟ ಕಷ್ಟ, ಯಾರದೋ ಮೈಯಲ್ಲಿ ದೈವ್ವ ಬರೋದು, ಜಮೀನ್ದಾರರ ಶೋಷಣೆ, ಹೀಗೆ ಹಲವು ಪ್ರಮುಖ ಕಥೆಗಳು ಇಲ್ಲಿ ಕಂಡುಬರುತ್ತದೆ.