ಪುಟ್ಟನ ಕೋಳಿ

Author : ತಮ್ಮಣ್ಣ ಬೀಗಾರ

Pages 116

₹ 100.00
Year of Publication: 2021
Published by: ಪ್ರೇಮ ಪ್ರಕಾಶನ
Address: ಬೆಂಗಳೂರು
Phone: 9480474629

Synopsys

‘ಪುಟ್ಟನ ಕೋಳಿ’ ತಮ್ಮಣ್ಣ ಬೀಗಾರ ಅವರ ಆರನೇಯ ಕಥಾಸಂಕಲನ. ಹದಿಮೂರು ಕಥಾನಕಗಳನ್ನು ಹೊಂದಿರುವ ‘ಪುಟ್ಟನ ಕೋಳಿ’ಯಲ್ಲಿ ಬರುವಂತಹ ಕತೆಗಳು ಕಾಲ್ಪನಿಕವಾದರೂ ಇಲ್ಲಿ ನೈಜ್ಯತೆಯನ್ನು ಕಟ್ಟಿಕೊಡುವಂತಹ ಕಥಾನಕಗಳಂತೆ ಒಡಮೂಡಿದೆ. ಅಜ್ಜನ ಕಥೆಯಲ್ಲಿ ಬರುವಂತಹ ಅನೇಕ ಸಂದರ್ಭಗಳು ನಮ್ಮ ನಿತ್ಯ ಜೀವನದ ಭಾಗಗಳಾಗಿವೆ. ‘ಪುಟ್ಟನ ಕೋಳಿ’ ಕಥೆಯಂತೂ ಪುಟ್ಟನು ಪ್ರೀತಿಯಿಂದ ಸಲಹಿದ್ದ ಹುಂಜವನ್ನು ಅಪ್ಪ ಹರಕೆಯ ರೂಪದಲ್ಲಿ ಬಲಿ ಕೊಟ್ಟಾಗ ಮತ್ತು ಉಳಿದ ಮತ್ತೊಂದು ಹೇಂಟೆಯನ್ನು ನಾಯಿ ಕಿತ್ತು ಹೋದಾಗ ಅವನು ಅನುಭವಿಸುವ ವೇದನೆ ಅಥವಾ ,ಮನೋಸಂಕಟವನ್ನು ತಿಳಿಸುತ್ತದೆ. ಇಲ್ಲಿನ ಕಥೆಗಳಲ್ಲಿನ ಪಾತ್ರಗಳ ಹೆಸರುಗಳ ಸಾಕಷ್ಟು ಆಕರ್ಷಣೀಯವಾಗಿದ್ದು ಸಂಕಲನದ ಬಹಳಷ್ಟು ಕಥೆಗಳು ಪಾತ್ರಧಾರಿಯ ನಿರೂಪಣೆಯಲ್ಲಿ ಸಾಗುವುದು ಶಿಶು ಸಾಹಿತ್ಯದಲ್ಲಿ ಒಂದು ನೂತನ ಪ್ರಯೋಗವಾಗಿದೆ. ಇಲ್ಲಿನ ಪಾತ್ರಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದಾಗಿದ್ದು, ಈ ಕತೆಗಳನ್ನು ಓದುತ್ತಾ ಹೋದಂತೆ ಬಾಲ್ಯದ ನೂರಾರು ಪ್ರಸಂಗಗಳು ನೆನಪಾಗುತ್ತದೆ.

About the Author

ತಮ್ಮಣ್ಣ ಬೀಗಾರ
(22 November 1959)

ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.  ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...

READ MORE

Related Books