ಬುದ್ಧ ಗಂಟೆಯ ಸದ್ದು

Author : ಮಹಾಂತೇಶ ನವಲಕಲ್

Pages 170

₹ 190.00
Year of Publication: 2023
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

‘ಬುದ್ಧ ಗಂಟೆಯ ಸದ್ದು’ ಮಹಾಂತೇಶ್ ನವಲಕಲ್ ಅವರ ಕಥಾಸಂಕಲನವಾಗಿದೆ. ಇದರಲ್ಲಿರುವ ಕತೆಗಳು ವಿವಿಧ ಬಹುಮಾನ ಪಡೆದಿವೆ. ಬುದ್ದಗಂಟೆಯ ಸದ್ದು ಎನ್ನುವ ಕತೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತದೆ. ಹಾಗು ಒಂಬತ್ತು ಸಲ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿರುತ್ತದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬುದ್ಧನ ನಿರ್ಮಲ ಕತ್ವಗಳು ಇವನಿಗೆ ಹಿ೦ದೆ ಪರಿಚರುವಾಗದಿದ್ದರೆ ಇಷ್ಟು ಚಿಂತನೆಯೂ ಸಿಗುತ್ತಿದ್ದಿಲ್ಲ. ಬ೦ಡವಾಳ ಸಂಗ್ರಹ ಪ್ರತ್ಯೇಕ ಆಸ್ತಿಗಳ ಒಡಕನ ವಿರುದ್ಧದ ಚಳುವಳಿಯು ಕೊಂಚ ಕಾಲದ ಹೋರಾಟದಲ್ಲಿದ್ದುದ್ದ ತನಗೆ ಒಂದು ಧನಾತ್ಮಕವೋ? ಅಥವಾ ಋಣಾತ್ಮಕವಾದ ಅಂಶವೊ ತಿಳಿಯದಾಯಿತು. ಬಂಡವಾಳದ ಹರವು ಯಾವುದನ್ನು ಲೆಕ್ಕಿಸುವುದೇ ಇಲ್ಲ ಅದುಮನುಷ್ಯರ ರಕ್ತ ಕಾಲುವೆಯು ಮುಖಾಂತರ ಪ್ರವಹಿಸುತ್ತದೆ ಎ0ದು ಹಿರಿಯರು ಹೇಳಿದರಲ್ಲ, ಅದರ ಅರ್ಥದ ಮನೆಯಲ್ಲಿ ಪಳಗಿ ಅದನ್ನು ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದಾನೆ ಅವನು. ಅಂದರೆ ಎಲ್ಲವೂ ಅರ್ಥವಾದರೂ ಕೊನೆಗೆ ಜಯಿಸಿದ್ದು ಬಂಡವಾಳವಾದವ. ಆ ಸ್ವಲ್ಪ ಕಾಲದ ಅಧ್ಯಯನದಿ೦ದಲೇ ಬೆಂಬತ್ತಿ ಅವನಿಗೆ ಕಾಡುತ್ತಿರುವುದು ಈ ಪಾಪ ಪ್ರಜ್ಞೆಗಳೇ ಎಂದು ಮನದಟ್ಟಾಯಿತು ಅವನಿಗೆ. ಬ್ಯಾಂಕಾಕ್ ಬುದ್ಧ ದೇವಾಲಯಗಳು ಈತನಿಗೆ ಎಚ್ಚರಿಕೆಯು ನಿರಂತರ ಕರೆಗಂಟೆಗಳನ್ನೇ ವಿಧಿಸಿದ್ದವು. ನೀನು ಹೊಲಗು ನಿನಗೆ ಇಲ್ಲಿ ಸ್ಥಾನವಿಲ್ಲವೆಂದು. ರಾತ್ರಿ ಮಲಗಿದರೆ ಆ ಎಡಘಂಥೀಯು ಇಬ್ಬರು ವಾರಸುದಾರರು ಮ್ಯಾನಿಫೆಸ್ಟೋದ ಒ0ದೊಂದು ಸಾಲಿನ ಅರ್ಥವನ್ನು ಕಿವಿಂಯಲ್ಲಿ ಉಸುರಿ ಉದುರಿ ನಿದ್ರೆಯನ್ನು ಅನಾಮತ್ತಿನಲ್ಲಿಟ್ಟಿದ್ದರು.

About the Author

ಮಹಾಂತೇಶ ನವಲಕಲ್
(24 November 1970)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನ ಮಹಾಂತೇಶ ನವಲಕಲ್ ಅವರು ಕೃಷಿ ಪದವೀಧರರು. ’ನೀರಿನ ನೆರಳು’ ಇವರ ಮೊದಲ ಕಥಾಸಂಕಲನ. ’ನಾನು ಚಂದ್ರಗುಪ್ತನೆಂಬ ಮೌರ್ಯ’ ನಾಟಕವು ಹಲವು ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಪುಸ್ತಕವಾಗಿಯೂ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ. ಪುಂಚಾವರಂ ಕುರಿತಾದ ನಾಟಕ ವಿವಾದಕ್ಕೆ ಎಡೆ ಮಾಡಿತ್ತು. ಬೆಸಗರಹಳ್ಳಿ ರಾಮಣ್ಣ ಕಥಾಪುರಸ್ಕಾರ, ದೆಹಲಿ ಕರ್ನಾಟಕ ಸಂಘದ ನೃಪತುಂಗ ಪುರಸ್ಕಾರ, ಪಾಪು ಮರಸ್ಕಾರ, ಸಂಕ್ರಮಣ ಕಥಾ ಪುರಸ್ಕಾರ, ಅಮ್ಮ ಪುರಸ್ಕಾರ, ಉರಿಲಿಂಗ ಪೆದ್ದಿ ಪುರಸ್ಕಾರ, ರಾಜ್ಯೋತ್ಸವ ಪುರಸ್ಕಾರ, ಎರಡು ಬಾರಿ ಇವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿನಿಧಿಯ ಚಿನ್ನದ ...

READ MORE

Related Books