ಅಂಕುರ

Author : ರಜೀಯಾ ಕೆ. ಭಾವಿಕಟ್ಟೆ

Pages 100

₹ 96.00
Year of Publication: 2021
Published by: ಅಭಿಷೇಕ ಆಫ್ ಸೆಟ್ ಪ್ರಿಂಟ್ಸ್
Address: ಗಾಂಧಿ ಸರ್ಕಲ್, ಗದಗ-582101.
Phone: 9880352346

Synopsys

ರಜಿಯಾ ಕೆ. ಭಾವಿಕಟ್ಟೆ ಅವರ ’ಅಂಕುರ’ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಸ್. ರಾಜು ಸೊಲೇನಹಳ್ಳಿ ಅವರು, ಬಾಲ್ಯದಲ್ಲಿ ಅನುಭವಿಸಿದ ನೋವು, ಬಡತನವನ್ನು ಬದುಕಿನ ಕಠಿಣವಾದ ಸಂಕಷ್ಟಗಳನ್ನು ತಮ್ಮ ಕವನಗಳ ಮೂಲಕ ಹಿಡಿದಿಡುವಲ್ಲಿ ರಜಿಯಾ ಯಶಸ್ವಿಯಾಗಿದ್ದಾರೆ ಎನ್ನಬಹುದು. ಈ ಕವನಸಂಕಲನ ಒಟ್ಟಾರೆಯಾಗಿ ಸುಮಾರು ಅರವತ್ತು ಕವಿತೆಗಳನ್ನು ಒಳಗೊಂಡಿದ್ದು ಅವುಗಳು ಒಳಹೊಕ್ಕು ಒಂದೊಂದೇ ಕವನವನ್ನು ವಿಮರ್ಶೆಗೆ ಒಳಪಡಿಸಿದಾಗ ಒಂದು ಕವಿತೆಗೂ ಮತ್ತೊಂದು ಕವಿತೆಗೂ ಯಾವುದೇ ವಿಷಯ ಕಲ್ಪಿಸದೇ ತಮ್ಮದೇ ಆದ ಮಹತ್ವ ಪಡೆದುಕೊಳ್ಳುತ್ತ ಹೋಗುತ್ತದೆ. ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸದೇ, ಆ ಕವಿತೆಯ ಶೀರ್ಷಿಕೆಯಂತೆಯೇ ಅವುಗಳಲ್ಲಿ ಕವಿತೆಯ ಸಾರ ಬೆಳವಣಿಗೆ ಇದ್ದು ಗೊಂದಲಕ್ಕೆ ಎಡೆ ಮಾಡದೇ ಸರಾಗವಾಗಿ ಓದಿಸಿಕೊಳ್ಳುತ್ತದೆ. ಸಾಮಾಜಿಕವಾಗಿ ಎಲ್ಲಾ ಜನರು ಈ ವ್ಯವಸ್ಥೆಯಲ್ಲಿ ಅನುಭವಿಸುತ್ತಿರುವ ನೋವುಗಳು ಹೇಗಿರುತ್ತದೆ ಎಂಬುದನ್ನು ಮೊದಲನೇ ಕವಿತೆಯಲ್ಲಿ ಕಣ್ಣಿಗೆ ಕಂಡಂತೆಯೇ ಕಟ್ಟಿ ಕವಿತೆಯಲ್ಲಿ ಬಿಂಬಿಸಿದ್ದಾರೆ. ಹಲವಾರು ಕವಿತೆಗಳು ಕೌಟುಂಬಿಕ ಸಂಸಾರದಲ್ಲಿ ದೈನಂದಿನ ಮಾನಸಿಕವಾಗಿ ಪಡುತ್ತಿರುವ ಯಾತನೆಯನ್ನು ತಾವೇ ಸ್ವತಃ ಅನುಭವಿಸುವಂತೆ ಪದಗಳಲ್ಲಿ ಎಳೆಎಳೆಯಾಗಿ ನೋವಿನ ಗರಿಗಳನ್ನು ಬಿಚ್ಚಿಟ್ಟಿರುವುದು ಕವಿತೆಗಳಲ್ಲಿ ಕಾಣಸಿಗುತ್ತದೆ. ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರಗಳು ಈ ಕವಿತೆಯಲ್ಲೇ ಇದೆ ಎಂದಿದ್ದಾರೆ. ಸ್ತ್ರೀಯರ ಕಷ್ಟಗಳು, ನೋವುಗಳ ಕುರಿತು ಮತ್ತೆ ನೋಡುವ ಶೈಲಿ ರೀತಿ, ನೀತಿಗಳು, ಕೀಳು, ಭಾವನೆ, ಅಡ್ಡಿ ಬರುವ ಸಂಪ್ರದಾಯಗಳು ಒಂದೊಂದೇ ಯೋಚಿಸುವ ರೀತಿಯಲ್ಲಿ ಕವಿತೆಯ ಸಾರಾಂಶವು ಅಡಗಿರುತ್ತದೆ ಎಂದಿದ್ದಾರೆ.

About the Author

ರಜೀಯಾ ಕೆ. ಭಾವಿಕಟ್ಟೆ
(02 June 1989)

ರಜೀಯಾ ಕೆ. ಭಾವಿಕಟ್ಟೆ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವರು. ಬಿ.ಎ, ಬಿಇಡಿ ವಿದ್ಯಾಭ್ಯಾಸವನ್ನು ಪೂರೈಸಿರುವ ಅವರು ಬರವಣಿಗೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಅಂಕುರ. ...

READ MORE

Related Books