ನವಿಲನೆಲ

Author : ಎಸ್. ಗಂಗಾಧರಯ್ಯ

Pages 114

₹ 75.00
Year of Publication: 2003
Published by: ಸಾರಂಗ ಪ್ರಕಾಶನ
Address: #5ನೇ ಮುಖ್ಯ ರಸ್ತೆ, ಕೆ.ಆರ್ ಬಡಾವಣೆ ತಿಪಟೂರು

Synopsys

ಎಸ್. ಗಂಗಾಧರಯ್ಯ ಅವರ ‘ನವಿಲನೆಲ’ ಕೃತಿಯು ಕತಾಸಂಕಲನವಾಗಿದೆ. ಈ ಕೃತಿಯು 12 ಅಧ್ಯಾಯಗಳಾದ ಬಾಲ್ಯದ ಕಾಡಲ್ಲಿ ಅಲೆವ ನವಿಲುಗಳು, ನವಿಲ ನರ್ತನಕ್ಕೆ ನೆಲವಾದವರು, ಕುದುರೆ ಸವಾರಿ, ಕಲ್ಲ ತಾಗಿದ ಮಿಟ್ಟೆ, ನೀರ ನೆರಳನೆ ಕಡಿದು, ಹರಿವ ನೀರಿಗೆ, ಮೈಯೆಲ್ಲಾ ಕಾಲು, ಮಣ್ಣಿಲ್ಲದ ಹಾಳಿನ ಮೇಲೆ, ಹಕ್ಕೆಯ ನುಂಗಿದ ಮೇಲೆ, ಹಕ್ಕೆಯ ನುಂಗಿದ ಹಿಕ್ಕೆ, ಕಾಡು ಕಲ್ಲಪ್ಪನ ಚಿನ್ನದ ನಿದ್ದೆ, ಹಾರುವ ಹಕ್ಕಿಯ ರೆಕ್ಕೆಯ ಹಿಡಿದು, ನವಿಲ ನೆಲ, ಇವೆಲ್ಲವುಗಳನ್ನು ಒಳಗೊಂಡಿದೆ. ಕೃತಿಯ ಕುರಿತು ಮೊಗಳ್ಳಿ ಗಣೇಶ್ ಅವರು, ಒಟ್ಟು ಒಂಭತ್ತು ಕಥೆಗಳಿರುವ ಈ ಸಂಕಲನದ ಬಹುಪಾಲು ಕಥೆಗಳು ಹೆಚ್ಚ ಕಡಿಮೆ ಒಂದೇ ಬಯಲಿನಲ್ಲಿ ಒಂದೇ ನಾದದಲ್ಲಿ ಒಂದೇ ಧ್ಯಾನದಲ್ಲಿ ತೆರೆದುಕೊಂಡಿವೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಲಿಸಿ ಓದಿಕೊಂಡರೆ ಇವಿಷ್ಟೂ ಕಥೆಗಳು ಒಂದು ಕಾದಂಬರಿಯ ವ್ಯಾಪ್ತಿಯಾಗಿ ಚಾಚಿಕೊಂಡು ಕಾದಂಬರಿಯೊಂದರ ಪರಿಣಾಮವನ್ನೇ ಉಂಟು ಮಾಡುವಂತಿದೆ. ಆಶಯಗಳಲ್ಲಿ ವ್ಯತ್ಯಾಸವಿದ್ದರೂ ನಿರೂಪಕನ ಅಂತರಾಳದಲ್ಲಿ ವೈರುಧ್ಯವಿಲ್ಲ. ಲೇಖಕ ಕಥೆಯನ್ನು ತನ್ಮಯತೆಯಲ್ಲಿ ನಿರೂಪಿಸುತ್ತಾ ಮತ್ತೆ ಮತ್ತೆ ಬಾಲ್ಯದ ಕಾಡಿಗೆ ಓಡಿ ಹೋಗುತ್ತಾನೆ. ವರ್ತಮಾನದ ಎಲ್ಲಾ ಇಕ್ಕಟ್ಟುಗಳನ್ನು ನಿರೂಪಕ ಭೂತಕಾಲದಲ್ಲಿ ತೊಳೆದುಕೊಳ್ಳಲು ಹಂಬಲಿಸುತ್ತಾನೆ. ಇಂತಹ ಕ್ರಿಯೆ ರಮ್ಯ ವಿಶ್ವಾಸದ ಪರಿಣಾಮ, ತಾಯ ತೊಟ್ಟಿಲಿಗೂ ಆಕೆಯು ಕಂದನನ್ನು ಕವುಚಿಕೊಳ್ಳುವ ಸೆರಗಿಗೂ ಹಾಗೆಯೇ ನಿರೂಪಕ ಬಾಲ್ಯ ಕಾಲಕ್ಕೆ ಹಿಂತಿರುಗುವ ಪ್ರಕ್ರಿಯೆಗೂ ನೇರ ಸಂಬಂಧವಿದೆ. ಇದು ದಿವ್ಯ ರಮ್ಯತೆಯ ಹಂಬಲ, ಸೃಜನಶೀಲತೆಯ ಓಘದಲ್ಲಿ ದಿವ್ಯ ರಮ್ಯತೆಯೂ ರಮ್ಯ ರಕ್ಷಣೆಯೂ ಸೇರಿಯೇ ಮನದ ಭಿತ್ತಿಯೂ ಬಾಷೆಯ ಭಿತ್ತಿಯಾಗಿ ಸಂವೇದನೆಯ ನಾಡವಾಗಿ ಮಾರ್ಪಡುವುದು. ಬಾಲ್ಯದ ಕಾಡಲ್ಲಿ ಅಲೆವ ಎಲ್ಲಾ ಕಥೆಗಳಿಗೂ ತಾಯ್ತನಕ್ಕೆ ಮರಳುವ ಮೋಹವಿರುತ್ತದೆ. ಗಂಗಾಧರಯ್ಯನ ಕಥೆಗಳು ಮರೆತು ಹೋಗುತ್ತಿರುವ ಹಳ್ಳಿಯ ಸಾವಯವ ಸಂಬಂಧಗಳನ್ನು ಮಾನವೀಯ ಹುಡುಕಾಟಗಳನ್ನು ನಿರೂಪಿಸುತ್ತವೆ. ಪ್ರತಿಯೊಂದು ಕಥೆಯನ್ನೂ ರೂಪಕದಲ್ಲಿ ಹೇಳಬೇಕೆಂಬ ಅಪೇಕ್ಷೆ ಲೇಖಕನಿಗೆ ಇರುವುದರಿ೦ದಾಗಿಯೇ ಇಲ್ಲಿನ ಎಲ್ಲಾ ಕಥೆಗಳ ಶೀರ್ಷಿಕೆ ಕಾವ್ಯಾತ್ಮಕವಾಗಿದೆ. ಕಥೆಯ ಉದ್ದಕ್ಕೂ ರೂಪಕ ವಿಧಾನವನ್ನು ಕಥೆಗಾರ ಹೆಣೆಯಲು ಹಾತೊರೆಯುವುದು ಕಾಣುವುದಾದರೂ ಅದು ಸಮರ್ಪಕವಾಗಿಲ್ಲದಿರುವುದು ಅವರಲ್ಲಿನ್ನೂ ಭಾಷೆ ಮತ್ತು ಭಾವ ಸಂಬಂಧಗಳ ರೂಪಕ ವಿನ್ಯಾಸದಲ್ಲಿ ಸಾಧ್ಯವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಈ ಸಂಕಲನದಲ್ಲಿರುವ 'ಹಕ್ಕೆಯ ನುಂಗಿದ ಹಿಕ್ಕೆ' ಮತ್ತು 'ಹಾರುವ ಹಕ್ಕಿಯ ರೆಕ್ಕೆಯ ಹಿಡಿದು, ಇವರಡೂ ಕಥೆಗಳು ಈ ನಿರೂಪಕನ ಸಾಮರ್ಥ್ಯವನ್ನು ಗಾಢವಾಗಿ ಪ್ರತಿನಿಧಿಸುತ್ತವೆ. ಗಂಗಾಧರಯ್ಯ ಕಾವ್ಯಾತ್ಮಕವಾಗಿ ಕಥೆ ಬರೆಯಬಲ್ಲ ಎಂಬುದಕ್ಕೆ ಈ ಎರಡು ಕಥೆಗಳನ್ನು ಗಮನಿಸಬಹುದು. ಸಾಧಾರಣ ಪಾತ್ರದಂತೆ ಕಾಣುವ ಬುಡುಗೊಚ್ಚನ ಸುತ್ತ ಹಲವು ವಿವರ, ಪಾತ್ರ ಸಂದರ್ಭ ಮತ್ತು ಹಳೆಯ ನೆನಪುಗಳು ಬಿಚ್ಚಿಕೊಳ್ಳುವ ಕ್ರಮದಲ್ಲಿ ಹಳ್ಳಿಗಾಡಿನ ಮುಗ್ಧ ಕಥೆಗಾರನ ಪ್ರಬುದ್ಧ ಮನಸ್ಸು ಹೇಗೆ ಕ್ರಿಯಾಶೀಲವಾಗಿದೆ ಎಂಬುದು ತಿಳಿಯುತ್ತದೆ. ಒಂದು ರಮ್ಯ ಲೋಕವನ್ನೇ ತೆರೆಯುತ್ತಾ ವಾಸ್ತವ ಜಗತ್ತಿನ ಕ್ರೂರ ಸ್ಥಿತಿಗೆ ಮರಳಿ ಈ ಹಿಂಸೆಯ, ಅನ್ಯಾಯದ, ವಿಕಾರದ ಜಗತ್ತಿನ ಆರ್ತ ಕ್ಷಣಗಳನ್ನು ನಿವೇದಿಸುವಂತೆ ಇವೆರಡೂ ಕಥೆಗಳಲ್ಲಿ ಈ ಕಥೆಗಾರ ನಿರುಮ್ಮಳವಾಗಿ ದಲಿತ ಬಂಡಾಯದ ಮಾದರಿಯನ್ನು ಸಂಯೋಗಿಸಿಕೊಂಡು ದಾಖಲಿಸುತ್ತಿರುವುದು ಮುಖ್ಯವಾಗಿದೆ ಎಂದಿದ್ದಾರೆ.

About the Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಪ್ರಕಟಿತ ಕೃತಿಗಳು ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಿವೆ.  ನವಿಲ ನೆಲ, ಒಂದು ಉದ್ದನೆಯ ನೆರಳು, ಇವರ ಕಥಾ ಸಂಕಲನಗಳು. ’ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ,- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ...

READ MORE

Related Books