ಕೇವಲ ಮಕ್ಕಳು ಮಾತ್ರಲ್ಲ; ದೊಡ್ಡವರೂ ಸಹ ಓದಲೇಬೇಕಾದ ಕೃತಿ-ಮೋಪ್ಯಾನ ಮ್ಯಾಪು ಮತ್ ಪರಮಪದ ಸೋಪಾನಪಟ’. ಇದು ಕಥೆಗಳ ಸಂಕಲನ. ಹರೆಯದ ಮಕ್ಕಳ ಜ್ಞಾನ ಬೆಳವಣಿಗೆ, ಕಲ್ಪನೆಯ ವಿಸ್ತಾರದ ವಿಕಾಸಕ್ಕೆ ಪೂರಕವಾದವುಗಳು. ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ಬರೆದ ಕಥೆಗಳಿವು.ಕೃತಿಯ ಕರ್ತೃ ಆನಂದ ಪಾಟೀಲ.
ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ...
READ MORE