ಅವಳ ಹೆಜ್ಜೆ ಗುರುತು

Author : ಸೌಮ್ಯ ಕಾಶಿ

Pages 112

₹ 175.00
Year of Publication: 2024
Published by: ಹರಿವು ಬುಕ್ಸ್

Synopsys

‘ಅವಳ ಹೆಜ್ಜೆ ಗುರುತು’ ಸೌಮ್ಯ ಕಾಶಿಯವರ ಕತಾಸಂಕಲನವಾಗಿದೆ. ಇದಕ್ಕೆ ಲೇಖಕಿಯ ಬೆನ್ನುಡಿ ಬರಹವಿದೆ; ಈ ಪುಸ್ತಕದ ಐದೂ ಕತೆಗಳಲ್ಲಿ ಬರುವ ಹಲವಾರು ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಹಾಗೂ ನಿಮ್ಮ ಜೀವನದಲ್ಲಿ ಗುರುತಾಗಿ ಉಳಿವವರು. ಪುಸ್ತಕ ಓದುವಾಗ ಇಲ್ಲಿನ ಕೆಲವು ಪಾತ್ರಗಳು ಅಮ್ಮನನ್ನು ಹೋಲಿದರೆ ಮತ್ತೆ ಕೆಲವು ಸ್ನೇಹಿತೆಯನ್ನೋ, ಹೆಂಡತಿಯನ್ನೋ, ಸಹೋದರಿಯನ್ನೋ, ಅಕ್ಕಪಕ್ಕದ ಮನೆಯವರನ್ನೋ ಅಥವಾ ಬಸ್ಸು ರೈಲಿನಲ್ಲಿ ಹೋಗುವಾಗ ಎದುರು ಕುಳಿತವರನ್ನೋ ಹೋಲುತ್ತದೆ. ಈ ಕತೆಯಲ್ಲಿ ಬರುವ ಎಲ್ಲರೂ ಬದುಕಿನ ಪುಟದಲ್ಲಿ ಕೇವಲ ಸಣ್ಣದೊಂದು ಪಾತ್ರ ಮಾತ್ರವಾಗದೇ ಬದುಕನ್ನು ಕಲಿಸಿಕೊಟ್ಟವರಾಗುತ್ತಾರೆ. ಹಾಗಾಗೇ ಈ ಪುಸ್ತಕದ ಹೆಸರು “ಅವಳ ಹೆಜ್ಜೆಗುರುತು”! ಎಂದು ಇಟ್ಟಿದ್ದಾರೆ.

About the Author

ಸೌಮ್ಯ ಕಾಶಿ

ಸೌಮ್ಯ ಕಾಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಬರವಣಿಗೆ, ಕವಿತೆಗಳ ರಚನೆ, ಕವನ ವಾಚನ ಅವರ ಆಸಕ್ತಿ ಕ್ಷೇತ್ರ.  ಕೃತಿಗಳು: ‘ಹೇಳದೇ ಉಳಿದದ್ದು!’(ಕವನ ಸಂಕಲನ) ...

READ MORE

Related Books