ಕಲ್ಲು ಸಕ್ಕರೆ

Author : ಬಸ್ತಿ ಸದಾನಂದ ಪೈ

Pages 200

₹ 180.00
Year of Publication: 2013
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

'ಕಲ್ಲು ಸಕ್ಕರೆ' ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದ ಬಿಡಿ ಕಗ್ಗಗಳನ್ನು ಆಧಾರವಾಗಿಟ್ಟುಕೊಂಡು ಕಲ್ಪಿಸಿದ ಕಥೆಗಳ ಸಂಕಲನ, ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಂಕುತಿಮ್ಮನ ಕಗ್ಗದ ಕಲ್ಪನೆಯೇ ಒಂದು ಕೌತುಕ, ಆ ಇಡೀ ಪರಿಕಲ್ಪನೆ ಬದುಕನ್ನು ನೋಡುವ ದೃಷ್ಟಿ, ಮಂಕುತಿಮ್ಮ ಎಂಬ ಪಾತ್ರದ ಕಲ್ಪನೆ, ಮುಖ್ಯ ಮತ್ತು ಪೂರಕ ಸಂಗತಿಗಳ ಸಮನ್ವಯ, ಅಡಕಗುಣ ನಿಶ್ಚಿತ ಬಂಧದಲ್ಲಿ ಎರಕ ಹೊಯ್ದ ಕೌಶಲ ಅಂತರಂಗದ ಬೋಧನೆ, ಹೃದಯ ವಿಕಾಸದ ಉದ್ದೇಶ, ಎಲ್ಲವೂ ಸಾಹಿತ್ಯ ಸೃಷ್ಟಿಯ ವಿಸ್ಮಯಗಳು, ಅಂಥ ಕಗ್ಗಗಳು ಸುಪ್ತ ಗರ್ಭದಲ್ಲಿ ಹುದುಗಿದ ಬೀಜಾರ್ಥಕ್ಕೆ ಅನ್ವಯಿಸುವ ಕಥೆಗಳನ್ನು ಸಾಂದರ್ಭಿಕವಾಗಿ ಕಲ್ಪಿಸಿ ಹದವಾಗಿ ಅನ್ವಯಿಸಿ ರಚಿಸಿದ ಮಿತ್ರ ಸದಾನಂದ ಪೈ ಅವರ ಸಮಾನಾಂತರ ಕಲ್ಪನಾ ಶಕ್ತಿ ಮೆಚ್ಚುವಂತಹದು, ಕಗ್ಗಗಳಲ್ಲಿ ಅಮೂರ್ತವಾದ ಜೀವನಾದರ್ಶಗಳು ಕಲ್ಪಿತ ಕಥೆಗಳಲ್ಲಿ ಮೂರ್ತಗೊಂಡು ಸಾಮಾನ್ಯ ಓದುಗರಿಗೂ ಅಪ್ಯಾಯಮಾನವಾಗುತ್ತವೆ. ಒಂದು ಸೃಜನಶೀಲ ಮನಸ್ಸು ಅದೇ ಬಗೆಯ ಹಲವು ಮನಸ್ಸುಗಳಿಗೆ ಪ್ರೇರಣೆಯಾಗುತ್ತದೆ ಎಂಬುದು ಸತ್ಯವಾಗಿದೆ. ಇಂಥ ಹಲವು ಬಗೆಯ ಮನಸ್ಸುಗಳಿಗೆ ಎಡೆಮಾಡಿಕೊಡುತ್ತದೆ.

About the Author

ಬಸ್ತಿ ಸದಾನಂದ ಪೈ

ಬಸ್ತಿ ಸದಾನಂದ ಪೈ ಯವರು ಉಡುಪಿ ಜಿಲ್ಲೆ ಹಿರಿಯಡ್ಕದವರು, ಸಾಗರದ ಶ್ರೀ ಗಜಾನನ ಟ್ರಾನ್ಸ್ ಪೋರ್ಟ್  ಕಂಪೆನಿಯ ಉದ್ಯೋಗದಿಂದ ನಿವೃತ್ತರಾಗಿ ಇಪ್ಪತ್ತು ವರ್ಷಗಳ ನಂತರ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ, ಈಗ ಸಾಗರವೇ ಅವರ ಕಾರ್ಯಕ್ಷೇತ್ರ. ಕರ್ನಾಟಕ ನಾಟಕ ಅಕಾಡೆಮಿ, ಭಾಗ್ಯಲಕ್ಷ್ಮಿ ಪ್ರಕಾಶನ ಮತ್ತು ಕಲಾಗಂಗೋತ್ರಿಯ ಸಹಯೋಗದೊಂದಿಗೆ ಶಾಲಾ ಅಂಗಳಕ್ಕೆ “ನೂರು ಮಕ್ಕಳ ನಾಟಕಗಳು” ಶ್ರೀ ಬಿ.ಎ. ರಾಜಾರಾಂ ರವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಅದರ ಎಂಟನೇ ಸಂಪುಟದಲ್ಲಿ ಇವರ “ಬ್ರೋಕರ್ ಭೋಜಣ್ಣ” ಎಂಬ ಒಂದು ಮಕ್ಕಳ ನಾಟಕ ಬೆಳಕು ಕಂಡಿದೆ. ರಾಜ್ಯದ ಹಲವು ವಾರಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ. ನಾಟಕ ರಚನೆ, ...

READ MORE

Related Books