ಗುಣ ಸಂಪನ್ನ

Author : ರವೀಂದ್ರ ಸಿಂಗ್

Pages 104

₹ 100.00




Year of Publication: 2019
Published by: ಎಸ್. ಎಲ್.ಎನ್. ಪಬ್ಲಿಕೇಷನ್
Address: ನಂ. 3437, ಬನಶಂಕರಿ, ಬೆಂಗಳೂರು
Phone: 9342196255

Synopsys

ವಿಶೇಷವಾಗಿ ಮಕ್ಕಳ ಕಥೆಗಳನ್ನು ಒಳಗೊಂಡ ಕೃತಿ-ಗುಣಸಂಪನ್ನ. ರವೀಂದ್ರ ಸಿಂಗ್ ಕಥೆಗಾರರು. ಆಧ್ಯಾತ್ಮಿಕ ನೀತಿಯೇ ಈ ಕೃತಿಯ ಮೂಲ ಗುಣ. ಮನುಷ್ಯ ಹೇಗೆ ಇರಲಿ ಅವನಲ್ಲಿರುವ ಉತ್ತಮ ಗುಣದಿಂದ ಹೇಗೆ ಪರಿವರ್ತಿತನಾಗಬಲ್ಲ ಎಂಬುದು  ಬಹುತೇಕ ಕಥೆಗಳ ಜೀವಾಳವಾಗಿದೆ. ಕೃತಿಯಲ್ಲಿ ಒಟ್ಟು 22 ಕಥೆಗಳಿವೆ.

About the Author

ರವೀಂದ್ರ ಸಿಂಗ್
(26 July 1977)

ರವೀಂದ್ರ ಸಿಂಗ್ ಅವರು ಎಂ.ಎ. ಪದವೀಧರರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಅಂಚೆ ವ್ಯಾಪ್ತಿಯ ಬೂರಮಾಕನಹಳ್ಳಿಯವರು. 1977ರ ಜುಲೈ 26 ರಂದು ಜನನ. ಸದ್ಯ, ಕೋಲಾರದ ಆದರ್ಶ ಕಾಲೇಜಿನಲ್ಲಿ ವ್ಯವಸ್ಥಾಪಕರು. ಋತುಗಾನ, ಕಪ್ಪು ಫ್ರೇಮಿನ ಕನ್ನಡಕ (ಕವನ ಸಂಕಲನಗಳು), ದಿಕ್ಕಾಪಾಲು -ಕಾದಂಬರಿ ಹಾಗೂ ಗುಣ ಸಂಪನ್ನ-ಕಥಾ ಸಂಕಲನ ಪ್ರಕಟಗೊಂಡಿವೆ. ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶೇಷ ಸಂಚಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಕನ್ನಡ ಸಾಂಸ್ಕೃತಿಕ ಅಕಾಡೆಮಿಯಿಂದ (2007) ಸಾಹಿತ್ಯ ರತ್ನ, ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಬೆಂಗಳೂರು ವತಿಯಿಂದ ಭಾರತ ರತ್ನ ಸರ್ . ...

READ MORE

Related Books