ಚಪ್ಪಲಿಗಳು ಆಯ್ದ ಕತೆಗಳು

Author : ಸಾರಾ ಅಬೂಬಕ್ಕರ್

Pages 206

₹ 175.00
Year of Publication: 2014
Published by: ಚಂದ್ರಗಿರಿ ಪ್ರಕಾಶನ
Address: # ಮೈಕ್ರೋವೇವ್ ಸ್ಟೇಷನ್ ರಸ್ತೆ, ಮಂಗಳೂರು

Synopsys

ಖ್ಯಾತ ಕಥೆಗಾರ್ತಿ ಡಾ. ಸಾರಾ ಅಬೂಬಕರ್ ಅವರು ಬರೆದ ಕಥೆ ಸಂಕಲನ-ಚಪ್ಪಲಿಗಳು ಆಯ್ದ ಕತೆಗಳು. ತಮ್ಮ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳೆಯರ ಸಂವೇದನೆಗಳನ್ನು ತರುವ ಲೇಖಕಿ ಆ ಧರ್ಮದಲ್ಲಿಯ ಕರ್ಮಠ ಆಚರಣೆಗಳನ್ನು ತಮ್ಮ ಎಲ್ಲ ಸಾಹಿತ್ಕ ರಚನೆಗಳಲ್ಲಿ ಪ್ರಶ್ನಿಸುತ್ತಾರೆ. ಇಂತಹ ಕಥಾ ವಸ್ತುವನ್ನು ಒಳಗೊಂಡಿರುವ ಇಲ್ಲಿಯ ಬಹುತೇಕ ಕಥೆಗಳು ಅವರ ವಿವಿಧ ಕಥಾ ಸಂಕಲನಗಳಿಂದ ಆಯ್ದುಕೊಳ್ಳಲಾಗಿದೆ.

About the Author

ಸಾರಾ ಅಬೂಬಕ್ಕರ್
(30 June 1936 - 10 January 2023)

ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು  ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು.  ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...

READ MORE

Reviews

(ಹೊಸತು, ಜುಲೈ 2015, ಪುಸ್ತಕದ ಪರಿಚಯ)

ಕುಟುಂಬದ ಒಳಗಣ ಸ್ತ್ರೀ ಶೋಷಣೆಯನ್ನು ಪ್ರತಿಭಟಿಸುವ ಕತೆ-ಕಾದಂಬರಿ ರಚಿಸಿ ಸಮಾಜದ ಮುಂದೆ ಹಿಡಿಯುವಲ್ಲಿ ಡಾ| ಸಾರಾ ಅಬೂಬಕ್ಕರ್ ಸಿದ್ಧಹಸ್ತರು. ಸ್ತ್ರೀಯರ ಬಗೆಗಿನ ತಾತ್ಸಾರ ಪುರುಷರಲ್ಲಿ ಎಷ್ಟಿದೆಯೆಂದರೆ "ಹೆಂಗಸರನ್ನು ಚಪ್ಪಲಿಗಳಂತೆ ಬಳಸಿ ಮೂಲೆಯಲ್ಲಿಡಬೇಕು, ತಲೆಯ ಮೇಲಿಟ್ಟು ಮೆರೆಸಬಾರದು” ಎಂಬ ಗೃಹಸ್ಥರೋರ್ವರ ಸೊಕ್ಕಿನ ಮಾತು ಚಪ್ಪಲಿಗಳು ಕಥೆಗೆ ಮೂಲ ಪ್ರೇರಣೆ. ಸಂಕಲನದ ಇನ್ನಿತರ ಕಥೆಗಳೂ ಸಮಾಜದ ಕಪಟ ವ್ಯೂಹಗಳನ್ನು ಬಯಲಿಗೆಳೆಯುತ್ತವೆ. ಯುದ್ಧಗಳ ಅನಾಹುತಗಳನ್ನು ಕಣ್ಣಿಗೆ ಕಟ್ಟಿದಂತೆ ಬಣ್ಣಿಸುತ್ತವೆ. ಮುಸುಕಿನೊಳಗಡೆ ನಡೆವ ಅವ್ಯವಹಾರಗಳು ಇಲ್ಲಿ ಬಿಂಬಿತವಾಗಿವೆ. ಸಂಕಲನದ ಸಾರಾಂಶ ಎಂಬ ಕಥೆ ಎಷ್ಟು ದಾರುಣವೆಂದರೆ ಅಲ್ಲಿ ಉಲ್ಲೇಖವಾಗಿರುವ “... ಬಿತ್ತಿ ಬೆಳೆಯುವುದಕ್ಕೊಂದು ಹೊಲ, ಇನ್ನೊಂದು ಆಟದ ಮೈದಾನ...” ಎಂಬ ಮಾತು ಹೆಣ್ಣುಮಗಳ ಬಾಯಿಂದ ಬಂದಿದೆ. ಕಥೆಗಳಿಗಾಗಿ ಸಾರಾ ತಡಕಾಡುವುದಿಲ್ಲ. ಸಮಾಜದ ಒಂದೊಂದು ನಡೆಯನ್ನೂ ಕಿವಿಗಳ ಮೇಲೆ ಬಿದ್ದ ಹಲವು ಸಂಭಾಷಣೆಗಳನ್ನೂ ಕಣ್ಣ ಮುಂದೆ ನಡೆಯುತ್ತಿರುವ ವ್ಯವಹಾರಗಳನ್ನೂ ಜಾಗ್ರತೆಯಾಗಿ ಅವಲೋಕಿಸಿ ಕಥೆಗೆ ವಸ್ತುವನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಇಲ್ಲಿನ ಕಥೆಗಳು ಹಸಿಬಿಸಿಯಾಗಿ ಸತ್ಯವನ್ನೇ ಹೇಳುತ್ತಿವೆ. ನಾವು ಬದುಕುತ್ತಿರುವ ಪರಿಸರದ ಮೇಲೊಂದು ಪಕ್ಷಿನೋಟ.

Related Books