ಒಂದು ಪ್ರಸಂಗ ಮೂರು ನಾಟಕ

Author : ಚಂದ್ರಶೇಖರ ವಸ್ತ್ರದ

Pages 94

₹ 75.00




Year of Publication: 2017
Published by: ಕ್ಷಮಾ ಪ್ರಕಾಶನ
Address: ʼಬೆಳಗುʼ ಆನಂದಾಶ್ರಮ ರಸ್ತೆ. ಗದಗ- 582101
Phone: 9448677434

Synopsys

ಲೇಖಕ ಚಂದ್ರಶೇಖರ ವಸ್ತ್ರದ ಅವರ ಕಥಾ ಸಂಕಲನ-ʼಒಂದು ಪ್ರಸಂಗ ಮೂರು ನಾಟಕʼ. ‘ಒಂದು ಪ್ರಸಂಗ ಸೃಷ್ಟಿಸಿ ಪೂರಕವಾಗುವಂತೆ ವಚನಗಳನ್ನು ಆಯ್ದು ಸಂಕಲಿಸಿದ ಸಂಕಲನಕಾರರ ಜಾಣ್ಮೆ, ಪ್ರತಿಭೆ, ಪರಿಶ್ರಮ ಅನನ್ಯ. ಪ್ರಸಂಗಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ ಪ್ರಶ್ನೆ ಎರಡು . ಒಂದು ನುಲಿಯ ಚಂದಯ್ಯ ಇನ್ನೊಂದು ಅಜಗಣ್ಣ ಮುಕ್ತಾಯಕ್ಕರ ಪ್ರಸಂಗ. ನುಲಿಯ ಚಂದಯ್ಯ ಇಷ್ಟಲಿಂಗ ಅಗತ್ಯವೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ತಾರ್ಕಿಕವಾಗಿ ಮುನ್ನಡೆವ ಪ್ರಸಂಗವಾದರೆ, ಮುಕ್ತಾಯಕರ ಪ್ರಸಂಗ ಈ ಎಲ್ಲವನ್ನೂ ಮೀರಿದ ಆಧ್ಯಾತ್ಮಿಕ ಅನುಭಾವದ ಪಥದಲ್ಲಿ ಚಲಿಸುವಂಥದ್ದು. ಕೃಷ್ಣಶರ್ಮರ ಕಥೆಗಳಲ್ಲಿ ಒಂದು ಸಹಜವಾದ ಗುಣವಿದೆ. ಹೀಗಾಗಿ, ರಂಗರೂಪಕ್ಕಳವಡಿಸುವುದು ತೊಡಕಿನ ಕೆಲಸವಾಗಲಿಲ್ಲ. ನಾನು ಆಯ್ದುಕೊಂಡ ಎರಡೂ ಕಥೆಗಳ ನಡುವೆ ಕೊಂಡಿಯೊಂದನ್ನು ಸೃಷ್ಟಿಸಿ ʼ ಮಾತನಾಡುವ ಕಲ್ಲುʼ ಎಂಬ ಒಂದೇ ರಂಗರೂಪಕ ರಚಿಸಿದೆ. ಕಥೆಯ ಓಟಕ್ಕೆ ಹೊಂದಿಕೆಯಾಗುವಂತಹ ವಸ್ತುವಿಗೆ ಪೂರಕವಾಗುವಂತೆ ಜನಪದ ಶೈಲಿಯ ಹಾಡುಗಳನ್ನು ಬರೆದು ಅಲ್ಲಲ್ಲಿ ಸೇರಿಸಿದೆ’ ಎನ್ನುವುದು ಲೇಖಕರ ಮಾತು.

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books