7 ರೂಮ್ಸ್ (ಕಥಾ ಸಂಕಲನ)

Author : ವಿದುಷಿ ನಂದಿನಿ ನಾರಾಯಣ್

Pages 100

₹ 100.00
Year of Publication: 2021
Published by: ಸ್ನೇಹ ಬುಕ್ ಹೌಸ್
Address: #165, ಎ, ಶ್ರೀನಗರ ಬಸ್ ಸ್ಟ್ಯಾಂಡ್ ಹತ್ತಿರ, 10ನೇ ಮುಖ್ಯ ರಸ್ತೆ, ಶ್ರೀನಗರ ಬೆಂಗಳೂರು-560050
Phone: 9845031335

Synopsys

‘7 ರೂಮ್ಸ್’ -ಲೇಖಕಿ ವಿದುಷಿ ನಂದಿನಿ ನಾರಾಯಣ್ ಅವರ ಕಥಾ ಸಂಕಲನ. ಫ್ರಾಂಕ್ ಫರ್ಟ್ ಒಡಲಾಳದ ನೈಜ ಕಥನಗಳು ಇಲ್ಲಿವೆ. ಕೃತಿಯ ಬೆನ್ನುಡಿಯಲ್ಲಿ ಸಮಗ್ರವಾಗಿ ಈ ಕತಾನಕದ ಎಳೆಯನ್ನು ಹೀಗೆ ಕಟ್ಟಿಕೊಡಲಾಗಿದೆ; ‘ಬಾಹ್ಯ ಪ್ರಪಂಚದಲ್ಲಿ ನಮ್ಮ ಮುಂದೆ ಕಾಣಲ್ಪಡುವ ಜನಜೀವನದ ಬಣ್ಣಗಳಿಗೂ, ಅವರ ನಾಲ್ಕು ಗೋಡೆಗಳಲ್ಲಿನ ಮಧ್ಯೆ ಬದುಕುವ ಜನ ಜೀವನದ ಬಣ್ಣಕ್ಕೂ ಹೋಲಿಕೆಯೇ ಇರುವುದಿಲ್ಲ. ಹಾಗಿರುವಲ್ಲಿ ಸಾಗರಗಳಿಂದಾಚೆ ಕಣ್ಣಿಗೆಟುಕದ ವಿದೇಶಿಯರ ಜೀವನಗಳ ನೈಜ್ಯತೆಯನ್ನು ಸ್ವತಃ ಅವರೇ ತಮ್ಮ ಬದುಕಿನ ಪುಟಗಳಲ್ಲಿನ ಭಾವಕಥನಗಳನ್ನು ತೆರೆದಿಟ್ಟು , ಹೃದಯಾಳದಿಂದ ನಮ್ಮೊಡನೆ ಹಂಚಿಕೊಂಡಾಗ ಅರ್ಥವಾಗುವುದು ಅವರ ತೆರೆಮರೆಯ ನಿಜವಾದ ಕಥನ. ತಮ್ಮ ಬದುಕಿನ ಬಾಗಿಲಲ್ಲಿ ಕಟ್ಟಿಹ ತೋರಣಗಳ ಹಸಿರ ಮೀರಿ, ಹೃದಯದ ಕೋಣೆಯ ಮೂಲೆಯಲ್ಲಿ ಬಚ್ಚಿಟ್ಟ ಭಾವನೆಗಳನ್ನು ಬಿಚ್ಚಿಟ್ಟವರು ಜರ್ಮನಿ ದೇಶದ ಫ್ರಾಂಕ್ ಫರ್ಟ್ ನಗರದ ”ಮುನ್ಷೆನರ್ ಸ್ಟ್ರಾಸ್” ನಲ್ಲಿರುವ ಮೂರು ನಕ್ಷತ್ರಗಳ (ತ್ರೀ ಸ್ಟಾರ್) ಒಂದು ಹೋಟೆಲ್ ಗೆ ಬಂದು ನೆಲೆಸಿದಂತಹ ಅತಿಥಿಗಳು. ಅವರು ನಡೆದು ಬಂದ ಹಾದಿ, ಕಂಡ ಕನಸುಗಳು, ಬೇರೆ ಯಾವುದೋ ದಿಕ್ಕಿಗೆ ತಿರುಗಿದ ಬದುಕು, ಜರ್ಮನಿಯಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದೆಂಬ ಅವರ ನಂಬಿಕೆ-ಆಸೆಗಳನ್ನು ಮೀರಿ ಮಿಂದು ಬಂದ ಬದುಕು ಮತ್ತೆ ಇಂದು ಅವರ ಬದುಕಿನ ನಿಜ ಸ್ವರೂಪಗಳ ಕಥೆಯನ್ನು ನಗು ನಗುತ್ತಾ, ಕೆಲವರು ಭಾವುಕದಿಂದ, ಕೆಲವರು ನೋವಿನಿಂದ ತೋಡಿಕೊಂಡ ಜರ್ಮನಿಯಲ್ಲಿ ನೆಲೆಸಿಹ ಹೃದಯಗಳು ಹಂಚಿಕೊಂಡ ಜೀವನ ಕಥೆಗಳೇ 7ರೂಮ್ಸ್ ಕಥಾ ಸಂಕಲನ.’

About the Author

ವಿದುಷಿ ನಂದಿನಿ ನಾರಾಯಣ್

ವಿದುಷಿ ನಂದಿನಿ ನಾರಾಯಣ್ ಅವರು ಜರ್ಮನಿಯಲ್ಲಿ ವಾಸವಿದ್ದಾರೆ. ಶಾಸ್ತ್ರೀಯ ನೃತ್ಯ, ನೃತ್ಯಸಂಯೋಜಕಿ, ಲೇಖಕಿ, ಕವಿ, ವೃತ್ತಿಪರ ಕಾರ್ಯನಿರ್ವಾಹಕರಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. , ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ. ರಂಗಮಂಥನದ ಸಂಸ್ಥಾಪಕರಾದ ಅವರಿಗೆ  18ನೇ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ‘ವಿದೂಷಿ’ ಸೇರಿದಂತೆ ನಾಟ್ಯ ಮಯೂರಿ, ನಾಟ್ಯತರಂಗಿಣಿ. ಎಂಬ ಬಿರುದುಗಳು ಲಭಿಸಿವೆ.  ಕೃತಿಗಳು: ಮಳೆಯಲ್ಲಿ ಮಳೆಯಾಗಿ (ಕವನ ಸಂಕಲನ), 7 ರೂಮ್ಸ್ (ಕಥಾ ಸಂಕಲನ) ...

READ MORE

Related Books