ಇಮ್ಮಡಿ ಮಡಿಲು

Author : ಕೆ.ಎನ್. ಗಣೇಶಯ್ಯ

Pages 152

₹ 195.00
Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಇಮ್ಮಡಿ ಮಡಿಲು’ ಕೆ.ಎನ್. ಗಣೇಶಯ್ಯ ಅವರ ಕಥಾಸಂಕಲನ. ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ ವರ್ಷಗಳ ನಂತರ ಮುತ್ತುಸ್ವಾಮಿ ದೀಕ್ಷಿತರ 'ವಾತಾಪಿ ಗಣಪತಿಂ ಭಜೇ' ಕೀರ್ತನೆಗೂ ಸ್ಫೂರ್ತಿಯಾಗುತ್ತದೆ. ಈ ಘಟನೆಗಳ ಸುತ್ತ ಹೆಣೆದ ಚಾರಿತ್ರಿಕ ಕಥೆ 'ಇಮ್ಮಡಿ ಮಡಿಲು'. 

ಜೊತೆಗೆ ಅಕ್ಕಮಹಾದೇವಿಯ ಪ್ರತಿರೂಪದಂತೆ ಬದುಕಿದ ಕಾಶ್ಮೀರದ ಒಬ್ಬ ಶಿವಭಕ್ತಿಯ ಜೀವನವನ್ನು ಅಧ್ಯಯನ ಮಾಡಲು ಸಂಶೋಧನಾ ವಿದ್ಯಾರ್ಥಿ ತಾನು ಕಂಡ ಸತ್ಯವನ್ನು ಹೊರಗೆಡಹಲು ಮುಂದಾದಾಗ, ಅದು ಅವಳ ಜೀವನಕ್ಕೆ ಕಂಟಕವಾಗುತ್ತದೆ. ಆ ಮೂಲಕ ಆಕೆ ಬೇರೊಂದು, 'ಪರ್ಯಾಯ' ಸತ್ಯವನ್ನು ಕಾಣತೊಡಗುತ್ತಾಳೆ. ಶತಮಾನಗಳಿಂದಲೂ ಯೆಹೂದಿಗಳಲ್ಲಿ ದೇಶಪ್ರೇಮ ಮತ್ತು ಹೋರಾಟದ ಸ್ಫೂರ್ತಿ ತುಂಬುತ್ತಿರುವ 'ಮಸಾದ' ಬೆಟ್ಟದ ಮೇಲಿನ ಸಾಮೂಹಿಕ ಹತ್ಯೆಯ ಚಾರಿತ್ರಿಕ ಘಟನೆಯ ಸುತ್ತ ಸಂಶಯದ ಸುಳಿಗಳು ಬೆಳೆದಂತೆ, ಆಕಸ್ಮಿಕವಾಗಿ ದೊರಕಿದ ಮಾಹಿತಿಯಿಂದ ಆ ಚರಿತ್ರೆಯ ಮತ್ತೊಂದು ಮುಖದ ಪರಿಚಯವಾಗುತ್ತದೆ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Related Books