ಒಂದು ಗುಲಾಬಿಯ ಕತೆ

Author : ಕಂ.ಕ. ಮೂರ್ತಿ

Pages 112

₹ 150.00




Year of Publication: 2023
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

‘ಒಂದು ಗುಲಾಬಿಯ ಕತೆ’ ಕಂ.ಕ. ಮೂರ್ತಿ ಅವರ ಕಥಾಸಂಕಲನವಾಗಿದೆ. ಈ ಕೃತಿಯು ಯಾವುದೇ ತಂತ್ರಗಾರಿಕೆ, ಕೌಶಲ್ಯದ ನಿರ್ವಹಣೆ ಗೋಜಿಗೆ ಹೋಗದೆ, ತಮ್ಮ ಪಾಡಿಗೆ ತಾವು ಕೂತು ಕತೆ ಹೇಳುವ ಬಗೆಯದ್ದು. ಕೆಂಡ ಸಂಪಿಗೆ ಕಟ್ಟೆ, ಸಂಪಿಗೆ ಮರದ ಕಟ್ಟೆ, ಮಾದಾಪುರ, ಪ್ರಾದೇಶಿಕತೆಯ ಸಹಜ ಸೊಗಡು, ತೀರಾ ಹತ್ತಿರದಲ್ಲೇ ನೆಡೆದ ಕತೆಗಳು ಎನಿಸುವ ಮಟ್ಟಿಗಿನ ನಿರೂಪಣಾ ಶೈಲಿಯಲ್ಲಿ ಓದಿಸಿಕೊಳ್ಳುತ್ತವೆ. ಅವರು ಓಡಾಡಿದ ಸಂಗತಿಗಳ ಮೂಲಕವೇ ಕಥನವನ್ನು ಹೆಣೆದಿರುವುದರಿಂದ ಅವು ಕೃತಕ ಎನಿಸುವುದಿಲ್ಲ. ಬರಹದ ಬೆಗೆಗಿನ ಉತ್ಸಾಹ, ಹೇಳಬೇಕೆನ್ನುವ ಗುಣಗಳು ಇಲ್ಲಿ ಕಾಣಬಹುದು. ಇನ್ನಷ್ಟು ಗಾಢವಾಗಿ ಕನಲಿಸುವ ಭಾಷೆ, ಹಿಡಿದು ಕಾಡುವ ಕಥಾವಸ್ತು ಮತ್ತು ಕತೆ ಮುಗಿದ ನಂತರವೂ ಮುಗಿಯದ ಗಂಗು, ಜೊತೆಗೆ ಒಂದು ಕತೆಗೂ ಬೇಕಾದ ರೂಪಕ ಗುಣದ ಬಗ್ಗೆ ಅವರು ಮತ್ತಷ್ಟು ಆಲೋಚಿಸಬಹುದು.

About the Author

ಕಂ.ಕ. ಮೂರ್ತಿ

ಕಂ.ಕ ಮೂರ್ತಿ ಅವರು ಪತ್ರಕರ್ತರು. ಗ್ರಾಮೀಣ ಪತ್ರಿಕಾವೃತ್ತಿಯ ಮೂಲಕ ವ್ಯವಸಾಯ ಆರಂಭಿಸಿದರು. 5 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 24 ವರ್ಷಗಳಿಂದ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ರಾಜಕೀಯ ವರದಿಗಾರರು. ಹಾಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸರ್ಕಾರಿ ನಾಮನಿರ್ದೇಶನ ಸದಸ್ಯರಾಗಿದ್ದು, ಹಲವು ಪತ್ರಿಕಾ ಸಂಘಟನೆಗಳಲ್ಲೂ ಕೆಲಸ ಮಾಡಿದ್ದಾರೆ. ಅನೇಕ ಕತೆಗಳು ಮತ್ತು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ನವೋದಯ ಪ್ರಶಸ್ತಿ-ಪುರಸ್ಕಾರಗಳು : ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ‘ಎಚ್. ಎಸ್ ದೊರೆಸ್ವಾಮಿ ವಾರ್ಷಿಕ ಪ್ರಶಸ್ತಿ. ...

READ MORE

Related Books