ಹೆಣ್ಣು ಹದ್ದಿನ ಸ್ವಯಂವರ

Author : ಬಾನು ಮುಷ್ತಾಕ್

Pages 232

₹ 230.00




Year of Publication: 2023
Published by: ಅಭಿರುಚಿ ಪ್ರಕಾಶನ
Address: #386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರ, ಮೈಸೂರು- 9
Phone: 9980560013

Synopsys

‘ಹೆಣ್ಣು ಹದ್ದಿನ ಸ್ವಯಂವರ’ ಲೇಖಕಿ ಬಾನು ಮುಷ್ತಾಕ್ ಅವರ ಕತಾಸಂಕಲನ. ಈ ಕೃತಿಗೆ ಹಿರಿಯ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಸಾಮಾಜಿಕ ಸತ್ಯ ಸಾಂಸಾರಿಕ ಒಳಗುಟ್ಟು ಬಿಚ್ಚಿಡುವಾಗ ಬಾನು ಮೇಡಂರ ನಿಶಿತಮತಿ ಕೊಂಚವೂ ಹಿಂದೆ ಮುಂದೆ ನೋಡದು. ಯಾವ ಮುಲಾಜಿಗು ಒಳಗಾಗದು. ಸೆನ್ಸಾರ್ ಮಾಡಿದ ಅರ್ಧಸತ್ಯ ಅನಾವರಣ ಮಾಡದು. ಅವರದು ಪುಟ್ಟಪೂರ ವರ್ಲ್ಡ್ ಕ್ಲಾಸ್ ಮಾನವತಾವಾದ. ಇದು ಅವರಿಗೂ ಉಳಿದ ಮುಸ್ಲಿಂ ಬರಹಗಾರರಿಗೂ ಇರುವ ಮುಖ್ಯ ವ್ಯತ್ಯಾಸವೆಂದು ಹೇಳಬಹುದು. ಸಾಮಾನ್ಯ ಓದುರಗರಿಗೆ ತಿಳಿನೀರಂತ ಸುಲಭಗನ್ನಡದಲ್ಲಿ ಕತೆ ಹೇಳುವ ಬಾನು ಮುಷ್ತಾಕ್ ಸುಶಿಕ್ಷಿತರು ಬುದ್ಧಿ ಜೀವಿಗಳು ಕಲಾವಿದರನ್ನು ಬದುಕಿನ ಹೊಳೆಯಾಳದ ಕತ್ತಲ ಕಮರಿಗಳಿಗೆ ಕರೆದೊಯ್ದು ದಿಗ್ಬ್ರಾಂತಗೊಳಿಸಬಲ್ಲದು. ಸಂಸ್ಕೃತಿ ಧರ್ಮಗರ್ಭದ ಒಳವಲಯಕ್ಕೂ ದುರ್ಜೀನಿಕ್ಕಿ ಈವರೆಗೆ ಕಂಡು ಕೇಳರಿಯದ ತಳಸತ್ಯಗಳ ಕಥಿಸಿ ಮಾನವಾಂತಃಕರಣ ಮಿಡಿಸಬಲ್ಲರು, ಹೀಗೆ ಸಮುದಾಯದ ನೋವಿಗೆ ನೋಯುವ, ನಲಿವಿಗೆ ನಲಿವ ಜೀವಗಾಥೆಯಂಥ ಕಥಾಲೋಕದ ಜನಕಿ ಬಾನುಮುಷ್ತಾಕ್ ಜನ ಸಂಸ್ಕೃತಿಯ ಮರು ಹುಟ್ಟಿಗಾಗಿ ಪ್ರಾಮಾಣಿಕವಾಗಿ ಆರ್ದ್ರವಾಗಿ ಭಾವಗೀತಾತ್ಮಕವಾಗಿ ತುಡಿಯುತ್ತಿರುವರು’ ಎಂದಿದ್ದಾರೆ.

About the Author

ಬಾನು ಮುಷ್ತಾಕ್
(03 April 1954)

ಹಾಸನದಲ್ಲಿ ನೆಲೆಸಿರುವ ಬಾನು ಮುಷ್ತಾಕ್ ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಕ್ರಿಯಾಶೀಲರಾಗಿದ್ದಾರೆ. ಐದು ಕಥಾ ಸಂಕಲನ ಮತ್ತು ಒಂದು ಪ್ರಬಂಧ ಸಂಕಲನ ಪ್ರಕಟಿಸಿರುವ ಅವರು ಕೌಟುಂಬಿಕ ತಡೆ ಕಾಯ್ದೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ. ಕರಿನಾಗರಗಳು’ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು  ’ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. 1954 ಏಪ್ರಿಲ್ 03 ರಂದು ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದರು. ಅವರು ಬರೆದ 'ಬೆಂಕಿಮಳೆ' ಕತೆ ಹಸೀನ ...

READ MORE

Related Books