ತ್ರಿಕೋಣ ಪ್ರೇಮ ತಂದ ದುರಂತ

Author : ಡಿ.ವಿ. ಗುರುಪ್ರಸಾದ್

Pages 112

₹ 150.00




Year of Publication: 2023
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

‘ತ್ರಿಕೋಣ ಪ್ರೇಮ ತಂದ ದುರಂತ’ ಡಿ.ವಿ ಗುರುಪ್ರಸಾದ್‌ ಅವರ ನೈಜ ಕ್ರೈಂ ಕಥೆಗಳಾಗಿವೆ. ಕೃತಿ ಕುರಿತು ತಿಳಿಸಿರುವ ಗುರುಪ್ರಸಾದ್ ಅವರು 'ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಮಯದಿಂದಲೂ ಅಂದರೆ ಹಲವಾರು ದಶಕಗಳ ಹಿಂದಿನಿಂದಲೂ ವ್ಯಕ್ತಪಡಿಸುತ್ತಿರುವ ಸ್ಪಷ್ಟ ನಿಲುವೇನೆಂದರೆ ಅಪರಾಧ ತಡೆ ಅಪರಾಧ ಪತ್ತೆಗಿಂತ ಬಹುಮುಖ್ಯ ಎನ್ನುವುದನ್ನು ಅಪರಾಧವಾದ ನಂತರ ಅದನ್ನು ಪತ್ತೆ ಮಾಡುವುದಕ್ಕಿಂತ ಅಪರಾಧವಾಗದಂತೆ ಎಚ್ಚರವಹಿಸುವುದೇ ಅತ್ಯಂತ ಉತ್ತಮ ಉಪಾಯ ಎಂದಿದ್ದಾರೆ. ಹಾಗೇ ಈ ಕಾರಣಕ್ಕಾಗಿ ನಾನು ಸಾರ್ವಜನಿಕರಿಗೆ ಬಗೆಬಗೆಯ ಅಪರಾಧಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಬರುತ್ತಿದ್ದೇನೆ. ಇವನ್ನು ಬಿಡಿ ಲೇಖನಗಳ ಮೂಲಕವೂ, ಅಂಕಣಗಳ ಮೂಲಕವೂ, ಪುಸ್ತಕಗಳ ಮೂಲಕವೂ ಹಂಚಿಕೊಳ್ಳುತ್ತಾ ಬಂದಿದ್ದೇನೆ. ಸುಮಾರು ನಾಲ್ಕೂವರೆ ವರ್ಷಗಳಿಂದ ನಾನು 'ವಿಜಯವಾಣಿ' ಪತ್ರಿಕೆಯಲ್ಲಿ ಪ್ರತಿ ಭಾನುವಾರವೂ 'ಆ ಕ್ಷಣ' ಎಂಬ ಹೆಸರಿನ ಅಂಕಣವನ್ನು ಬರೆಯುತ್ತಿದ್ದೇನೆ. ಈ ಅಂಕಣದ ಪ್ರತಿ ಲೇಖನದಲ್ಲೂ ಒಂದು ವಿಶೇಷವಾದ ಹಾಗೂ ಕುತೂಹಲಕರವಾದ ಅಪರಾಧದ ಬಗ್ಗೆ ತಿಳಿಸಿ, ಆ ಅಪರಾಧ ಹೇಗಾಯಿತು, ಅಪರಾಧಿಗಳಿಗೆ ಯಾವ ಶಿಕ್ಷೆಯಾಯಿತು, ಮತ್ತು ಯಾವ ಕ್ಷಣದಲ್ಲಿ ಅಪರಾಧವಾಗುತ್ತದೆ ಮುಂತಾದ ಮಾಹಿತಿಗಳನ್ನು ಓದುಗರಿಗೆ ಕೊಡುತ್ತಾ ಬಂದಿದ್ದೇನೆ. ಪ್ರತಿ ಲೇಖನದ ಕೊನೆಯಲ್ಲಿ ಹಿರಿಯರೊಬ್ಬರ ವಾಣಿಯನ್ನು ಕೊಡುತ್ತಿದ್ದೇನೆ. ಈ ನನ್ನ ಅಂಕಣ ಸಾಕಷ್ಟು ಜನಪ್ರಿಯವಾಗಿದ್ದು, ಪ್ರತಿ ವಾರವೂ ನನಗೆ ಈ ಮೇಲ್ ಮೂಲಕ ಬಹಳಷ್ಟು ಮೆಚ್ಚುಗೆಯ ಪತ್ರಗಳು ಬರುತ್ತಿವೆ ಎಂದಿದ್ದಾರೆ. 

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books