ಸಣ್ಣ ಕತೆ-2015

Author : ವಿನಯಾ ಒಕ್ಕುಂದ

Pages 398

₹ 300.00




Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಜಯಚಾಮರಾಜೇಂದ್ರ ರಸ್ತೆ,ಕನ್ನಡ ಭವನ, ಬೆಂಗಳೂರು – 560 002
Phone: 080-22211730

Synopsys

 ವಿನಯಾ ಒಕ್ಕುಂದ ಸಂಪಾದಿಸಿದ್ದಾರೆ. ಬೇರೆ ಬೇರೆ ಸಂದರ್ಭದಲ್ಲಿ ಹೊರಬಂದಿರುವ ಸಣ್ಣ ಕತೆಗಳನ್ನು ಇಲ್ಲಿ ಒಟ್ಟು ಸೇರಿಸುವ ಪ್ರಯತ್ನ ನಡೆದಿದೆ. ವಿವಿಧ ಸಮುದಾಯ, ಸಂಸ್ಕೃತಿ, ರಾಜಕೀಯ ಸಂದರ್ಭಗಳನ್ನು, ಆಯಾ ಕಾಲಘಟ್ಟದ ತಲ್ಲಣಗಳನ್ನು ಪ್ರತಿಬಿಂಬಿಸುವ ಪ್ರಯತ್ನ ಈ ಕತೆಗಳಲ್ಲಿ ನಾವು ಕಾಣಬಹುದಾಗಿದೆ. 20 ಪುಟಗಳ ಕತೆಗಳಿಂದ ಹಿಡಿದು ನಾಲ್ಕು ಸಾಲುಗಳಲ್ಲಿ ಮುಗಿಯುವ ಕತೆಗಳವರೆಗೆ ಬೇರೆ ಬೇರೆ ರೀತಿಯ ಓದಿನ ಅನುಭವವನ್ನು ನಮಗೆ ನೀಡುತ್ತದೆ. ತಾಯಿ ಕಣ್ಣಿನ ನೋಟ ಮತ್ತು ಕಾಲಜ್ಞಾನಿಯ ನುಡಿ ಬೆಡಗು ಇಲ್ಲಿಯ ಯಶಸ್ವಿ ಕಥೆಗಳ ಲಕ್ಷಣವಾಗಿದೆ. ಇಲ್ಲಿಯ ಕಥೆಗಳ ಮುಖ್ಯಧಾರೆಯಿರುವುದು ಜಾಗತೀಕರಣದ ಮುಕ್ತ ಮಾರುಕಟ್ಟೆಯು ಜನಬದುಕನ್ನು ತಲ್ಲಣಗೊಳಿಸಿರುವ ಬಗೆಯನ್ನು ಅನ್ವೇಷಿಸಿಕೊಳ್ಳುವಲ್ಲಿ, ಜನ ಬದುಕಿನಲ್ಲಿ ಅನಗತ್ಯ ನೆಮ್ಮದಿ ಹಾಳುಗೆಡಹುವ ಜ್ಯೋತಿಷ್ಯ ವಾಸ್ತುಗಳಂತಹ ಮೌಡ್ಯಗಳನ್ನು ಊರೆಂಬೋ ಊರಿನ ಸಾಮಾಜಿಕ ಆರ್ಥಿಕ ರಚನೆಗಳೇ ಬುಡಕಡಿದು ಬದುಕಿನ ಪ್ರಾಣವೇ ಲೂಟಿಯಾಗಿರುವುದನ್ನು ಇಲ್ಲಿನ ಕಥೆಗಳು ಹೇಳುತ್ತವೆ.ಇಲ್ಲಿ ಸುಮಾರು 32 ಕಥೆಗಳಿವೆ.

About the Author

ವಿನಯಾ ಒಕ್ಕುಂದ
(24 October 1968)

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...

READ MORE

Related Books