ಕೊರೋನಾ ಕರುಣಾಜನಕ ಕಥೆಗಳು

Author : ಶರಣು ಹುಲ್ಲೂರು

Pages 96

₹ 100.00
Year of Publication: 2020
Published by: ಸ್ಟ್ಯಾಗ್ ಪಬ್ಲಿಕೇಶನ್
Address: ನಾಗಶೆಟ್ಟಿ ಕೊಪ್ಪ ಹುಬ್ಬಳ್ಳಿ - 23
Phone: 9986821096

Synopsys

ಜಾತಿ, ಮತ, ಅಂತರವನ್ನೂ ಮೀರಿದ ಹಸಿವು ಕೊರೋನಾ ಸೃಷ್ಟಿಸಿದ ಅವಾಂತರದಿಂದ ಏನೆಲ್ಲ ಆವಾಂತರಕ್ಕೆ ಕಾರಣವಾಯಿತು ಎನ್ನುವುದರ ಕರುಣಾಜನಕ ಕತೆಗಳಿಗೆ ಇಲ್ಲಿನ ಪಾತ್ರಗಳು ಸಾಕ್ಷಿಯಾಗಿ ನಿಂತಿವೆ. ಈ ಕತೆಗಳನ್ನು ಓದಿದಂತೆ ನಮ್ಮನ್ನೂ ಸಹ ಆತ್ಮವಿಮರ್ಶೆಗೆ ಒಳಪಡಿಸುವಂತಹವು. ಕೃತಿಗೆ ಬೆನ್ನುಡಿ ಬರೆದಿರುವ ನಟ ನಿನಾಸಂ ಸತೀಶ್ “ಜಗತ್ತಿನಾದ್ಯಂತ ಈ ವೈರಾಣು ಸೃಷ್ಟಿಸಿದ ತಲ್ಲಣಕ್ಕೂ ಮತ್ತು ಭಾರತೀಯ ಸಂದರ್ಭದಲ್ಲಿ ಅದು ಪಡೆದುಕೊಂಡ ಸ್ವರೂಪಕ್ಕೂ ವ್ಯತ್ಯಾಸವಿದೆ. ಅದು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಇಪ್ಪತ್ತಕ್ಕೂ ಹೆಚ್ಚು ನೈಜ ಘಟನೆಗಳನ್ನು ಕಥೆಯ ಚೌಕಟ್ಟಿನಲ್ಲಿ ಹಿಡಿದಿಟ್ಟಿದ್ದಾರೆ ಶರಣು. ಹಾಗಾಗಿ, ಇವು ಅತ್ಯಂತ ಸಾಂದರ್ಭಿಕವಾದ ಬರಹಗಳೆನಿಸುತ್ತವೆ. ಇಲ್ಲಿ ರಾಜಕೀಯ ಮೇಲಾಟವನ್ನು ಹುಡುಕದೇ, ಕೇವಲ ಮನುಷ್ಯತ್ವ ಹುಡುಕಾಟವಿದೆ. ಈ ಕಾರಣಕ್ಕಾಗಿ ಇದೊಂದು ವಿಶೇಷ ಪುಸ್ತಕ ಅನಿಸುತ್ತದೆ” ಎಂದು ಪ್ರಶಂಸಿಸಿದ್ದಾರೆ.

About the Author

ಶರಣು ಹುಲ್ಲೂರು

ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು,  ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ...

READ MORE

Related Books