ಓ ಮನಸೇ

Author : ಸುಪ್ರಿಯಾ ಗೋಪಿನಾಥ್

Pages 140

₹ 120.00
Published by: ರಾಜರ್ಷಿ ಪ್ರಕಾಶನ ಬೆಂಗಳೂರು
Phone: 91642 22202

Synopsys

ಮಾನವೀಯತೆಯನ್ನೇ ಕೇಂದ್ರವಾಗಿಟ್ಟುಕೊಂಡು ಕಾದಂಬರಿ, ಕತೆಗಳಿಂದ ತನ್ನದೇ ಆದ ಓದುಗ ಬಳಗವನ್ನು ಹೊಂದಿದವರು ಸುಪ್ರಿಯಾ ಗೋಪಿನಾಥ್ ಅವರ ಕಥಾ ಸಂಕಲನವಾಗಿದೆ ಇದು. ಮನುಷ್ಯನೊಳಗಿನ ಸಂಕಟ, ತೊಳಲಾಟ, ಆತನ ಅಸಹಾಯಕತೆಯೇ ಹೆಚ್ಚಿನ ಕತೆಗಳಿಗೆ ಕಥಾವಸ್ತು. ಇಲ್ಲಿ ಒಟ್ಟು ಆರು ಕತೆಗಳಿವೆ. ಮೊದಲನೆಯದು ನೀ ಸಾಗರವೋ, ಸಮುದ್ರವೋ ಎನ್ನುವುದು ಪಾಲಕರ ಜೊತೆಗೆ ಮಕ್ಕಳ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ತಾಯಿ ಮಕ್ಕಳ ಸಂಬಂಧ ಎಷ್ಟು ದೊಡ್ಡದು. ಮುಖ್ಯವಾಗಿ ಮಗುವನ್ನು ತಾನು ಹೆರದೇ, ಸಾಕಿದರೂ ಹೆಣ್ಣು ಅದಕ್ಕೆ ತಾಯಿಯ ಸಂಪೂರ್ಣ ವಾತ್ಸಲ್ಯವನ್ನು ಸುರಿಯಬಲ್ಲಳು. ಇಂತಹ ತಾಯಿಯ ವೃದ್ದಾಪ್ಯದಲ್ಲಿ ಮಕ್ಕಳು ಪ್ರೀತಿಯನ್ನು ಪ್ರತಿಯಾಗಿ ಕೊಡಲು ಮೀನಮೇಷ ಎಣಿಸುವ ದುರಂತದ ಕುರಿತಂತೆ ಈ ಕತೆಯಲ್ಲಿ ವಿವರಿಸುತ್ತಾರೆ.  ಮದುವೆಯಾದರೂ ಮಕ್ಕಳಾಗದೆ, ಮುಟ್ಟಿನ ಕುರಿತಂತೆ ಹೇವರಿಕೆಯನ್ನು ತಾಳುತ್ತಾ ಬದುಕುವ ಹೆಣ್ಣಿನ ಬವಣೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಗಂಡಿನ ದರ್ಪ, ಸಂವೇದನಾಹೀನ ಮನಸ್ಸು ಹೆಣ್ಣನ್ನು ಹೇಗೆ ಕುಗ್ಗಿಸಬಹುದು ಎನ್ನುವುದನ್ನು ಈ ಕತೆ ಹೇಳುತ್ತದೆ.  ಗರ್ಭಿಣಿಯೊಬ್ಬಳು ರಿಕ್ಷಾದಲ್ಲಿ ಇನ್ನೇನು ಹೆರಿಗೆಯಾಗುವ ಸ್ಥಿತಿಯಲ್ಲಿದ್ದಾಗ ಈಕೆ ಮುಂದೆ ನಿಂತು ಹೆರಿಗೆ ಮಾಡುತ್ತಾಳೆ. ಆ ಮೇಲೆ ಎಲ್ಲ ಗರ್ಭಿಣಿಯರಿಗೂ ನೆರವಾಗುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ಆದರೆ ಆಧುನಿಕತೆ ವಿಸ್ತಾರವಾದಂತೆ ಈಕೆ ಮೂಲೆಗುಂಪಾಗುತ್ತಾಳೆ. ಈಕೆಯ ಋಣವನ್ನು ಸಮಾಜ ಮರೆಯುತ್ತದೆ, ಹೀಗೆ ಇಲ್ಲಿರುವ ಎಲ್ಲ ಕತೆಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ದೀರ್ಘ ಕಾಲ ಕಾಡುತ್ತದೆ.

Related Books