‘ನನ್ನದೂ ಒಂದಿಷ್ಟು...’

Author : ರಾಜೇಂದ್ರ. ಬಿ.ಶೆಟ್ಟಿ

Pages 168

₹ 160.00




Year of Publication: 2018

Synopsys

ರಾಜೇಂದ್ರ ಬಿ. ಶೆಟ್ಟಿಯವರ ಕರಾಸಂಕಲನ ನನ್ನದೂ ಒಂದಿಷ್ಟು. ನನ್ನದೂ ಒಂದಿಷ್ಟು... ಕಥಾಸಂಕಲನ ಕೃತಿಯು, ಇವರ ಮೊದಲ ಪ್ರಕಟಿತ ಪುಸ್ತಕವಾದ್ದು, 27 ಕಥೆಗಳನ್ನು ಹೊಂದಿದೆ. ಇಲ್ಲಿ ಕತೆಗಾರ ತಮಗೆ ಕಂಡ, ಕೇಳಿದ, ನೋಡಿದ... ಚಿಕ್ಕ ಚಿಕ್ಕ ಘಟನೆಗಳನ್ನೇ ಬಹಳ ಸರಳವಾಗಿ, ಸುಂದರವಾಗಿ, ಸಹಜವಾಗಿ, ನೇರವಾಗಿ ಓದುಗರ ಮನಮುಟ್ಟುವಂತೆ... ವಿವರಿಸಿದ್ದಾರೆ. ಲೇಖಕರಿಗೆ ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಂಡಿರುವ, ಘಟನೆಗಳಿಗೆ ಅಕ್ಷರರೂಪ ಕೊಟ್ಟಿರುವುದನ್ನು ಕಂಡಾಗ "ಇವರಲ್ಲೊಬ್ಬ ಮಾನವೀಯ ವ್ಯಕ್ತಿಯೂ ಇದ್ದಾರೆ "ಎನಿಸದೆ ಇರದು. ಈ ಕೃತಿಯ ಮುನ್ನುಡಿಯಲ್ಲಿ ಕಾಕುಂಜೆ ಕೇಶವ ಭಟ್ಟರು ಅಭಿಪ್ರಾಯ ಪಟ್ಟಂತೆ "ಲೇಖಕರು ಸಾಮಾಜಿಕ ಕಳಕಳಿಯುಳ್ಳ ವಿರಳ ವ್ಯಕ್ತಿತ್ವವನ್ನು ಹೊಂದಿದವರು. ಸಾಮಾಜಿಕ ಮತ್ತು ಪಾರಿಸರಿಕ ಬದುಕಿನ ಆಗುಹೋಗುಗಳಿಗೆ ತ್ವರಿತವಾಗಿ ಸ್ಪಂದಿಸುವ ಅವರ ವಿಶಿಷ್ಟ ಗುಣದ ಕಾರಣವಾಗಿ ಅವರೊಳಗೊಬ್ಬ ಕಥೆಗಾರ ನೆಲೆಸಿರುವುದು ಸಹಜವಾಗಿಯೇ ಇದೆ.ತಮ್ಮ ಅನುಭವಕ್ಕೆ ಬರುವ ಅತಿ ಸಾಮಾನ್ಯ ಸಂಗತಿಗಳಲ್ಲೂ ಮಾನವೀಯ ಗುಣಗಳನ್ನು ಆರಿಸುವ, ಗುರುತಿಸುವ ವಿಶಿಷ್ಟ ಶಕ್ತಿ ರಾಜೇಂದ್ರ ಅವರಲ್ಲಿದೆ ಎಂಬುದನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ"... ....ಎಂದು ಮುಕ್ತವಾಗಿ ಹೇಳಿದ್ದಾರೆ. ಕೆ.ಪಿ. ಸತ್ಯ ನಾರಾಯಣ, ಹಾಸನ ಇವರು ತಮ್ಮಹಿನ್ನುಡಿಯಲ್ಲಿ ಲೇಖಕರಿಗೆ ಶುಭವನ್ನು ಹಾರೈಸಿದ್ದಾರೆ.

About the Author

ರಾಜೇಂದ್ರ. ಬಿ.ಶೆಟ್ಟಿ

ಲೇಖಕ ರಾಜೇಂದ್ರ. ಬಿ.ಶೆಟ್ಟಿ ಅವರು ಉಡುಪಿ ಜಿಲ್ಲೆಯ ಹೆಜಮಾಡಿಯವರು. ಸುರತ್ಕಲ್ಲಿನ ಕೆ. ಆರ್. ಈ. ಸಿ. ಯಲ್ಲಿ( ಈಗಿನ ಎನ್ ಐ ಟಿ ಕೆ ) ಇಂಜಿನಿಯರಿಂಗ್ ಪದವೀಧರರು. ಸುಮಾರು ನಲುವತ್ತು ವರ್ಷ ಬೇರೆ ಬೇರೆ ಊರುಗಳಲ್ಲಿ( ಮುಂಬೈ, ಬೆಂಗಳೂರು, ಜಯಪುರ ಮತ್ತು ಅಸನ್ ಗಾಂವ್ )ಕೆಲಸ ಮಾಡಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಕಥೆ ಬರೆಯಲು ಆರಂಭಿಸಿದ್ದು,ಕಾಲೇಜು ದಿನಗಳಲ್ಲಿ ಅವು ಮುಂಬೈ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕೃತಿಗಳು:  ' ನನ್ನದೂ ಒಂದಿಷ್ಟು...'( 2018), ' ಕಥನ ಕುತೂಹಲ '(2021) ಪ್ರಕಟಗೊಂಡಿದೆ. ...

READ MORE

Related Books