ನೆಲಸಂಪಿಗೆ

Author : ಕೊಳ್ಚಪ್ಪೆ ಗೋವಿಂದ ಭಟ್

Pages 160

₹ 150.00
Year of Publication: 2019
Published by: ಸೃಜನ ಪ್ರಕಾಶನ
Address: ನಂ. 893/D, 3ನೇ ಕ್ರಾಸ್, ಈಸ್ಟರ್ನ್ ಎಕ್ಸ್ಟೆನ್ಷನ್, ನೆಹರು ನಗರ, ಮಂಡ್ಯ - 571401
Phone: 9448930173

Synopsys

ಲೇಖಕ ಕೊಳ್ಚಪ್ಪೆ ಗೋವಿಂದ ಭಟ್ ಅವರ ಕತಾ ಸಂಕಲನ ‘ನೆಲಸಂಪಿಗೆ’. ಈ ಕೃತಿಯಲ್ಲಿ ಒಟ್ಟು ಹದಿನೆಂಟು ಕತೆಗಳಿವೆ. ಕೃತಿಗೆ ಮುನ್ನುಡಿ ಬರೆದ ವಿಶ್ವನಾಥ ಕಾರ್ನಾಡ, ‘ಕತೆಯಂಥ ಬಿಡಿ ಚಿತ್ರಗಳಿಗೆ ಕತೆಗಾರ ಬಳಸುವ ಕೆನ್ವಾಸು ವಿಶಾಲವಾಗಿದೆ. ಪ್ರಕೃತಿ, ಊರು, ಹಳ್ಳಿ, ಕಾಡು, ಎತ್ತರದ ದಿನ್ನೆ, ಗುಡ್ಡಬೆಟ್ಟಗಳ ಆಚೆಗಿನ ವಸತಿ, ಹಳೆಯ ವ್ಯಕ್ತಿಗಳು ಅವರ ಭೇಟಿಯಿಂದ ಹುಟ್ಟಿಕೊಳ್ಳುವ ಮಾನವೀ ಸಂಬಂಧಗಳು, ಅಳಿದುಳಿದ ಪ್ರೇಮಕತೆ ಇತ್ಯಾದಿಗಳ ಸ್ಥಿರ ಚಿತ್ರಗಳು ಆ ವಿಶಾಲ ಕೆನ್ವಾಸಿನಲ್ಲಿ ಮೂಡಿ ಬರಬೇಕು. ಈ ಕೆಲಸವನ್ನು ಗೋವಿಂದ ಭಟ್ಟರು ತುಂಬಾ ಸರಳ, ಆತ್ಮೀಯತೆಯಿಂದ ಮನಮುಟ್ಟುವಂತೆ ಮೂಡಿಸಿದ್ದಾರೆ’ ಎಂದಿದ್ದಾರೆ.

About the Author

ಕೊಳ್ಚಪ್ಪೆ ಗೋವಿಂದ ಭಟ್

ಡಾ ಕೊಳ್ಚಪ್ಪೆ ಗೋವಿಂದ ಭಟ್ ಇವರು ಮೂಲತಃ ಗಡಿನಾಡು ಕಾಸರಗೋಡು ತಾಲೂಕಿನ ಕೊಳ್ಚಪ್ಪೆ ಊರಿನವರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವೀಧರರು.  ಸದ್ಯ ಉದ್ಯೋಗ ನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ. ಬ್ಯಾಂಕಿನಿಂದ ನಿವೃತ್ತರು. ಆದರೆ, ಬ್ಯಾಂಕ್ ವೃತ್ತಿಪರರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕಥೆ, ಕವಿತೆ, ಲೇಖನಗಳು ಪ್ರಕಟವಾಗಿವೆ. ಕರಾಡ ಮಾಸ ಪತ್ರಿಕೆಯಲ್ಲಿ ಎರಡು ವರ್ಷಗಳಿಂದ ಹಣಕಾಸು ಮತ್ತು ಅರ್ಥಶಾಸ್ತ್ರದ ಕುರಿತ ಅಂಕಣಕಾರರು. 2016ರ “ಜೇಮ ಕವಿ ಕೆ.ಎಸ್.ನ ಪುರಸ್ಕಾರ' ಪಡೆದಿದ್ದಾರೆ. ಕೃತಿಗಳು: ಬಿದಿರಿನ ಹೂ (ಕಥಾ ಸಂಕಲನ), ನೆಲಸಂಪಿಗೆ(ಕಥಾ ಸಂಕಲನ) ಮತ್ತು ಜೋಕಾಲಿ (ಕಥಾ ಸಂಕಲನ) ...

READ MORE

Related Books